Thursday, 12th December 2024

ಪುಣ್ಯ ಸ್ಮರಣೆ, ದಿವ್ಯಾಂಗರಿಗೆ ಅಭಿನಂದನೆ ಸಮಾರಂಭ

ಚಿಕ್ಕನಾಯಕನಹಳ್ಳಿ : ಆರೋಗ್ಯ ಕಿರಿಯ ಸಹಾಯಕಿ ವಿಮಲಮ್ಮನವರ ಎರಡನೇ ವರ್ಷದ ಪುಣ್ಯ ಸ್ಮರಣೆ ಹಾಗು ದಿವ್ಯಾಂಗರಿಗೆ ಅಭಿನಂದನೆ ಸಮಾರಂಭ ಪಟ್ಟಣದ ಕೃಷ್ಣೇ ಗೌಡರ ನಿವಾಸದಲ್ಲಿ ನಡೆಯಿತು.

ವಿಮಲಮ್ಮನವರ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣ ಹಾಗು ಅವಿಸ್ಮರಣೀಯವಾಗಿ ನಡೆಸಿದ ಕುಟುಂಬ ಅವರ ನೆನಪಿನಲ್ಲಿ ಐದು ಜನ ದಿವ್ಯಾಂಗರಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಿ ಗೌರವಿಸಿತು. ಪ್ರೀತಿಯ ಮಡದಿಯನ್ನು ಕಳೆದುಕೊಂಡು ನಲುಗಿದ್ದ ಕೃಷ್ಣೇಗೌಡರು ಇಂದು ತುಂಭಾ ಭಾವುಕರಾದಂತೆ ಕಂಡರು. ಮುಂದಿನ ಬಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಚಿಂದಿ ಹಾಯುವ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತೇನೆಂದು ಇದೇ ವೇಳೆ ಘೋಷಿಸಿದರು.

ಸಮಾರಂಭದಲ್ಲಿ ಪುತ್ರಿ ಮಾನಸ, ಮಾಜಿ ಶಾಸಕ ಲಕ್ಕಪ್ಪ, ಕ್ಯಾ.ಸೋಮಶೇಖರ್, ಕಸಾಪ ಅಧ್ಯಕ್ಷ ರವಿಕುಮಾರ್, ಕನ್ನಡ ಸಂಘದ ಅಧ್ಯಕ್ಷ ರೇಣುಕಸ್ವಾಮಿ, ಪುರಸಭಾ ನಾಮಿನಿ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಮುಖಂಡರಾದ ಮಲ್ಲಿಕಣ್ಣ, ಗಂಗಾಧರ್ ಮಗ್ಗದಮನೆ, ಮೆಡಿಕಲ್ ಬಸವರಾಜ್, ಜಾಕೀರ್, ಇದ್ದರು.