Thursday, 12th December 2024

ಬೆಂಗಳೂರು ಮೂಲಕ ಎಸ್‌ಎಂಎಲ್‌ ನಿಂದ ಮಹತ್ವಾಕಾಂಕ್ಷಿ ಭಾರತ್‌ ಜಿಪಿಟಿ ಸಂಶೋಧನೆಗೆ ಹೂಡಿಕೆ

– ದೇಶದ ಡಿಜಿಟಲ್‌ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ಮುಂದಾಗಿರುವ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಐಐಟಿಗಳು
– ಬಳ್ಳಾರಿ ಮೂಲಕ ಎಸ್‌ಎಂಎಲ್‌ ಸಂಸ್ಥೆಯ ಸಿಇಓ ಡಾ. ವಿಷ್ಣುವರ್ಧನ್ ಅವರಿಂದ ಈ ಮಹತ್ವಾಕಾಂಕ್ಷಿ ಯೋಜನೆಯ ಪ್ರಾಯೋಜಕತ್ವ

ಬೆಂಗಳೂರು: ಸಂವಹನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾದ ಚಾಟ್‌ಜಿಪಿಟಿಯ ಉಪಯೋಗ ಎಲ್ಲರಿಗೂ ತಿಳಿದ ವಿಷಯವೇ. ಬಹುತೇಕ ಇಂಗ್ಲೀಷ್‌ ಭಾಷೆಯಲ್ಲಿ ಉಪಯೋಗಿಸಬಹುದಾದಂತಹ ತಂತ್ರಜ್ಞಾನವನ್ನ ನಮ್ಮ ದೇಶದ ಬಹುಭಾಷೆಗಳಿಗೆ ಅಳವಡಿಸುವಂತಹ ಮಹತ್ವಾ ಕಾಂಕ್ಷಿ ಯೋಜನೆ ಭಾರತ್‌ ಜಿಪಿಟಿಗೆ ಟೆಲಿಕಾಂ ದೈತ್ಯ ಜಿಯೋ ಕೈಜೋಡಿಸಿರುವುದು ಎಲ್ಲರಿಗೂ ತಿಳಿದ ವಿಷಯವೇ.

ಈ ಮಹತ್ವಾಕಾಂಕ್ಷಿ ಯೋಜನೆಯನ್ನ ಅನುಷ್ಠಾನಗೊಳಿಸುತ್ತಿರುವ ಒಕ್ಕೂಟಕ್ಕೆ (Consortium) ಬೆಂಗಳೂರು ಮೂಲದ ಎಸ್‌ಎಂಎಲ್ (ಸೀತಾ ಮಹಾ ಲಕ್ಷ್ಮಿ ಹೆಲ್ತ್‌ಕೇರ್) ಪ್ರೈವೇಟ್ ಲಿಮಿಟೆಡ್ (SML – SEETHA MAHALAXMI HEALTH CARE PVT LTD) ಪ್ರಾಯೋಜಕತ್ತ ನೀಡಿದೆ.

ಬೆಂಗಳೂರು ಮೂಲದ ಎಸ್‌ಎಂಎಲ್ (ಸೀತಾ ಮಹಾಲಕ್ಷ್ಮಿ ಹೆಲ್ತ್‌ಕೇರ್) ಪ್ರೈವೇಟ್ ಲಿಮಿಟೆಡ್ ಈಗ ಭಾರತ ಮತ್ತು ಬೃಹತ್ ಭಾಷಾ ಪ್ರತಿಷ್ಠಾನದ ಮಾದರಿಗಳ ರಚನೆಯಲ್ಲಿ ಕೆಲಸ ಮಾಡುತ್ತಿರುವ ಭಾರತ್‌ಜಿಪಿಟಿ ಒಕ್ಕೂಟದ ಸಂಶೋಧನೆಗೆ ಹೂಡಿಕೆ ಮಾಡಿರುವುದು ಭಾರತದ ಕೃತಕ ಬುದ್ಧಿಮತ್ತೆ ಕ್ಷೇತ್ರದ ಮಹತ್ವದ ಮೈಲಿಗಲ್ಲುಗಳಲ್ಲೊಂದಾಗಿದೆ.

ಮೇ 2022 ರಲ್ಲಿ ಪ್ರೊ.ಗಣೇಶ್ ಮತ್ತು ಡಾ.ವಿಷ್ಣುವರ್ಧನ್ ಅವರು ಬೋಸ್ಟನ್‌ನ ಎಂಐಟಿಯಲ್ಲಿ ಭೇಟಿಯಾದಾಗ ಭಾರತದ ಜನರಿಗೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ನ ಭಾಷಾ ಮಾದರಿಯಾದ ಭಾರತ್‌ಜಿಪಿಟಿ ರಚಿಸುವಂತಹ ನಿರ್ಧಾರವನ್ನು ಕೈಗೊಳ್ಳಲಾಯಿತು.

ಭಾರತ ದೇಶದಲ್ಲಿರುವ ವಿಶಾಲವಾದ ಜನಸಂಖ್ಯೆಯ ಹೊರತಾಗಿಯೂ, ಭಾರತೀಯ ಭಾಷೆಗಳಲ್ಲಿ ಡಿಜಿಟಲ್ ಪ್ರಾತಿನಿಧ್ಯವು ಕಡಿಮೆಯಾಗಿದೆ, ಇದು ಕಲಿಕೆ ಮತ್ತು ಸಂವಹನದ ಅಂತರವನ್ನು ಸೃಷ್ಟಿಸಿತ್ತು. ಭಾರತ್‌ಜಿಪಿಟಿಯ ಮೂಲಕ ನಾವು ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದ್ದೇವೆ. ಅತಿ ಶೀಘ್ರದಲ್ಲೇ ಭಾರತ್‌ ಜಿಪಿಟಿ ಒಕ್ಕೂಟದಿಂದ ಮೊದಲ ಮಾದರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು SML ಪ್ರೈವೇಟ್ ಲಿಮಿಟೆಡ್‌ನ ಸಿಇಇ ಡಾ. ವಿಷ್ಣುವರ್ಧನ್ ಎಂದು ಹೇಳಿದ್ದಾರೆ.