Saturday, 23rd November 2024

MLA S N Subbareddy: ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟಿಸಿದ ಸುಬ್ಬಾರೆಡ್ಡಿ

ಬಾಗೇಪಲ್ಲಿ: ವಿದ್ಯಾರ್ಥಿಗಳು ಸರ್ಕಾರ ನಿರ್ಮಿಸಿರುವ ಹಾಸ್ಟೆಲ್‌ಗಳ ಪ್ರಯೋಜನ ಪಡೆದುಕೊಂಡು ಚನ್ನಾಗಿ ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ತಂದೆ–ತಾಯಿ ಹಾಗೂ ತಮಗೆ ಕಲಿಸಿದ ಗುರುಗಳಿಗೆ ಗೌರವ ತರಬೇಕು. ಆಗ ಮಾತ್ರ, ಸರ್ಕಾರ ಒದಗಿಸುತ್ತಿರುವ ಈ ಸೌಲಭ್ಯಗಳಿಗೆ ಸಾರ್ಥಕತೆ ಬರಲಿದೆ’ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ (MLA S N Subbareddy) ಹೇಳಿದರು.

ಅವರು ಬಾಗೇಪಲ್ಲಿ ಪಟ್ಟಣದ ೬ನೇ ವಾರ್ಡ್ ಕೃಷ್ಣಾರೆಡ್ಡಿ ಖಾಸಗಿ ಕಟ್ಟಡದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಿಧ್ಯಾರ್ಥಿ ನಿಲಯ ಟೇಪ್ ಕಟ್ ಮಾಡುವ ಹಾಗೂ ದೇವರಾಜ್ ಅರಸ್ ಚಿತ್ರಪಟಕ್ಕ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಿದರು.

ತದನಂತರ ಮಾತನಾಡಿ ಅತ್ಯಂತ ಸುಸಜ್ಜಿತವಾಗಿ ಮೂಲಭೂತ ಸೌಕರ್ಯಗಳೊಂದಿಗೆ ಕೃಷ್ಣಾರೆಡ್ಡಿ ಖಾಸಗಿ ಕಟ್ಟಡದಲ್ಲಿ ನಿರ್ಮಾಣಗೊಂಡ ವಿದ್ಯಾರ್ಥಿನಿಲಯ ಪಟ್ಟಣದ ಹೃದಯ ಭಾಗದಲ್ಲಿದ್ದು, ವಿದ್ಯಾರ್ಥಿನಿಯರಿಗೆ ವರದಾನವಾಗಿದೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶಾಸಕ ಹಾಗೂ ಪುರಸಭೆ ಸದಸ್ಯರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಶಿವಪ್ಪ, ಕೃಷ್ಣಾರೆಡ್ಡಿ, ರೇಷ್ಮಾ ಬಾನು, ಲಕ್ಷ್ಮೀ ನರಸಿಂಹಪ್ಪ, ಮಂಜುನಾಥ್ ರೆಡ್ಡಿ, ವಿದ್ಯಾರ್ಥಿ ನಿಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.