Thursday, 12th December 2024

gubbi: ಕಡೆಯ ಶ್ರಾವಣ ಶನಿವಾರ ಶನಿದೇವರಿಗೆ ವಿಶೇಷ ಪೂಜೆ

gubbi

ಗುಬ್ಬಿ: ಪಟ್ಟಣದ  ಕೆಇಬಿ ಮುಂಭಾಗ ಎನ್ ಹೆಚ್ 206 ರಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ಶನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ದೇವಾಲಯವು ತಳಿರು ತೋರಣ ಹೂಗಳಿಂದ ಅಲಂಕೃತಗೊಂಡು ಪೂಜಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸ್ವಾಮಿಯ ಕೃಪೆಗೆ ಪತ್ರರಾಗಿ ಪ್ರಸಾದ ಪಡೆದು ತಮ್ಮ ಭಕ್ತಿಯನ್ನು ಅರ್ಪಿಸಿದರು. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ  ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಭವ್ಯ ಪರಂಪರೆಯ ರೂಪದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರವು ಅತ್ಯಂತ ವೈಭವದಿಂದ ನಡಯಿತು.
ದೇವಾಲಯದ ಪ್ರಧಾನ ಅರ್ಚಕರಾದ ನಿರಂಜನ್ ಮಾತನಾಡಿ ಈ ದೇವಸ್ಥಾನದ ವಿಶೇಷವೇನೆಂದರೆ ದಂಪತಿಗಳ ಸಮೇತ ನವಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ,ಬಲಮುರಿ ಗಣಪತಿ, ಷಣ್ಮುಖ ಸ್ವಾಮಿಯವರ ಪ್ರತಿಷ್ಠಾಪನೆಯಾಗಿದೆ. ಇವರುಗಳ ದರ್ಶನವನ್ನು ಸ್ವಾಮಿಯ ಆಶೀರ್ವಾದ ಪಡೆಯಲು ಭಕ್ತರಿಗೆ  ಅವಕಾಶ ಮಾಡಲಾಗಿದೆ ಎಂದರು. ಪೂಜಾ ವ್ಯವಸ್ಥೆಯನ್ನು ಜಯ ಲಕ್ಷ್ಮಮ್ಮ, ದಿವಂಗತ ಚಿಕ್ಕನರಸಯ್ಯನವರ ಕುಟುಂಬದಿಂದ ಅದ್ದೂರಿಯಾಗಿ ವ್ಯವಸ್ಥೆ ಮಾಡಲಾಗಿ ಮಾಡಿತ್ತು.