Sunday, 27th October 2024

ಜುಲೈ.3ರಂದು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ಪರೀಕ್ಷೆ 

ತುಮಕೂರು: ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರ ಬಯಸುವ ಆಕಾಂಕ್ಷಿ ಗಳಿಗೆ ವಿದ್ಯಾರ್ಥಿವೇತನ ಪರೀಕ್ಷೆಯನ್ನು ಜುಲೈ 3 ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಡಾ. ಎಂ.ಆರ್.ಹುಲಿ ನಾಯ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗದಲ್ಲಿ ಒಟ್ಟಾರೆಯಾಗಿ ಶೇ.45 ರಷ್ಟು ಅಂಕಗಳಿಸಿರುವ ಯಾವುದೇ ಕೆಟೆಗರಿಗೆ ಸೇರಿರುವ ವಿದ್ಯಾರ್ಥಿಗಳು ಹಾಗೂ ಶೇಕಡಾ 40 ರಷ್ಟು ಅಂಕಗಳಿಸಿರುವ ಪ.ಜಾತಿ, ಪ.ಪಂಗಡ ಮತ್ತು ಕೆಟೆಗರಿ-1 ಗೆ ಸೇರಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಸಿ.ಇ.ಟಿ. ಬರೆದಿರುವ ಅಥವಾ ಇನ್ನೂ ಉತ್ತಮವಾದ ಎಂಜಿನಿ ಯರಿಂಗ್ ಬ್ರಾಂಚ್‌ಗಳನ್ನು ಪಡೆಯಲಿಚ್ಚಿಸುವ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಬಹು ದಾಗಿದ್ದು ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ತಾವು ಪಡೆದು ಕೊಳ್ಳುವ ರ‍್ಯಾಂಕಿಂಗ್‌ಗೆ ಅನುಗುಣವಾಗಿ ಗರಿಷ್ಠ 2.50 ಲಕ್ಷದಿಂದ ಕನಿಷ್ಠ 20 ಸಾವಿರ ರೂಗಳವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದರು.
ಶ್ರೀದೇವಿ ಛಾರಿಟಬಲ್ ಟ್ರಸ್ಟ್  ಮಾನವ ಸಂಪನ್ಮೂಲ ನಿರ್ದೇಶಕರಾದ ಎಂ.ಎಸ್.ಪಾಟೀಲ್ ಮಾತನಾಡಿ, ಕಾಲೇಜಿನಲ್ಲಿ ಪ್ರವೇಶಕ್ಕೆ ಏಳು ಎಂಜಿನಿಯರಿಂಗ್ ಬ್ರಾಂಚ್‌ಗಳಾದ ಕಂಪ್ಯೂ ಟರ್ ಸೈನ್ಸ್, ಇನ್‌ರ್ಫಾಮೇಷನ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿ ಕೇಷನ್, ಸಿವಿಲ್, ಮೈಕ್ಯಾನಿಕಲ್ ಮತ್ತು ಇಲೆಕ್ಟಿçಕಲ್ ವಿಭಾಗಗಳು ಲಭ್ಯವಿದ್ದು ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆಯುವ ಮೊದಲನೇ 10 ರ‍್ಯಾಂಕ್‌ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗುವುದು. ಕಾಲೇಜಿನ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆದ ವಿದ್ಯಾರ್ಥಿ ಗಳು ರಾಜ್ಯ ಸರಕಾರದ ಸಿ.ಇ.ಟಿ. ಶುಲ್ಕದಷ್ಟೆ ಮೊತ್ತವನ್ನು ಭರಿಸಿ ಲಭ್ಯವಿರುವ ಸೀಟುಗಳನ್ನು ಇಚ್ಚಿಸಿದ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪಡೆದುಕೊಳ್ಳಬಹುದು ಎಂದರು.
ಪ್ರಾಂಶುಪಾಲ ಡಾ. ನರೇಂದ್ರ ವಿಶ್ವನಾಥ್ ಮಾತನಾಡಿ, ಕಳೆದ ವರ್ಷ ಸುಮಾರು 500 ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನದ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಮುಖಾಂತರ ಸುಮಾರು 100 ವಿದ್ಯಾರ್ಥಿಗಳು 16 ಲಕ್ಷ ರೂ ಗಳಷ್ಟು ವಿದ್ಯಾರ್ಥಿ ವೇತನ ವನ್ನು ಪ್ರತೀ ವರ್ಷ ಪಡೆಯುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಕೆ.ಎಸ್.ರಾಮಕೃಷ್ಣ ಮಾತನಾಡಿ, ಬಡಜನರಿಗೆ, ದುರ್ಬಲರಿಗೆ, ಅರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಅನುಕೂಲವಾಗುವಂತೆ ಈ ವಿದ್ಯಾರ್ಥಿ ವೇತನವನ್ನು ಏರ್ಪಡಿಸಲಾಗಿದೆ. ನಮ್ಮ ಕಾಲೇಜಿನಲ್ಲಿ ಉತ್ತಮವಾದ ಶೈಕ್ಷಣಿಕ ವಾತಾವರಣವಿದೆ ಎಂದರು.
ಹೆಚ್ಚಿನ ಮಾಹಿತಿಗೆ ಕಾಲೇಜಿನ ಕಚೇರಿಯ ಮೊಬೈಲ್ ಸಂಖ್ಯೆಗಳಾದ 96866 87361 ಮತ್ತು 99649 61524ಕ್ಕೆ ಸಂಪರ್ಕಿಸಬಹು ದಾಗಿದೆ. ಡೀನ್ ಅಕಾಡೆಮಿಕ್ ಡಾ.ಎನ್.ಚಂದ್ರಶೇಖರ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ- ಬೋಧಕೇ ತರ ವರ್ಗದವರು ಇದ್ದರು.