Thursday, 12th December 2024

ಡಿಸೆಂಬರ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ : ಶಾಸಕ ಎಸ್.ಆರ್.ಶ್ರೀನಿವಾಸ್

ತುಮಕೂರು: ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಿದ್ದರಲ್ಲಿ ಹೊಸದೇನಿಲ್ಲ. ಉಚ್ಚಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ. ಡಿಸೆಂಬರ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಈ ಬೆಳವಣಿಗೆ ಮುಜುಗರ ಅಥವಾ ಅವಮಾನ ಎಂದು ನನಗೆ ಅನಿಸೋದಿಲ್ಲ. ಅವರು ನನ್ನ ವಿರುದ್ಧ ಅಭ್ಯರ್ಥಿ ಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ. ಡಿಸೆಂಬರ್‌ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿರುಗೇಟು ಕೊಟ್ಟರು. ವಿಪ್ ಉಲ್ಲಂಘನೆಯಾಗಿದ್ದರೆ ಸದನದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಜೆಡಿಎಸ್ ವರಿಷ್ಠರಿಗೆ ಗುಬ್ಬಿ ಶಾಸಕ ಸವಾಲು ಹಾಕಿದರು.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಜೂ.22ರಂದು  ಉಚ್ಛಾಟನೆ ಮಾಡಲಾಗಿದೆ.