Wednesday, 11th December 2024

ಜನರ ಆಶೀರ್ವಾದ ನನ್ನ ಮೇಲಿದೆ: ಎಸ್ ಆರ್ ಶ್ರೀನಿವಾಸ್

ಗುಬ್ಬಿ: ಪ್ರತಿ ಗ್ರಾಮದಲ್ಲಿಯೂ ಸಹ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಜನರ ಆಶೀರ್ವಾದ ನನ್ನ ಮೇಲಿದೆ  ಎಂದು ಕಾಂಗ್ರೆಸ್ ಅಭ್ಯರ್ಥಿ  ಮಾಜಿ ಸಚಿವ  ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಇರಕಸಂದ್ರ ಪಂಚಾಯತಿ ವ್ಯಾಪ್ತಿಯ   ಮನೆಮನೆ ಪ್ರಚಾರ ಕೈಗೊಂಡು ಮಾತನಾಡಿದ ಅವರು ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದಾಗಿಂದಲೂ ಜೊತೆಗಿರುವ ಎಲ್ಲಾ ಕಾರ್ಯಕರ್ತ ಬಂಧುಗಳು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಪ್ರತಿ ಗ್ರಾಮ ದಲ್ಲಿಯೂ ಸಹ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಮತ ವಿಲ್ಲ. ಒಂದು ವೇಳೆ ಇದ್ದರೂ ಸಹ ರಾಜ್ಯ ಹಾಗೂ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಸರಿಪಡಿಸುವ ಭರವಸೆ ಇದೆ.
ಬಿಜೆಪಿ  ಪಕ್ಷದ ದುರಾಡಳಿತದಿಂದ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಜನರ ಮನಸ್ಸಿನಿಂದ ದೂರ ಉಳಿದಿದೆ    ಇದುವರೆಗೂ ಅಭ್ಯರ್ಥಿಯನ್ನು ಘೋಷಿಸದೆ ಇರುವುದಕ್ಕೆ ಆ ಪಕ್ಷದಲ್ಲಿರುವ ಭಿನ್ನಮತವೇ ಕಾರಣ   ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜನರ ಆಶಾದಾಯಕ  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೋಟಿ ಲಿಂಗಣ್ಣ, ಶಿವಾಜಿ ರಾವ್, ಕೃಷ್ಣ ಜಿ ರಾವ್, ಚೇಳೂರು ಶಿವನಂಜಪ್ಪ, ಕೊಡೆಯಾಲ ಮಾದೇವ್, ಸಿದ್ದಪ್ಪ, ರಾಮಕೃಷ್ಣಪ್ಪ, ಮೋಹನ್, ರಂಗಧಾಮ್,  ಶಿವರಾಜು, ರಮೇಶ್, ಸಂದೀಪ್, ಮೈಲಾರಪ್ಪ, ಶಂಕ್ರಪ್ಪ,  ದಲಿತ್ ಗಂಗಣ್ಣ, ರಂಗನಾಥ್, ಹಾಗೂ ಕಾರ್ಯಕರ್ತರು ಹಾಜರಿದ್ದರು.