Saturday, 26th October 2024

ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣಕ್ಕೆ ಅರ್ಥಬರಬೇಕಾದರೆ  ಬಯಲು ಸೀಮೆ ಕೆರೆ ಅಭಿವೃದ್ಧಿ ಪಡಿಸಿ ಶುದ್ಧನೀರು ಹರಿಸಿ

ಶ್ವಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಪ್ರಧಾನಿಗೆ ಆಗ್ರಹ

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳುತ್ತಿರುವ ಕೆಂಪೇಗೌಡರ ಪ್ರಗತಿ ಪ್ರತಿಮೆ ಕಾರ್ಯವು ಸಾರ್ಥಕವಾಗಬೇಕಾದರೆ ಕೆಂಪೇಗೌಡರ ಆಶಯದಂತೆ ಬಯಲು ಸೀಮೆಗಳ ೫೬೦೫ ಕೆರೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಕುಡಿಯಲು ಶುದ್ಧನೀರು ಹರಿಸಬೇಕಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯರೆಡ್ಡಿ ಪ್ರಧಾನಿಗಳನ್ನು ಆಗ್ರಹಿಸಿದ್ದಾರೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತಾಡಿದರು. ದೇಶಕ್ಕೆ ಸ್ವಾತಂತ್ರö್ಯ ಬಂದು ೭೫ ವರ್ಷ ಕಳೆದು ಸ್ವಾತಂತ್ರö್ಯ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರೂ ಕೂಡ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಕುಡಿಯಲು ಹಾಗೂ ವ್ಯವಸಾಯಕ್ಕಾಗಿ ಅಂತರ್ಜಲವನ್ನೇ ಅವಲಂಬಿಸಿರುವ ನಾಗರಿಕರ ಬದುಕು ವರ್ಷಗಳು ಕಳೆದಂತೆ ದುಸ್ಥರವಾಗುತ್ತಿದೆ. ಸಹನೆ ಕಳೆದುಕೊಂಡ ಜನರು ದಂಗೆ ಯೇಳುವ ಮೊದಲು ಕೆರೆಗಳ ಅಭಿವೃದ್ದಿ ಪಡಿಸುವ ಜತೆಗೆ ಕುಡಿಯಲು ಶುದ್ಧನೀರು ಹರಿಸುವಂತೆ ಪ್ರಧಾನಿಗಳೇ ಸರಕಾರಕ್ಕೆ ತಿಳಿಹೇಳಲಿ ಎಂದು ಆಗ್ರಹಿಸಿದರು.

ಪ್ರಧಾನಿ ಪ್ರವೇಶಿಸಲಿ
ಎತ್ತಿನ ಹೊಳೆ ಯೋಜನೆ ಆರಂಭವಾಗಿ ಹತ್ತು ವರ್ಷಗಳು ಕಳೆದು ೧೩೦೦೦ ಕೋಟಿ ಗಳಷ್ಟು ಬೃಹತ್ ಮೊತ್ತದ ಹಣ ಖರ್ಚು ಮಾಡಿದ್ದರೂ ಸಹ ಈವರೆಗೆ ಒಂದು ಹನಿ ನೀರನ್ನೂ ಹರಿಸಲಾಗಲಿಲ್ಲ. ವಿಪರ್ಯಾಸ ವೆಂದರೆ ಪ್ರಾರಂಭದಲ್ಲಿ ರೂ. ೮೦೦೦ ಕೋಟಿಗಳಾಗಿದ್ದ ಯೋಜನಾ ವೆಚ್ಚ ಕ್ರಮೇಣ ರೂ. ೨೪,೦೦೦ ಕೋಟಿಗಳಿಗೇರಿದೆ. ಈ ವೆಚ್ಚ ಮತ್ತಷ್ಟು ಹೆಚ್ಚಾದರೂ ಆಶ್ಚರ್ಯ ಪಡಬೇಕಾಗಿಲ್ಲ.

ಕನಿಷ್ಟಪಕ್ಷ ಈಗಲಾದರೂ ಪ್ರಧಾನಿಗಳು ಮಧ್ಯಪ್ರವೇಶಿಸಿ ಎತ್ತಿನಹೊಳೆ ಯೋಜನೆಯ ಜಲವಿಜ್ಞಾನದ ಮರು ಅಧ್ಯಯನ ಮಾಡುವಂತೆ ಬಗ್ಗೆ ಕೇಂದ್ರೀಯ ಜಲ ಆಯೋಗಕ್ಕೆ ಆದೇಶಿಸಬೇಕು. ಇಲ್ಲವಾದಲ್ಲಿ ಮಗದಷ್ಟು ಭಾರೀ ಪ್ರಮಾಣದ ಶ್ರೀ ಸಾಮಾನ್ಯರ ತೆರಿಗೆ ಹಣ ಭ್ರಷ್ಟರ ಖಾತೆಗಳಿಗೆ ಸೇರಲಿದೆ.ಎತ್ತಿನಹೊಳೆ ಯೋಜನೆಯೆಂಬುದು ರಾಜಕಾರಣಿಗಳ ಎಟಿಎಂನ0ತಾ ಗಿದ್ದು ಪ್ರಧಾನಿಗಳು ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕಿದೆ ಎಂದರು.

೩ನೇ ಹಂತದ ಶುದ್ಧೀಕರಣ ಆಗಲಿ
ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಆರೋಗ್ಯ ಮತ್ತು ಪರಿಸರಾತ್ಮಕ ಎಂಜಿನಿಯರಿAಗ್ ಸಂಸ್ಥೆಯ ೨೦೧೩ ರ ಮಾರ್ಗಸೂಚಿಗಳ ಪ್ರಕಾರ ಮಹಾನಗರಗಳ ತ್ಯಾಜ್ಯ ನೀರನ್ನು ಖಡ್ಡಾಯವಾಗಿ ಮೂರನೇ ಹಂತದಲ್ಲಿ ಸಂಸ್ಕರಿಸಿ ಮರುಬಳಸಿಕೊಳ್ಳಬೇಕೆಂಬ ಮಾನದಂಡಗಳನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದ್ದಾರೆ. ಆದ್ದರಿಂದ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಯಥಾವತ್ತಾಗಿ ಪಾಲಿಸಲೇಬೇಕೆಂದು ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಬೇಕಿದೆ ಎಂದು ಕೋರಿದರು.

ಎರಡು ಹಂತಗಳಲ್ಲಿ ಶುದ್ಧೀಕರಿಸಿದ ಬೆಂಗಳೂರು ಮಹಾನಗರದ ತ್ಯಾಜ್ಯ ನೀರನ್ನು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿರುವ ಆಯ್ದ ಕೆರೆಗಳಿಗೆ ಹರಿಸುವ ಎಚ್.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ಯೋಜನೆಗಳು ಕಾರ್ಯಗತವಾಗಿದ್ದು ಇದಾಗಲೇ ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಅರೆ ಸಂಸ್ಕರಿತ ನೀರನ್ನು ಹರಿಸುತ್ತಿರುವುದರಿಂದ ನಮ್ಮ ಸಾಂಪ್ರದಾಯಿಕ ಜಲ ಮೂಲಗಳೊಂದಿಗೆ ಕುಡಿಯುವ ನೀರಿನ ಏಕೈಕ ಮೂಲವಾದ ಅಂತರ್ಜಲವೂ ವಿಷಮಯವಾಗುವು ದೆಂದು ವಿಜ್ಞಾನಿಗಳು ಈಗಾಗಲೇ ತಿಳಿಸಿದ್ದಾರೆ.

ಜೊತೆಗೆ ಕಲುಷಿತ ನೀರಿನಿಂದ ಬೆಳೆದ ಕೃಷಿ ಉತ್ಪನ್ನಗಳಲ್ಲಿ ಅಪಾಯಕಾರಿ ರಸಾಯನಿಕ ಅಂಶಗಳು ಕಂಡು ಬಂದಿದ್ದು, ಅವುಗಳನ್ನು ಸೇವಿಸುವುದರಿಂದ ಜನ-ಜಾನುವಾರುಗಳು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆಂದು ಭಾರತೀಯ ವಿಜ್ಞಾನ ಸಂಸ್ಥೆಯು ಸರ್ಕಾರವನ್ನು ಎಚ್ಚರಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯ ಗಳಲ್ಲಿ ನಡೆದ ನೀರಿನ ಪರೀಕ್ಷಾ ವರದಿಗಳು ಎರಡು ಹಂತಗಳಲ್ಲಿ ಸಂಸ್ಕರಿಸಿದ ನೀರು ಮರುಬಳಕೆಗೆ ಯೋಗ್ಯವಲ್ಲ” ಎಂಬುದನ್ನು ದೃಢಪಡಿಸಿದೆ ಎಂದರು.

ಮುಖ್ಯ ಹಕ್ಕೊತ್ತಾಯಗಳು
೧. ಕೆರೆಗಳ ಜೋಡಣೆ ಮತ್ತು ಕೆರೆಗಳ ಸಮಗ್ರ ಅಭಿವೃದ್ಧಿಗೆ ಸಂಬAಧಿಸಿದ ಇಸ್ರೊ ೧೯೯೭ ರ ವಿಶೇಷ ಅಧ್ಯಯನ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಕೇಂದ್ರ ಜಲಶಕ್ತಿ ಮಂತ್ರಾಲಯವು ವಿಶೇಷ ಯೋಜನೆಯಡಿ ನೀಲನಕ್ಷೆ ತಯಾರಿಸಿ, ನೀರಾವರಿ ವಂಚಿತ ಬರಪೀಡಿತ ಜಿಲ್ಲೆಗಳ ಕೆರೆಗಳ ಜೋಡಣೆ ಹಾಗೂ ಜಲಾನಯನ ಪ್ರದೇಶಗಳ ಪುನಃಶ್ಚೇತನ ಮತ್ತು ಸಮಗ್ರ ಕೆರೆ, ಕಟ್ಟೆ, ಕಾಲುವೆಗಳ ಅಭಿವೃದ್ಧಿಗೆ ತುರ್ತು ಕ್ರಮ ಕೈಗೊಳ್ಳಬೇಕು.
೨. ಎತ್ತಿನಹೊಳೆ ಯೋಜನೆಯ ಜಲವಿಜ್ಞಾನ (ಹೈಡ್ರಾಲಜಿ) ಅಧ್ಯಯನವನ್ನು ಕೇಂದ್ರೀಯ ಜಲ ಆಯೋಗವು ಪುನರ್ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು.
೩. ಬೆಂಗಳೂರು ಮಹಾನಗರದ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ೩ನೇ ಹಂತದ ಶುದ್ಧೀಕರಣದ ನಂತರವಷ್ಟೇ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ಮೂಲಕ ಕೆರೆಗಳಿಗೆ ಹರಿಸಬೇಕೆಂದು ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶಿಸಬೇಕು.
೪. ಬರ ಪೀಡಿತ ಜಿಲ್ಲೆಗಳಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ಕೊಳವೆ ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟವನ್ನು ಪರಿಶೀಲಿಸಬೇಕು. ಅಪಾಯಕಾರಿ ಅಂಶಗಳು ಕಂಡುಬರುವ ಗ್ರಾಮಗಳಿಗೆ ಡಬ್ಲೂö್ಯಹೆಚ್‌ಒ ನಿಗದಿಪಡಿಸಿದ ಗುಣಮಟ್ಟದ ಪರ್ಯಾಯ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ವ್ಯವಸ್ಥೆಯನ್ನು ಖಾತರಿಪಡಿಸಬೇಕು.
೫. ರಾಷ್ಟಿçÃಯ ಜಲ ಅಭಿವೃದ್ಧಿ ಸಂಸ್ಥೆ ಸಲ್ಲಿಸಿರುವ ಕೃಷ್ಣಾ (ಆಲಮಟ್ಟಿ) ಪೆನ್ನಾರ್ ನದಿ ಜೋಡಣೆಯ ಕಾರ್ಯಸಾಧ್ಯತಾ ವರದಿಯನ್ನು ಪುರಸ್ಕರಿಸಿ ಕೂಡಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇಂದ್ರ ಸರ್ಕಾರವು ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಪ್ರಧಾನಿಗಳಲ್ಲಿ ಹೋರಾಟ ಸಮಿತಿ ಮನವಿ ಮಾಡಿದೆ.

ವೇದಿಕೆಯಲ್ಲಿ ಆನೂರು ದೇವರಾಜ್,ಕಾಮ್ರೆಡ್ ಲಕ್ಷö್ಮಯ್ಯ,ವಕೀಲ ಲಕ್ಷಿö್ಮÃನಾರಾಯಣ,ಜಿಜಿ ಹಳ್ಳಿ ನಾರಾಯಣಸ್ವಾಮಿ, ನರಸಿಂಹರೆಡ್ಡಿ,ಪ್ರಭಾನಾರಾಯಣಗೌಡ ಮತ್ತಿತರರು ಇದ್ದರು.