Thursday, 12th December 2024

ನಾಲ್ವರು ವಿದ್ಯಾರ್ಥಿನಿಯರು‌ ನಾಪತ್ತೆ

ರಾಯಚೂರು: ನಗರದ ಸ್ಟೇಷನ್ ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಶನಿವಾರದಿಂದ ನಾಪತ್ತೆಯಾಗಿದ್ದು, ಆತಂಕಗೊಂಡ ಪಾಲಕರು ಭಾನುವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪತ್ತೆ ಮಾಡುವಂತೆ ಕೋರಿದ್ದಾರೆ.

ಶಕ್ತಿನಗರದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ರಾಯಚೂರು ನಗರದ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಎಲ್ಲರೂ ಪ್ರಥಮ ಪಿಯುಸಿ ಓದುವ ಪರಸ್ಪರ ಪರಿಚಯದ ಗೆಳತಿಯರು.

ನಾಪತ್ತೆಯಾದವರಲ್ಲಿ ಮೂವರು ಅಪ್ರಾಪ್ತರು. ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ವಾಪಸಾಗಿಲ್ಲ. ಯಾರೋ ಅಪರಿಚಿತರು ಅಪಹರಣ ಮಾಡಿದ್ದಾರೆ ಎಂದು ಪಾಲಕರೊಬ್ಬರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಪೊಲೀಸ್ ಠಾಣೆ ಮತ್ತು ಕಾಲೇಜು ಇರುವ ವ್ಯಾಪ್ತಿಯ ಸದರ್ ಬಜಾರ್ ಠಾಣೆಯ ಪೊಲೀಸರ ತಂಡಗಳನ್ನು ರಚಿಸಿ ತನಿಖೆ ಜವಾಬ್ದಾರಿ ವಹಿಸಲಾಗಿದೆ. ತನಿಖೆ ಆರಂಭವಾಗಿದ್ದು, ಇದುವರೆಗೂ ಸುಳಿವು ಗೊತ್ತಾಗಿಲ್ಲ