Sunday, 13th October 2024

ಕಡಿಮೆ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ

ಡುಪಿ: ಕ್ಷುಲಕ ಕಾರಣಕ್ಕೆ ಮನನೊಂದು ಹೆಬ್ರಿಯಲ್ಲಿರುವ ಎಸ್ ಆರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು, ಪ್ರಾಂಶುಪಾಲರು ಬೈದರು ಎಂಬ ಕಾರಣಕ್ಕೆ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹೆಬ್ರಿ ಕಾಲೇಜಿನ ದೀಪ್ತಿ ಸಾವನ್ನಪ್ಪಿದ್ದಾರೆ. ಈಕೆ ಉತ್ತಮವಾಗಿಯೇ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಹೀಗಾಗಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ, ಉಚಿತ ಸೀಟ್ ಸಂಪಾದಿಸಿಕೊಂಡಿದ್ದಳು. ಆದರೆ ಇತ್ತೀಚೆಗಿನ ಪರೀಕ್ಷೆಯೊಂದರಲ್ಲಿ 10 ಅಂಕ ಗಳಷ್ಟು ಕಡಿಮೆ ಬಂದಿದೆ.

ದೀಪ್ತಿಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದಕ್ಕೆ ಕಾಲೇಜಿನ ಪ್ರಾಶುಂಪಾಲರು ವಿಚಾರಿಸಿ ದ್ದಾರೆ. ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಫೈನ್ ಹಾಕುವುದಾಗಿ ಗದರಿದ್ದಾರೆ.

ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಮುಂದೆ ನನ್ನ ಮಗಳನ್ನು ಪ್ರಾಂಶುಪಾಲರು ನಿಂದಿಸಿ ದ್ದಾರೆ. ಇದರಿಂದ ಆಕೆ ಮಾನಸಿಕವಾಗಿ ನೊಂದುಕೊಂಡಿದ್ದಳು. ಹೀಗಾಗಿ ನಮ್ಮ ಮಗಳು ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎಂದು ದೀಪ್ತಿ ತಂದೆ ಸುರೇಶ್ ಮೆಂಡನ್ ಆರೋಪಿಸಿ ದ್ದಾರೆ.