Thursday, 12th December 2024

ಡಿಬಾರ್: ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ 

ರಾಯಚೂರು: ಎಂಎಸ್ಸಿ ನಾಲ್ಕನೇ ಸೆ ಮಿಸ್ಟರ್ ರಾಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಮನನೊಂದು ವಿವಿ ಪರೀಕ್ಷಾ ಕೇಂದ್ರದ ಮೊದಲನೆ ಮಹದಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಯರಗೇರಾ ಬಳಿಯ ರಾಯಚೂರು ವಿಶ್ವವಿದ್ಯಾಲಯದ ಮೇನ್ ಕ್ಯಾಂಪಸ್ ನಲ್ಲಿ ನಡೆದಿದೆ.
ಬುಧವಾರ ಎಂಎಸ್ಸಿ 4ನೇ ಸೆಮಿಸ್ಟರ್ ಫಿಸಿಕಲ್ ಕೆಮಿಸ್ಟ್ರಿ, ರಾಸಾಯನ ಶಾಸ್ತ್ರದ ಪರೀಕ್ಷೆ ನಡೆಯಿತ್ತಿದ್ದ ವೇಳೆ ವಿದ್ಯಾರ್ಥಿನಿ ನಕಲು ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ನಾಲ್ವರು ವಿದ್ಯಾರ್ಥಿಗಳೊಂದಿಗೆ ಈಕೆಯನ್ನು ಡೀಬಾರ್ ಮಾಡಲಾಗಿತ್ತು. ಇದರಿಂದ ಮನನೊಂದ ವಿದ್ಯಾರ್ಥಿನಿ ವಿವಿ ಪರೀಕ್ಷಾ ಕೇಂದ್ರದ ಮೊದಲನೆ ಮಹಡಿಯಿಂದ ಕೆಳಗೆ ಜಿಗಿದಿದ್ದಾಳೆ. ಕೂಡಲೇ ಬೊಧಕ-ಬೋಧಕೇತರ ಸಿಬ್ಬಂದಿ ಚಿಕಿತ್ಸೆಗಾಗಿ ರಾಯಚೂರು ನಗರದ ನವೀನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.
ವಿದ್ಯಾರ್ಥಿನಿ ಪೋಷಕರು, ಕುಲ ಸಚಿವ ಪ್ರೊ. ಯರಿಸ್ವಾಮಿ, ಉಪ ಕುಲ ಸಚಿವ ಡಾ.ಜಿ. ಎಸ್. ಬಿರಾದರ ಹಾಗೂ ಡೀನ್ ಪ್ರೊ. ಭಾಸ್ಕರ್  ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿ ಸ್ಥಿತಿ ಗತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
*
ವಿದ್ಯಾರ್ಥಿತಿನಿ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದು ತಪ್ಪು,  ನಾನು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿ ಚಿಕಿತ್ಸೆ ಬಗ್ಗೆ ವೈದ್ಯರಿಂದ ಮಾಹಿತಿ ಚಿಕಿತ್ಸೆ ಪಡೆದಿದ್ದೇನೆ. ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ರಾಯಚೂರು ವಿವಿ ಪ್ರೊ.ರಾಮಸ್ವಾಮಿ ಕುಲಪತಿ ರಾಯಚೂರು ತಿಳಿಸಿದ್ದಾರೆ.