Friday, 13th December 2024

ಬೇಸಿಗೆಯಲ್ಲಿ ಮಕ್ಕಳಿಗೆ ಸಾಕಷ್ಟು ನೀರು ಸೇವನೆ ಮಾಡಿಸುವುದರ ಪ್ರಾಮುಖ್ಯತೆ

ಡಾ. ಶ್ರೀರಾಮ್ ಬೊನು, ಮಕ್ಕಳ ರೋಗಶಾಸ್ತç ಮತ್ತು ನವಜಾತ ಶಿಶು ರೋಗಶಾಸ್ತç ವಿಭಾಗದ ಮುಖ್ಯಸ್ಥರು ಸಲಹಾ ತಜ್ಞರು, ಟ್ರೈಲೈಫ್ ಹಾಸ್ಪಿಟಲ್

ಮಕ್ಕಳಲ್ಲಿ ನಿರ್ಜಲೀಕರಣ ಅಂದರೆ ಅವರ ದೇಹದಲ್ಲಿ ನೀರು ಕಡಿಮೆಯಾಗುವ ಸ್ಥಿತಿ ಗಂಭೀರ ಆರೋಗ್ಯ ಸಂಕೀರ್ಣ ತೊಂದರೆಗಳಿಗೆ ದಾರಿ ಮಾಡಿಕೊಡಬಹುದು. ಈ ತೊಂದರೆಗಳಲ್ಲಿ ಬಿಸಿಲಿನಿಂದ ಬಳಲಿ ಕುಸಿಯುವುದರಿಂದ ಹಿಡಿದು ಮೂತ್ರಪಿಂಡ ತೊಂದರೆಗಳವರೆಗೆ ಹಲವಾರು ಅಸ್ವಸ್ಥತೆಗಳು ಸೇರಿರುತ್ತವೆ. ಪ್ರಸ್ತುತ ನಾವು ಅನುಭವಿಸುತ್ತಿರುವ ತಾಪಮಾನಗಳ ಅದರಲ್ಲಿಯೂ ದಿನದ ವೇಳೆಯಲ್ಲಿ ತಾಪಮಾನದ ಮಟ್ಟ ಗಮನಿಸಿದರೆ ಮಕ್ಕಳಲ್ಲಿ ನಿರ್ಜಲೀಕರಣವನ್ನು ತಪ್ಪಿಸಲು ಹಾಗೂ ಅವರ ದೇಹದಲ್ಲಿ ಸಾಕಷ್ಟು ನೀರಿನಂಶ ಸೂಕ್ತ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ ವಿಷಯವಾಗಿರುತ್ತದೆ. ಇದರಿಂದ ಅನಗತ್ಯ ವೈದ್ಯಕೀಯ ಅಸ್ವಸ್ಥತೆಯ ಸ್ಥಿತಿಗಳನ್ನು ತಡೆಯಬಹುದಾಗಿದೆ. ಸಾಕಷ್ಟು ದ್ರವ ಪದಾರ್ಥ ಅಥವಾ ನೀರು ಸೇವಿಸುವುದರ ಪ್ರಾಮುಖ್ಯತೆ ಕುರಿತು ಪೋಷಕರು ಮತ್ತು ಮಕ್ಕಳು ಇಬ್ಬರಲ್ಲೂ ಜಾಗೃತಿ ಇರಬೇಕು. ಬಿರು ಬೇಸಿಗೆಯ ತಿಂಗಳುಗಳಲ್ಲಿ ಮಗುವಿನ ಯೋಗಕ್ಷೇಮದ ಸುರಕ್ಷತೆಗಾಗಿ ಅಳವಡಿಸಬಹುದಾದ ಪರಿಣಾಮಕಾರಿ ದ್ರವ ಸೇವನೆ ವಿಧಾನಗಳ ಬಗ್ಗೆಯೂ ಅವರಿಗೆ ಅರಿವು ಇರಬೇಕು.

ನಿರ್ಜಲೀಕರಣ ಎಂದರೇನು?

ದೇಹ ಸೇವಿಸುವ ದ್ರವಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆರ್ದ್ರತೆ ಕಳೆದುಕೊಂಡರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ದೇಹ ಸೂಕ್ತ ರೀತಿಯಲ್ಲಿ ಕೆಲಸ ಮಾಡಲು ಅವಶ್ಯಕವಾದ ಪೊಟ್ಯಾಷಿಯಂ ಮತ್ತು ಸೋಡಿಯಂನOತಹ ಅಗತ್ಯದ ಲವಣಗಳ ಸಮತೋಲನಕ್ಕೆ ಅಡ್ಡಿವುಂಟಾಗುತ್ತದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳ ದೇಹದಲ್ಲಿ ನೀರಿನಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅವರಲ್ಲಿ ನಿರ್ಜಲೀಕರಣ ಅಂದರೆ ಡಿಹೈಡ್ರೇಷನ್ ಕ್ಷಿಪ್ರಗತಿಯಲ್ಲಿ ಹೆಚ್ಚಬಹುದು. ಇದರಿಂದ ಅತಿಯಾದ ಬಾಯಾರಿಕೆ, ಸರಿಯಾದ ಸಮಯಕ್ಕೆ ಮೂತ್ರವಿಸರ್ಜನೆ ಆಗದಿರುವುದು, ಒಣಗಿದ ತುಟಿ ಮತ್ತು ಬಾಯಿ, ಸುಸ್ತು, ತಲೆ ತಿರುಗುವುದು, ಅತ್ತಾಗ ಕಣ್ಣಿನಲ್ಲಿ ನೀರು ಬಾರದಿರುವುದು ಮತ್ತು ಗಾಢ ಬಣ್ಣದ ಮೂತ್ರ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ನಿರ್ಜಲೀಕರಣ ಯಾವ ರೀತಿಯಲ್ಲಿ ಮಕ್ಕಳ ಮೇಲೆ ಪರಿಣಾಮ ಉಂಟು ಮಾಡುತ್ತದೆ?

ಬೇಸಿಗೆ ಸಮಯದಲ್ಲಿ ರಜೆ ಇರುವುದರಿಂದ ಮಕ್ಕಳಲ್ಲಿ ದೈಹಿಕ ಚಟುವಟಿಕೆ ಹೆಚ್ಚಾಗಿರುತ್ತದೆ. ಅಲ್ಲದೆ, ಅವರ ದೇಹದಲ್ಲಿ ಚಯಾಪಚಯ(ಹೈ ಮೆಟಾಬಾಲಿಕ್ ರೇಟ್) ದರ ಉನ್ನತ ಪ್ರಮಾಣದಲ್ಲಿರುತ್ತದೆ. ಈ ಸಂದರ್ಭದಲ್ಲಿ ಆಟ ಮುಂತಾದ ಹೆಚ್ಚಿನ ಚಟುವಟಿಕೆಗಳಿಂದಾಗಿ ಅವರು ನಿರ್ಜಲೀಕರಣ ಅಂದರೆ ಡಿಹೈಡ್ರೇಷನ್‌ಗೆ ತುತ್ತಾಗಬಹುದು. ಬಹಳಷ್ಟು ಸಮಯಗಳಲ್ಲಿ ಮಕ್ಕಳು ತಮಗೆ ಬಾಯಾರಿಕೆಯಾದಾಗ ಸೂಕ್ತ ರೀತಿಯಲ್ಲಿ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಟದ ಉತ್ಸಾಹದಲ್ಲಿ ಅವರು ತಮ್ಮ ಬಾಯಾರಿಕೆಯನ್ನು ಸಾಮಾನ್ಯವಾಗಿ ನಿರ್ಲಕ್ಷಿಸುತ್ತಾರೆ. ಇದರಿಂದ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ನಿರ್ಜಲೀಕರಣಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾದ ನಿರ್ಜಲೀಕರಣವು ಉಷ್ಣಾಘಾತದ ಸೆಳೆತಕ್ಕೆ ತುತ್ತಾಗಲು ದಾರಿ ಮಾಡಿಕೊಡುತ್ತದೆ. ಕೆಲವು ಪ್ರಕರಣಗಳಲ್ಲಿ ಇದರಿಂದ ಅಂಗ ವೈಫಲ್ಯವು ಉಂಟಾಗಬಹುದು. ಆದ್ದರಿಂದ ಪೋಷಕರು ತಮ್ಮ ಮಕ್ಕಳ ದೇಹದಲ್ಲಿ ಸಾಕಷ್ಟು ಪ್ರಮಾಣದ ದ್ರವ ಅಥವಾ ನೀರಿನಂಶ ಇರುವ ಖಾತ್ರಿ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲಿಯೂ ಮನೆಯ ಹೊರಗಡೆ ಬಿಸಿಲಿನಲ್ಲಿ ಅವರು ಆಟವಾಡುವ ಸಂದರ್ಭಗಳಲ್ಲಿ ವಿಶೇಷವಾಗಿ ಈ ಕುರಿತು ಗಮನಹರಿಸಲೇಬೇಕು.

ಮಕ್ಕಳ ದೇಹದಲ್ಲಿ ಸಾಕಷ್ಟು ದ್ರವ ಅಥವಾ ನೀರು ಇರುವುದರ ಖಾತ್ರಿ ಮಾಡಿಕೊಳ್ಳುವುದು ಹೇಗೆ?

ಸತತವಾಗಿ ನಿಗದಿತ ಸಮಯಕ್ಕೊಮ್ಮೆ ದ್ರವ ಪದಾರ್ಥಗಳ ಸೇವನೆ : ದ್ರವಗಳಲ್ಲಿ ಅತ್ಯುತ್ತಮ ಎಂದರೆ ಅದು ನೀರಿನ ಸೇವನೆಯಾಗಿರುತ್ತದೆ. ದಿನದುದ್ದಕ್ಕೂ ಮಕ್ಕಳು ನೀರು ಸೇವಿಸಲು ಪ್ರೋತ್ಸಾಹಿಸಿ. ಅವರಿಗೆ ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಸೇವಿಸುವ ಅಭ್ಯಾಸ ಬೆಳೆಸಿ. ಹೆಚ್ಚುವರಿಯಾಗಿ ಎಲೆಕ್ಟೊçOಲೈಟ್‌ನಿಂದ ಸಮೃದ್ಧಿಯಾಗಿರುವ ಪೇಯಗಳಾದ ಎಳೆನೀರು, ಹಣ್ಣಿನ ರಸಗಳು, ಸಕ್ಕರೆ ಅಥವಾ ಕೃತಕ ಸಿಹಿಕಾರಕಗಳನ್ನು ಸೇರಿಸದೆ ಇರುವಂತಹ ಸ್ಮೂದಿಗಳು ಮಕ್ಕಳ ದೇಹದಲ್ಲಿ ಜಲ ಸಂಚಯ ಉಂಟು ಮಾಡುವುದಕ್ಕೆ ಅತ್ಯುತ್ತಮ ಆಯ್ಕೆಗಳಾಗಿರುತ್ತವೆ. ಅದರಲ್ಲಿಯೂ ಮಕ್ಕಳು ವಿಶೇಷವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಮತ್ತು ವಿಪರೀತ ಬೆವರುವಾಗ ಈ ಪೇಯಗಳು ಅತ್ಯಂತ ಸೂಕ್ತವಾಗಿರುತ್ತವೆ.

ದೇಹದಲ್ಲಿನ ನೀರಿನ ಅಂಶಗಳ ಮಟ್ಟವನ್ನು ಗಮನಿಸಿ : ನಿರ್ಜಲೀಕರಣದ ಲಕ್ಷಣಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಆಗಾಗ್ಗೆ ಪೋಷಕರು ತಮ್ಮ ಮಕ್ಕಳು ಸೂಕ್ತ ಪ್ರಮಾಣದ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಕಾಲಕಾಲಕ್ಕೆ ಮಕ್ಕಳಲ್ಲಿ ನಿರ್ಜಲೀಕರಣದ ಯಾವುದಾದರೂ ಲಕ್ಷಣಗಳು ಇರುವುದನ್ನು ಗಮನಿಸುತ್ತಿರಬೇಕು. ಉದಾಹರಣೆಗೆ ಒಣ ತುಟಿಗಳು, ಮೂತ್ರ ವಿಸರ್ಜನೆ ಕಡಿಮೆಯಾಗುವುದು ಇತ್ಯಾದಿ ಬಗ್ಗೆ ಗಮನವಿಡಬೇಕು. ನಿರ್ಜಲೀಕರಣ ಮತ್ತು ಇತರೆ ಮತ್ತಷ್ಟು ಸಂಕೀರ್ಣ ಅಸ್ವಸ್ಥತೆಗಳನ್ನು ತಪ್ಪಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಲು ಇದರಿಂದ ನೆರವಾಗುತ್ತದೆ.

ಮಗುವಿನ ಪುನರ್ಜಲೀಕರಣ ಅಂದರೆ ಪದೇ ಪದೇ ದ್ರವ ಪದಾರ್ಥಗಳನ್ನು ಹಾಗೂ ನೀರು ಸೇವನೆ ಮಾಡಿಸುವುದನ್ನು ಕುರಿತು ಒಂದು ನಿತ್ಯಕ್ರಮ ಮಾಡಿಕೊಳ್ಳಿ : ದ್ರವ ಸೇವನೆ ಅಭ್ಯಾಸವನ್ನು ನಿತ್ಯಕ್ರಮವಾಗಿಸಿಕೊಳ್ಳುವುದರಿಂದ ದಿನದುದ್ದಕ್ಕೂ ಮಕ್ಕಳು ಸೂಕ್ತ ಪ್ರಮಾಣದ ದ್ರವ ಸೇವಿಸುವ ಖಾತ್ರಿ ಮಾಡಿಕೊಳ್ಳಲು ನೆರವಾಗುತ್ತದೆ. ನೀರು ಸೇವನೆಗಾಗಿಯೇ ನಿರ್ದಿಷ್ಟ ಬಿಡುವು ಮಾಡಿಕೊಳ್ಳುವ ಅಭ್ಯಾಸವನ್ನು ಮಕ್ಕಳು ಹೊಂದಿರುವ ಖಾತ್ರಿ ಮಾಡಿಕೊಳ್ಳಿ. ಅದರಲ್ಲಿಯೂ ಮಕ್ಕಳು ಮನೆಯ ಹೊರಗಡೆ ಆಡುವಾಗ ವಿಶೇಷವಾಗಿ ಈ ಕುರಿತು ಗಮನಹರಿಸಬೇಕು. ಮಗುವಿಗೆ ಬಾಯಾರಿಕೆ ಇರಲಿ ಅಥವಾ ಇರದಿರಲಿ ಅವರು ಸಾಕಷ್ಟು ನೀರು ಅಥವಾ ಯಾವುದೇ ಇತರೆ ಆರೋಗ್ಯಕರ ದ್ರವಗಳನ್ನು ದಿನದುದ್ದಕ್ಕೂ ನಿಗದಿತ ಸಮಯದಲ್ಲಿ ಸೇವಿಸುವ ಖಾತ್ರಿ ಮಾಡಿಕೊಳ್ಳಿ.

ಉನ್ನತ ಪ್ರಮಾಣದ ನೀರಿನಂಶ ಇರುವ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯನ್ನು ಪ್ರೋತ್ಸಾಹಿಸಿ. ಕಿತ್ತಳೆಹಣ್ಣು, ಕಲ್ಲಂಗಡಿ ಹಣ್ಣು, ಸ್ಟಾçರ‍್ರಿ, ಸೌತೆಕಾಯಿ ಮತ್ತು ಉನ್ನತ ಪ್ರಮಾಣದ ನೀರಿನಂಶ ಹೊಂದಿರುವ ಇತರೆ ಹಣ್ಣುಗಳು ಮತ್ತು ತರಕಾರಿಗಳನ್ನು ತಿಂಡಿಯಾಗಿ ನೀಡಿರಿ. ಈ ಹಣ್ಣುಗಳಲ್ಲಿ ಅಗತ್ಯ ಪೋಷಕಾಂಶಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇದ್ದು, ಇದರಿಂದ ಮಕ್ಕಳ ದೇಹದಲ್ಲಿ ನೀರಿನಂಶ ಸೂಕ್ತ ಪ್ರಮಾಣದಲ್ಲಿರಲು ನೆರವಾಗುತ್ತದೆ.

ಕೆಫಿನ್ ಇರುವ ಮತ್ತು ಸಕ್ಕರೆ ಹೆಚ್ಚಾಗಿರುವ ಪೇಯಗಳ ಸೇವನೆಯನ್ನು ತಪ್ಪಿಸಿ : ಸೋಡಾಗಳು ಮತ್ತು ಕಾರ್ಬೊನೇಟೆಡ್ ಸಾಫ್ಟ್ ಡ್ರಿಂಕ್‌ಗಳು ಮುಂತಾ ಕೆಫಿನ್ ಇರುವ ಮತ್ತು ಸಕ್ಕರೆ ಹೆಚ್ಚಾಗಿರುವ ಪೇಯಗಳ ಸೇವನೆಯನ್ನು ತಪ್ಪಿಸಿ. ಇವು ನಿರ್ಜಲೀಕರಣ ಅಂದರೆ ಡಿಹೈಡ್ರೇಷನ್ ಅನ್ನು ಹೆಚ್ಚಿಸುತ್ತವೆಯಾದ್ದರಿಂದ ಇವುಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ. ಟೀ ಕಾಫಿಗಳಲ್ಲಿ ಶಕ್ತಿ ಹೆಚ್ಚಿಸುವಂತಹ ಕೆಫಿನ್ ಹೆಚ್ಚಾಗಿರುವುದಲ್ಲದೆ, ಇವುಗಳು ದೇಹದಿಂದ ಹೆಚ್ಚಿನ ದ್ರವ ನಷ್ಟವಾಗುವ ಪರಿಣಾಮ ಉಂಟುಮಾಡುತ್ತವೆ.

ಸೂಕ್ತ ಪ್ರಮಾಣದ ದ್ರವ ಸೇವನೆ(ಜಲಸಂಚಯನ ಅಥವಾ ಹೈಡ್ರೇಷನ್)ಯ ಪ್ರಾಮುಖ್ಯತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿ : ಎಲ್ಲಾ ಸಮಯಗಳಲ್ಲಿ ಸಾಕಷ್ಟು ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸುವುದರ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ಶಿಕ್ಷಣ ನೀಡಬೇಕು. ನೀರು ಯಾವ ರೀತಿಯಲ್ಲಿ ಪಚನಕ್ರಿಯೆಗೆ ನೆರವಾಗುತ್ತದೆ, ದೇಹದ ಉಷ್ಣಾಂಶವನ್ನು ಯಾವರೀತಿಯಲ್ಲಿ ನಿಯಂತ್ರಿಸುತ್ತದೆ ಮತ್ತು ಒಟ್ಟಾರೆ ಆರೋಗ್ಯ ಉಳಿಸಿಕೊಳ್ಳುವಲ್ಲಿ ಅದು ಯಾವ ರೀತಿ ನೆರವು ನೀಡುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳುವ ಅಗತ್ಯವಿರುತ್ತದೆ.
ಮಕ್ಕಳಿಗೆ ದ್ರವ ಪದಾರ್ಥಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳಿ : ಮನೆಯಲ್ಲಾಗಲಿ ಅಥವಾ ಶಾಲೆಗಳಲ್ಲಾಗಲಿ ಅಥವಾ ಹೊರಾಂಗಣದಲ್ಲಾಗಲಿ ಮಕ್ಕಳಿಗೆ ನೀರು ಸುಲಭವಾಗಿ ದೊರಕುವಂತೆ ನೋಡಿಕೊಳ್ಳಿ. ಪುನರ್ ಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಪೂರೈಸಿ ಅವುಗಳ ಬಳಕೆಯನ್ನು ಪ್ರೋತ್ಸಾಹಿಸಿ. ಇದರೊಂದಿಗೆ ದೇಹದಲ್ಲಿ ಜಲಸಂಚಯನ ಜಾಗೃತಿಯ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ.

ಹವಾಮಾನ ಸ್ಥಿತಿ ಕುರಿತು ಜಾಗೃತಿ ಹೊಂದಿರಿ : ಪೋಷಕರು ಹವಾಮಾನ ಮುನ್ಸೂಚನೆಗಳನ್ನು ಕುರಿತು ಗಮನವಿಡಬೇಕು. ಬಿಸಿ ಅಲೆ ಅಥವಾ ಉಷ್ಣ ಅಲೆಗಳನ್ನು ಕುರಿತು ಗಮನಹರಿಸಬೇಕಲ್ಲದೆ, ವಾತಾವರಣದಲ್ಲಿ ಉನ್ನತ ಪ್ರಮಾಣದ ಆರ್ದ್ರತೆ ಇರುವ ದಿನಗಳ ಬಗ್ಗೆ ಗಮನವಿಡಬೇಕು. ಇಂತಹ ದಿನಗಳಲ್ಲಿ ಮಕ್ಕಳನ್ನು ಮನೆಯ ಹೊರಗಡೆ ಬಿಸಿಲಿನಲ್ಲಿ ಆಟವಾಡಲು ಪೋಷಕರು ಬಿಡಬಾರದು.
ನಿದರ್ಶನೀಯವಾಗಿ ಮುನ್ನಡೆಸಿ : ಪೋಷಕರು ಮಾಡುವ ಕಾರ್ಯಗಳನ್ನೇ ಹೆಚ್ಚಾಗಿ ಮಕ್ಕಳು ನಕಲು ಮಾಡುತ್ತಾರೆ. ಆದ್ದರಿಂದ ಸೂಕ್ತ ಪ್ರಮಾಣದ ನೀರು ಹಾಗೂ ದ್ರವ ಸೇವನೆ ಮಾಡುವ ವಿಷಯದಲ್ಲಿ ಪೋಷಕರು ಮಕ್ಕಳಿಗೆ ಮಾದರಿಯಾಗಿರಬಹುದು. ಮಕ್ಕಳ ಎದುರಿನಲ್ಲಿ ನಿಗದಿತವಾಗಿ ನೀರು ಸೇವಿಸಿ ಮತ್ತು ಇದರಿಂದ ಯಾವ ಉತ್ತಮ ರೀತಿಯ ಬದಲಾವಣೆ ಉಂಟಾಗುತ್ತದೆ ಎಂಬುದನ್ನು ಕುರಿತು ಅವರ ಎದುರಿನಲ್ಲಿ ಮಾತನಾಡಿ,

ವೈದ್ಯಕೀಯ ನೆರವನ್ನು ಯಾವಾಗ ಪಡೆಯಬೇಕು : ನಿಮ್ಮ ಮಗು ತೀವ್ರ ರೀತಿಯ ನಿರ್ಜಲೀಕರಣದ ಲಕ್ಷಣಗಳನ್ನು ತೋರುತ್ತಿದ್ದಲ್ಲಿ ತಕ್ಷಣ ವೈದ್ಯರ ನೆರವು ಪಡೆದುಕೊಳ್ಳಬೇಕು. ಏಕೆಂದರೆ ನಿರ್ಜಲೀಕರಣದಿಂದ ಉಷ್ಣಾಘಾತದ ಬಳಲಿಕೆ ಉಂಟಾಗಬಹುದು. ಇದರಿಂದ ನಿಮ್ಮ ಮಗುವಿನ ವೈದ್ಯಕೀಯ ಸ್ಥಿತಿ ಮತ್ತಷ್ಟು ಸಂಕೀರ್ಣವಾಗಬಹುದು.
ಆದ್ದರಿOದ, ಮಕ್ಕಳ ಉತ್ತಮ ಆರೋಗ್ಯ ಹಾಗೂ ಯೋಗಕ್ಷೇಮ ಕುರಿತಂತೆ ಅವರಿಗೆ ಸೂಕ್ತ ರೀತಿಯ ನೀರು ಮತ್ತು ದ್ರವ ಪದಾರ್ಥ ಸೇವಿಸುವಂತೆ ಮಾಡುವುದು ಅತ್ಯಂತ ಮೂಲಭೂತ ವಿಷಯ ಎಂಬುದನ್ನು ನೆನಪಿನಲ್ಲಿಡುವುದು ಮುಖ್ಯವಾಗಿರುತ್ತದೆ. ನಿರ್ಜಲೀಕರಣದ ತೊಂದರೆಗಳು ಮತ್ತು ಸೂಕ್ತ ಪ್ರಮಾಣದಲ್ಲಿ ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವುದರ ಪ್ರಾಮುಖ್ಯತೆ ಕುರಿತಂತೆ ಪೋಷಕರು ಮಕ್ಕಳಲ್ಲಿ ಜಾಗೃತಿಯನ್ನು ಪ್ರೋತ್ಸಾಹಿಸಬೇಕು. ಜೊತೆಗೆ ಮಕ್ಕಳು ಯಾವಾಗಲೂ ಸೂಕ್ತ ರೀತಿಯಲ್ಲಿ ದ್ರವ ಪದಾರ್ಥಗಳು ಹಾಗೂ ನೀರನ್ನು ಸೇವಿಸುವುದರ ಖಾತ್ರಿ ಮಾಡಿಕೊಳ್ಳಲು ಸಕ್ರಿಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.