Thursday, 12th December 2024

Surgery: ಮುಖದ ಪಾರ್ಶ್ವವಾಯು ಗುಣಪಡಿಸುವ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ ಟ್ರಸ್ಟ್ ಹಾಸ್ಪಿಟಲ್

ಫೇಷಿಯಲ್ ಪ್ಲಾಸ್ಟಿಕ್ ಸರ್ಜರಿ ಮತ್ತು ಮುಖದ ನರದ ಸಮಸ್ಯೆ ಗುಣಪಡಿಸಲು ಅತ್ಯಾಧುನಿಕ ಶಸ್ತಚಿಕಿತ್ಸಾ ಸೌಲಭ್ಯ ಸ್ಥಾಪಿಸಿದ ಟ್ರಸ್ಟ್ ವೆಲ್

ಬೆಂಗಳೂರು: ನೈಜೀರಿಯಾ ಮೂಲದ 43 ವರ್ಷ ವಯಸ್ಸಿನ ನೇತ್ರಶಾಸ್ತ್ರಜ್ಞರಾದ ಗೇಬ್ರಿಯಲ್ ಪ್ಯಾಸ್ಕಲ್ ಅವರು ಮುಖದ ನರಗಳ ಪಾರ್ಶ್ವವಾಯು ಮತ್ತು ಕಿವಿಯ ಮೂಳೆಗಳನ್ನು ಒಳಗೊಂಡಿರುವ ಬೋನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಮುಖದ ಪಾರ್ಶ್ವವಾಯು ಸಮಸ್ಯೆಯನ್ನು ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಮೂಲಕ ಟ್ರಸ್ಟ್ ವೆಲ್ ಹಾಸ್ಪಿಟಲ್ ಸಂಪೂರ್ಣವಾಗಿ ಗುಣಪಡಿಸಿದ ಸಾಧನೆ ಮಾಡಿದೆ.

ಗೇಬ್ರಿಯಲ್ ಪ್ಯಾಸ್ಕಲ್ ಅವರಿಗೆ ತಮ್ಮ ಸಮಸ್ಯೆಯ ಕಾರಣದಿಂದ ನಗುವುದಕ್ಕೆ, ಮಾತನಾಡುವುದಕ್ಕೆ ಸಾಧ್ಯವಾಗು ತ್ತಿರಲಿಲ್ಲ. ಕಣ್ಣುಗಳಿಂದ ಸಿಕ್ಕಾಪಟ್ಟೆ ನೀರು ಸುರಿಯುತ್ತಿತ್ತು. ಕಣ್ಣು ಮುಚ್ಚುವುದಕ್ಕೂ ಕಷ್ಟವಾಗುತ್ತಿತ್ತು. ಬಾಯಿ ಯಿಂದ ಆಹಾರ ಹೊರ ಬರುತ್ತಿದ್ದುದರಿಂದ ಆಹಾರ ಸೇವನೆಯೂ ಆಗುತ್ತಿರಲಿಲ್ಲ. ಮುಖದಲ್ಲಿ ಯಾವುದೇ ಭಾವನೆ ವ್ಯಕ್ತ ಪಡಿಸುವುದಕ್ಕೂ ಕಷ್ಟವಾಗುತ್ತಿತ್ತು. ಇವೆಲ್ಲದರಿಂದ ಕಾರಣಗಳಿಗೆ ಬಹಳ ತೊಂದರೆಗೆ ಒಳಗಾಗಿದ್ದರು. ಖಿನ್ನರಾಗಿದ್ದರು. ಸಾಮಾಜಿಕವಾಗಿ ದೂರವೇ ಉಳಿಯವಂತೆ ಆಗಿತ್ತು. ಅವರು ಚಿಕಿತ್ಸೆಗಾಗಿ ಹಲವಾರು ಆಯ್ಕೆ ಗಳನ್ನು ಹುಡುಕಿದರು. ಕಡೆಗೆ ಅತ್ಯಾಧುನಿಕ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಗಾಗಿ ಟ್ರಸ್ಟ್‌ ವೆಲ್ ಹಾಸ್ಪಿಟಲ್ ಅನ್ನು ಆಯ್ಕೆ ಮಾಡಿಕೊಂಡರು. ವಿವಿಧ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ಆಂಕಾಲಜಿ ತಂಡದಿಂದ ಟ್ಯೂಮರ್ ಛೇದನ ಮತ್ತು ಪುನರ್ನಿರ್ಮಾಣ ಚಿಕಿತ್ಸೆ ಪಡೆದ ಅವರು ನಂತರ ಮುಖದ ಪಾರ್ಶ್ವವಾಯು ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆಗಾಗಿ ಟ್ರಸ್ಟ್‌ ವೆಲ್ ಆಸ್ಪತ್ರೆ ಸೇರಿಕೊಂಡರು.

ಟ್ರಸ್ಟ್ ವೆಲ್ ಹಾಸ್ಪಿಟಲ್ ನಲ್ಲಿ ಫೇಶಿಯಲ್ ರೀಅನಿಮೇಷನ್ ಎಂದು ಕರೆಯಲ್ಪಡುವ ಬಹಳ ಸಂಕೀರ್ಣವಾದ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಮೂಲಕ ಮುಖದ ನರ ಮತ್ತು ಸ್ನಾಯುಗಳಿಗೆ ಅದರಲ್ಲೂ ವಿಶೇಷವಾಗಿ ಬಾಯಿಗೆ ಪುನರ್ ಚೈತನ್ಯ ಒದಗುವಂತೆ ಮಾಡಲಾಗುತ್ತದೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಬೇರೆ ಭಾಗಗಲಿಂದ ತೆಗೆದ ನರಗಳನ್ನು ಮುಖದಲ್ಲಿ ಹಾನಿಗೊಳಗಾಗಿದ್ದ ನರಗಳ ಬದಲಿಗೆ ಬಳಸಲಾಗುತ್ತದೆ. ಸುಮಾರು 10 -12 ಗಂಟೆಗಳ ನಿರಂತರ ಆಪರೇಷನ್ ಬಳಿಕ ಇಂಟ್ರಾಆಪರೇಟಿವ್ ನರಗಳ ನಿಗಾವಹಿಸುವಿಕೆಯ ದೀರ್ಘಾವಧಿ ಕಾರ್ಯಾಚರಣೆ ಯನ್ನು ಈ ಪ್ರಕ್ರಿಯೆಯು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯಲ್ಲಿ ಎಲೆಕ್ಟ್ರೋಡ್ ಮೆಷಿನ್ ಇಂಟರ್ ಫೇಸ್ ದೇಹದಲ್ಲಿರುವ ನರಗಳನ್ನು ನಿರಂತರವಾಗಿ ಗಮನಿಸುವ ಮೂಲಕ ನರ ಮತ್ತು ಸ್ನಾಯುವಿನ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳುತ್ತದೆ. ಇದು ವಿಶೇಷ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಉನ್ನತ ಮಟ್ಟದ ರೋಗನಿರ್ಣಯ ಮತ್ತು ಚಿಕಿತ್ಸಕ ಶಸ್ತ್ರಚಿಕಿತ್ಸಾ ಆಯ್ಕೆಗಳ ಅಗತ್ಯವಿರುತ್ತದೆ. ವಿಶೇಷ ಎಂದರೆ ಸಮಗ್ರ ಮುಖದ ಪಾರ್ಶ್ವವಾಯು ಚಿಕಿತ್ಸೆ ಯನ್ನು ನಿರ್ವಹಿಸುವ ಆಸ್ಪತ್ರೆಗಳಿರುವುದು ಕೆಲವೇ ಕೆಲವು.

ಈ ಅತ್ಯಂತ ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಅಮೆರಿಕಾದ ಮೊದಲ ಇಂಟರ್ ನ್ಯಾಷನಲ್ ಬೋರ್ಡ್ ಸರ್ಟಿಫೈಡ್ ಡಿಪ್ಲೊಮೇಟ್ ಫೇಶಿಯಲ್ ಪ್ಲಾಸ್ಟಿಕ್ ಸರ್ಜನ್ ಆಗಿರುವ ಡಾ.ವಿಶ್ವಾಸ್ ವಿಜಯದೇವ್ ನೇತೃತ್ವದ ಶಸ್ತ್ರಚಿಕಿತ್ಸಾ ತಂಡವು ನಡೆಸಿತು. ಈ ತಂಡದಲ್ಲಿ ಡಾ.ಆನಂದ್ ಸುಭಾಷ್, ಡಾ.ಸ್ತುತಿ ಮಹಾಜನ್, ಡಾ.ಶ್ರಾವ್ಯಾ ಕಾಕೊಳ್ಳು ಇದ್ದರು. ಈ ಶಸ್ತ್ರ ಚಿಕಿತ್ಸೆಯ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಡಬಲ್ ನರ್ವ್ ಟ್ರಾನ್ಸ್ ಫರ್ ಮಾಡಲಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಕಾಲಿನಿಂದ ತೆಗೆದ ನರವನ್ನು ಮುಖಕ್ಕೆ ವರ್ಗಾಯಿಸಲಾಗಿದೆ ಮತ್ತು ಅದನ್ನು ಮುಖದ ಸಾಮಾನ್ಯ ಭಾಗದಿಂದ ಕಾರ್ಯನಿರ್ವಹಿಸುವ ಮುಖದ ನರದ ಜೊತೆ ಸಂಪರ್ಕಿಸಲಾಗುತ್ತದೆ. ಎರಡನೇ ನರವನ್ನು ಅಗಿಯಲು ಮತ್ತು ಮುಖದ ಮೇಲಿನ ಪಾರ್ಶ್ವವಾಯು ಆಗಿರುವ ನರಕ್ಕೆ ಶಕ್ತಿ ಒದಗಿಸಲು ಬಳಸಲಾಗುತ್ತದೆ.
ಡಾ.ಎನ್.ಎಸ್.ಚಂದ್ರಶೇಖರ ಮತ್ತು ಡಾ.ಜಯದೇವ್ ನೇತೃತ್ವದ ಅರಿವಳಿಕೆ ತಂಡವು ದೀರ್ಘಕಾಲದ ಶಸ್ತ್ರಚಿಕಿತ್ಸೆಗೆ ಬೇಕಾಗುನ ಅರಿವಳಿಕೆ ಔಷಧಿ ಒದಗಿಸುವ ಸಂಕೀರ್ಣ ಕ್ರಿಯೆಯನ್ನು ನಿರ್ವಹಿಸಿತು.

ನರಗಳು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾಯಿಸಬಹುದಾದ ಜೀವಂತ ಅಂಗಗಳಾಗಿವೆ. ವಿಶೇಷವಾಗಿ ಕೆಲವು ತಿಂಗಳ ನಂತರ ಅವು ಜೀವ ಪಡೆಯಬಲ್ಲವು. ಆದರೆ ಇದಕ್ಕೆ ಅಂಗಾಂಶಗಳ ಸೂಕ್ಷ್ಮ ಮತ್ತು ತರಬೇತಿಯುಕ್ತ ನಿರ್ವಹಣೆ ಅಗತ್ಯವಿರುತ್ತದೆ. ಜೊತೆಗೆ ಮುಖಕ್ಕೆ ಯಾವುದೇ ಹೆಚ್ಚಿನ ತೊಂದರೆ ಆಗದಂತೆ ಮುಖದಲ್ಲಿನ ನರಗಳನ್ನು ಜೊತೆ ಸೇರಿಸಲು ವಿಶೇಷ ತಂತ್ರಗಳ ಅಗತ್ಯವಿರುತ್ತದೆ. ಪ್ರಸಕ್ತ ಪ್ರಕರಣದಲ್ಲಿ ರೋಗಿಯ ಕಣ್ಣು ಮುಚ್ಚುವಿಕೆಯನ್ನು ಸಾಧ್ಯವಾಗಿಸಲು ಭಾರತದಲ್ಲಿ ಮಾಡಲಾಗುತ್ತಿರುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ನವೀನ ಮತ್ತು ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು.

ಟ್ರಸ್ಟ್ ವೆಲ್ ಹಾಸ್ಪಿಟಲ್ ಫೇಷಿಯಲ್ ಪ್ಲಾಸ್ಟಿಕ್ ಸರ್ಜರಿ ಮತ್ತು ಫೇಷಿಯಲ್ ನರ್ವ್ ಡಿಸಾರ್ಡರ್ ಗಳಿಗೆ ಚಿಕಿತ್ಸೆ ನೀಡಲು ಸ್ಥಾಪಿಸಿರುವ ಅತ್ಯಾಧುನಿಕ ಆಪರೇಷನ್ ಥಿಯೇಟರ್ ನಲ್ಲಿ ಈ 11 ಗಂಟೆಗಳ ಸುದೀರ್ಘ ಆಪರೇಷನ್ ಅನ್ನು ನಡೆಸಲು ಸಾಧ್ಯವಾಗಿದೆ. ಈ ಆಪರೇಷನ್ ಥಿಯೇಟರ್ ಅನ್ನು ಯುಎಸ್ಎ, ಯುರೋಪ್, ಇಸ್ರೇಲ್, ತೈವಾನ್ ನಿಂದ ತರಿಸಿರುವ ಸೌಲಭ್ಯಗಳಿಂದ ರೂಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಹೈ ಡಿಪೆಂಡೆನ್ಸಿ ಯುನಿಟ್ ಗಳು, ಶಸ್ತ್ರಚಿಕಿತ್ಸಾ ತೀವ್ರ ನಿಗಾ ಘಟಕಗಳು ಲ್ಯವಿದೆ.

ಅತ್ಯಾಧುನಿಕ ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯು ಸಾರ್ವಜನಿಕರಿಗೆ ಲಭ್ಯವಿರುವುದು ಬಹಳ ವಿರಳವಾಗಿದೆ. ಆದರೆ ಟ್ರಸ್ಟ್ ವೆಲ್ ಹಾಸ್ಪಿಟಲ್ ರೋಗಿಗಳಿಗೆ ಅತ್ಯುತ್ತಮ ಸುರಕ್ಷತೆ ಮತ್ತು ಅತ್ಯುತ್ತಮ ಫಲಿತಾಂಶ ಒದಗಿಸುವ ಅತ್ಯಾಧು ನಿಕ ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ನೀಡುತ್ತಿದೆ. ಜೊತೆಗೆ ಡಾ. ವಿಶ್ವಾಸ್ ವಿಜಯದೇವ್ ರಂತಹ ವಿದೇಶದಲ್ಲಿ ತರಬೇತಿ ಪಡೆದು ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಂದಿರುವ ಶ್ರೇಷ್ಠ ವೈದ್ಯರ ತಂಡವನ್ನು ಹೊಂದಿದೆ. ಇಲ್ಲಿಯವರೆಗೆ ಗುಣಪಡಿಸಲು ಸಾಧ್ಯವಾಗದೇ ಇದ್ದ ಚಿಕಿತ್ಸೆಗಳನ್ನು ನೀಡಲು ಟ್ರಸ್ಟ್ ವೆಲ್ ಹಾಸ್ಪಿಟಲ್ ಮುಂದಾಗಿರುವುದು ವಿಶೇಷವಾಗಿದೆ.

ಮುಖದ ಪಾರ್ಶ್ವವಾಯು ಚಿಕಿತ್ಸೆಯು ಒಂದು ಸಂಕೀರ್ಣ ಚಿಕಿತ್ಸೆ ಆಗಿತ್ತು. ಆದರೆ ವಿದೇಶದಲ್ಲಿ ಈ ಚಿಕಿತ್ಸಾ ವಿಧಾನವನ್ನು ಬಹಳ ದೊಡ್ಡದಾಗಿ ಅಭಿವೃದ್ಧಿ ಪಡಿಸಲಾಗಿದೆ. ಅಲ್ಲದೇ ಹೊಸ ಹೊಸ ರೋಗನಿರ್ಣಯ ವಿಧಾನ ಗಳು ಕೂಡ ಬಳಕೆಯಲ್ಲಿವೆ. ಈ ಪದ್ಧತಿಗಳು ಮತ್ತು ವಿಧಾನಗಳು ಇನ್ನಷ್ಟೇ ಭಾರತದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಚಯವಾಗಬೇಕಿದೆ. ಡಾ ವಿಶ್ವಾಸ್ ವಿಜಯದೇವ್ ಅವರು ರೋಗನಿರ್ಣಯ, ಪುನರ್ನಿರ್ಮಾಣ ಮತ್ತು ಶಸ್ತ್ರಚಿಕಿತ್ಸೆ ವಿಚಾರದಲ್ಲಿ ತಮ್ಮ ಅನೇಕ ಸಹೋದ್ಯೋಗಿಗಳಿಗೆ ಅತ್ಯಾಧುನಿಕ ತರಬೇತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಚಿಕಿತ್ಸೆಗೆ ಒಳಗಾದ ರೋಗಿಯು ಹಲವು ತಿಂಗಳುಗಳ ಬಳಿಕ ನರಗಳು ಕಾರ್ಯಪ್ರವೃತ್ತ ವಾದ ಮೇಲೆ ನಕ್ಕಾಗ ಮತ್ತು ಮಾತನಾಡಿದಾಗ ಉಂಟಾಗುವ ಸಂತೋಷವು ಈ ವೈದ್ಯರ ತಂಡವು ಸಂಪಾದಿಸುವ ದೊಡ್ಡ ಸಂಪತ್ತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ ವೆಲ್ ನ ಸ್ಟ್ರಾಟಜಿ ವಿಭಾಗದ ನಿರ್ದೇಶಕ ಗುರುಪ್ರಸಾದ್ ಅವರು, “ನಮ್ಮ ವೈದ್ಯರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದನ್ನು ತಿಳಿಸಲು ನಮಗೆ ಅಪಾರ ಸಂತೋಷ ಇದೆ. ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಕೂಲಿಂಗ್ ಅವಧಿ ಮುಗಿದ ನಂತರ ಸಾಮಾನ್ಯರಂತೆ ಜೀವನ ನಡೆಸಲಿದ್ದಾರೆ” ಎಂದು ಹೇಳಿದರು.