Thursday, 12th December 2024

ಶಾಲಾ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದ ಶಾಸಕ ಡಿ.ಸಿ ಗೌರಿಶಂಕರ್

ತುಮಕೂರು : ಗ್ರಾಮಾಂತರ ಕ್ಷೇತ್ರದ ಮಲ್ಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದಲಾಪುರ ಗ್ರಾಮದಲ್ಲಿ ಶಾಸಕ ಡಿ.ಸಿ ಗೌರಿಶಂಕರ್ ಅವರು ಶಾಲಾ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದರು.

ಶಾಸಕರು ಮಕ್ಕಳ ಜೊತೆಗೂಡಿ ನೂತನ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಅದಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿದರು. ಉಚಿತ ವಾಗಿ ಪ್ರತಿ ಮನೆ ಮನೆಗೂ 20 ಲೀಟರ್ ನೀರಿನ ಕ್ಯಾನ್ ವಿತರಿಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.

ಆರೋಗ್ಯ, ವಿದ್ಯಾಭ್ಯಾಸ ಮದುವೆ ಹಾಗೂ ಹಿನ್ನಿತರ ಸಮಸ್ಯೆ ಉಳ್ಳವರಿಗೆ ಸುಮಾರು 1,00,000 ಲಕ್ಷಕ್ಕೂ ಹೆಚ್ಚಿನ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಹೆಗ್ಗೆರೆ ಜಿಲ್ಲಾ ಪಂಚಾಯತಿ ಜೆಡಿಎಸ್ ಉಸ್ತುವಾರಿಗಳಾದ ಹಾಲನೂರು ಅನಂತ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಮತಿ ಲಕ್ಷ್ಮಿ ಮಧು ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಹಾಗೂ ಸ್ಥಳೀಯ ಮುಖಂಡರುಗಳು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.