Saturday, 14th December 2024

ತಾರಿಹಾಳ ಅಗ್ನಿ‌ ದುರಂತ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಹುಬ್ಬಳ್ಳಿ: ತಾರಿಹಾಳ ಅಗ್ನಿ‌ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ.

ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್​ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಬಿಡ್ನಾಳ ನಿವಾಸಿ ಮಲ್ಲಿಕ್‌ ರೆಹಾನ್ ಬಾವರಸಾಬ ಕೊಪ್ಪದ(19) ಮೃತಪಟ್ಟಿ ದ್ದಾರೆ‌.

ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಐ.ಸಿ.ಫ್ಲೇಮ್​ ಸ್ಫಾರ್ಕಲ್​ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದರು. ಇವರಲ್ಲಿ ಮೂವರು ಕಾಮಿರ್ಕರು ಮರುದಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಇದೀಗ ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ.

ವಿಜಯಲಕ್ಷ್ಮೀ ಯಚ್ಚನಾಗರ, ಗೌರವ್ವ ಹಿರೇಮಠ, ಮಾಳೇಶ ಹದ್ದನ್ನವರ ಮತ್ತು ಮಲ್ಲಿಕ್‌ರೆಹಾನ್ ಬಾವರಸಾಬ ಕೊಪ್ಪದ ಮೃತರು. 15- 20 ದಿನಗಳ ಹಿಂದೆ ಅನಧಿಕೃತವಾಗಿ ಪ್ರಾರಂಭವಾಗಿದ್ದ ಐ.ಸಿ.ಫ್ಲೇಮ್​ ಸ್ಫಾರ್ಕಲ್​ ಫ್ಯಾಕ್ಟರಿಯಲ್ಲಿ 11 ಕಾಮಿರ್ಕರು ಕೆಲಸ ಮಾಡುತ್ತಿದ್ದರು.