Friday, 20th September 2024

ಕೊಚ್ಚಿಯಲ್ಲಿ ಎರಡು ಹೊಸ ಇವಿ ಎಕ್ಸ್‌ ಕ್ಲೂಸಿವ್ ರಿಟೇಲ್ ಸ್ಟೋರ್‌ಗಳನ್ನು ಉದ್ಘಾಟಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ

ಎಡಪಲ್ಲಿ ಮತ್ತು ಕಲಮಸ್ಸೆರಿಯಲ್ಲಿ ಆರಂಭಗೊಂಡಿರುವ ಟಾಟಾ.ಇವಿ ಮಳಿಗೆಗಳು ಇಂದಿನಿಂದ ಸಾರ್ವಜನಿಕರಿಗೆ ತೆರೆದಿರುತ್ತವೆ

ಬೆಂಗಳೂರು: ಭಾರತದ ಇವಿ ಕ್ರಾಂತಿಯ ಪ್ರವರ್ತಕರು ಮತ್ತು ಟಾಟಾ ಮೋಟಾರ್ಸ್‌ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (ಟಿಪಿಇಎಂ) ಇಂದು ಕೇರಳದ ಕೊಚ್ಚಿಯ ಎಡಪಲ್ಲಿ ಮತ್ತು ಕಲಮಸ್ಸೆರಿಯಲ್ಲಿ ಟಾಟಾ.ಇವಿ ಬ್ರ್ಯಾಂಡ್ ನ ಎರಡು ಹೊಸ ಇವಿ- ರಿಟೇಲ್ ಮಳಿಗೆಗಳನ್ನು ಉದ್ಘಾಟನೆ ಮಾಡಿದೆ. ಈ ಮಳಿಗೆಗಳಲ್ಲಿ ವಿಶೇಷವಾಗಿ ಟಾಟಾದ ಇವಿ ವಾಹನಗಳನ್ನು ಮಾರಾಟ ಮಾಡಲಾಗುತ್ತದೆ ಮತ್ತು ಇವಿ ಜಗತ್ತಿನ ವಿಶೇಷತೆಗಳನ್ನು ತಿಳಿಸಲಾಗುತ್ತದೆ. ಜೊತೆಗೆ ಗ್ರಾಹಕರಿಗೆ ಅತ್ಯುನ್ನತ ಅನುಭವ ಒದಗಿಸಲಾಗುತ್ತದೆ.

ದೇಶದಲ್ಲಿ ನಿಧಾನಕ್ಕೆ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಹೆಚ್ಚುತ್ತಾ ಹೋದಂತೆ ಎಲೆಕ್ಟ್ರಿಕ್ ವಾಹನಗಳ ಕುರಿತಾದ ಗ್ರಾಹಕರ ಖರೀದಿ ನಡವಳಿಕೆ ಕೂಡ ಬದಲಾಗು ತ್ತಿದ್ದು, ಹೆಚ್ಚು ಪ್ರಬುದ್ಧವಾಗಿದೆ ಮತ್ತು ಯೋಚನಾ ವಿಧಾನ ಬೆಳೆಯುತ್ತಿದೆ. ಇವಿ ಗ್ರಾಹಕರು ಈಗ ಉತ್ಪನ್ನವನ್ನು ಖರೀದಿಸುವ ಸಮಯದಿಂದ ಹಿಡಿದು ಅದರ ಮಾಲೀಕತ್ವ ಹೊಂದಿದ ಬಳಿಕದ ದಿನಗಳವರೆಗೆ ಬ್ರ್ಯಾಂಡ್ ನಿಂದ ವಿಶೇಷ ಅನುಭವ, ಸೇವೆಯನ್ನು ನಿರೀಕ್ಷೆ ಮಾಡುತ್ತಾರೆ. ಹಾಗಾಗಿ ಗ್ರಾಹಕರಿಗೆ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಮೌಲ್ಯಗಳಿಂದ ನಡೆಸಲ್ಪಡುವ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಗ್ರಾಹಕ ಕೇಂದ್ರಿತ ಬ್ರಾಂಡ್ ಐಡೆಂಟಿಟಿ ಅವಶ್ಯವಾಗಿದೆ. ಈ ಕಾರಣಕ್ಕೆ ಟಾಟಾ.ಇವಿ ಅತ್ಯಾಧುನಿಕ ರಿಟೇಲ್ ಮಳಿಗೆಗಳನ್ನು ಆರಂಭ ಮಾಡಿದ್ದು, ಇವಿ ಗ್ರಾಹಕರ ವಿಭಿನ್ನ ನಿರೀಕ್ಷೆಗಳನ್ನು ಪೂರೈಸುವ ಆಲೋಚನೆ ಹೊಂದಿದೆ. ಈ ಮಳಿಗೆಗಳನ್ನು ಮಾಹಿತಿ, ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನ ನೀಡಲು ವಿನ್ಯಾಸ ಮಾಡಲಾಗಿದ್ದು, ಗ್ರಾಹಕ ಸ್ನೇಹಿ ವಾತಾವರಣವನ್ನು ಹೊಂದಿದೆ. ಅತ್ಯುತ್ತಮ ರಿಟೇಲ್ ಅನುಭವ ಒದಗಿಸಲೆಂದೇ ಅನಾವರಣಗೊಂಡಿರುವ ಟಾಟಾ.ಇವಿ ಮಳಿಗೆಗಳು ಸ್ನೇಹಮಯ, ಸಂತೋಷಕರ, ಬೆಚ್ಚಗಿನ ವಾತಾವರಣದಲ್ಲಿ ಟಾಟಾ.ಇವಿ ಬ್ರಾಂಡ್ ನ ಸೊಗಸನ್ನು ಸವಿಯುವಂತೆ ರೂಪುಗೊಂಡಿವೆ.

ಈ ಕುರಿತು ಮಾತನಾಡಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು, “ದೇಶದಲ್ಲಿನ ಇವಿ ಮಾರುಕಟ್ಟೆಯ ಶೇ.5.6ರಷ್ಟು ಭಾಗವನ್ನು ಹೊಂದಿದ್ದು, ಬ್ರಾಂಡ್ ಎಲೆಕ್ಟ್ರಿಕ್ ಸಾರಿಗೆ ಮಾರುಕಟ್ಟೆಯ ಮುಂಚೂಣಿಯಲ್ಲಿದೆ. ಕೇರಳದ ಜನರು ಭವಿಷ್ಯದ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ಸದಾ ಮುಂಚೂಣಿಯಲ್ಲಿ ಇರುತ್ತಾರಾದ್ದರಿಂದ ನಾವು ಕೇರಳ ರಾಜ್ಯದಲ್ಲಿ ಎರಡು ಹೊಸ ಪ್ರೀಮಿಯಂ ಟಾಟಾ.ಇವಿ ಮಳಿಗೆಗಳನ್ನು ಸ್ಥಾಪಿಸಿದ್ದೇವೆ. ಇವಿ ಗ್ರಾಹಕರು ಈಗ ಹೆಚ್ಚು ಪ್ರಬುದ್ಧರಾಗಿದ್ದಾರೆ ಮತ್ತು ಅವರು ಅತ್ಯುನ್ನತ ಮಾಲೀಕತ್ವದ ಅನುಭವವನ್ನು ಬಯಸುತ್ತಾರೆ ಎಂಬುದು ನಮ್ಮ ಅರಿವಿಗೆ ಬಂದಿದೆ. ಹಾಗಾಗಿ ಈ ಬೇಸಿಕ್ ಅಗತ್ಯವನ್ನು ಪೂರೈಸಲು, ಟಾಟಾ ಮೋಟಾರ್ಸ್ ಬದ್ಧವಾಗಿದೆ. ಗ್ರಾಹಕರ ನಿರೀಕ್ಷೆ ಮತ್ತು ಅಗತ್ಯಗಳನ್ನು ಪೂರೈಸುತ್ತಲೇ ಇವಿಗಳನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ನಾವು ಅತ್ಯಾಧುನಿಕ ಮತ್ತು ಡಿಜಿಟಲ್ ಸೌಕರ್ಯವುಳ್ಳ ಮಾಲೀಕತ್ವದ ಅನುಭವ ಒದಗಿಸುವುದರ ಕಡೆಗೆ ಗಮನ ಹರಿಸಿದ್ದೇವೆ. ಇದರ ಜೊತೆಗೆ ನಾವು ಶೀಘ್ರದಲ್ಲೇ ಕೇರಳದ ಪ್ರಮುಖ ನಗರಗಳಲ್ಲಿ 5 ವಿಶೇಷ ಇವಿ ಸರ್ವೀಸ್ ಸೆಂಟರ್ ಗಳನ್ನು ತೆರೆಯಲಿದ್ದೇವೆ. ಟಾಟಾ.ಇವಿ ಸ್ಟೋರ್‌ಗಳು ಮತ್ತು ಸರ್ವೀಸ್ ಸೆಂಟರ್ ಗಳ ಮೂಲಕ ಖರೀದಿ ಅನುಭವವನ್ನು ಉತ್ತಮಗೊಳಿಸುವುದು ಮತ್ತು ಇವಿ ಮಾಲೀಕತ್ವದ ಅನುಭವವನ್ನು ಸುಮಧುರಗೊಳಿಸುವುದು ನಮ್ಮ ಉದ್ದೇಶವಾಗಿದೆ. ಆ ಮೂಲಕ ಭಾರತದ ವಿದ್ಯುತ್ ಕ್ರಾಂತಿಯಲ್ಲಿ ಒಂದು ಪ್ರಮುಖ ಭಾಗವಾಗಲಿದ್ದೇವೆ. ದೇಶದಲ್ಲಿ ಇವಿ ಅಳವಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢವಾಗಿ ಚಲಿಸುತ್ತಿರುವ ನಮಗೆ ಇವೆಲ್ಲವೂ ಮಹತ್ವದ ಮೈಲುಗಲ್ಲಾಗಿವೆ” ಎಂದು ಹೇಳಿದರು.

ಟಾಟಾ.ಇವಿ ಎಡಪಲ್ಲಿ ಕುರಿತು
ಟಾಟಾ.ಇವಿ ಎಡಪಲ್ಲಿ ಸ್ಟೋರ್ ತನ್ನ ವಿಶಿಷ್ಟ ವಿನ್ಯಾಸ ಮತ್ತು ರೂಪುರೇಷೆಗಳಿಂದ ಅದರ ಸುತ್ತಮುತ್ತಲಿನ ಮಳಿಗೆಗಳಿಗಿಂತ ಬಹಳ ಭಿನ್ನವಾಗಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ. 8,800 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮಳಿಗೆಯು ಟಾಟಾ.ಇವಿ ಬ್ರ್ಯಾಂಡ್‌ ದೇಶದಾದ್ಯಂತ ಹೊಂದಿರುವ ಮಳಿಗೆಗಳಲ್ಲಿಯೇ ಅತಿದೊಡ್ಡ ಇವಿ ಮಲಿಗೆ ಆಗಿದೆ. ಇಲ್ಲಿ 10ಕ್ಕೂ ಹೆಚ್ಚು ವಾಹನಗಳನ್ನು ಆರಾಮವಾಗಿ ಪ್ರದರ್ಶಿಸಬಹುದಾಗಿದೆ. ಜೊತೆಗೆ ಗ್ರಾಹಕರು ಮತ್ತು ಸಂದರ್ಶಕರಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳ ಒದಗಿಸಲಾಗಿದೆ. ಈ ಮಳಿಗೆಯಲ್ಲಿ ವಿಶೇಷವಾಗಿ 60 kW DC ಫಾಸ್ಟ್ ಚಾರ್ಜರ್ ಸೌಲಭ್ಯ ಒದಗಿಸಲಾಗುತ್ತದೆ. ಟಾಟಾ.ಇವಿ ಒರಿಜಿನಲ್ಸ್ ಪರಿಕರ ಮತ್ತು ಭಾಗಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ.

ಟಾಟಾ.ಇವಿ ಎಡಪಲ್ಲಿ ಮಳಿಗೆಯಲ್ಲಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಇವಿ ಸರ್ವೀಸ್ ಸೆಂಟರ್ ಅನ್ನು ಕೂಡ ಆರಂಭಿಸಲಾಗುತ್ತದೆ. ಈ ಮೂಲಕ ಟಾಟಾ ಇವಿ ಮಾಲೀಕರ ಕಾರು ಖರೀದಿ ಬಳಿಕದ ಅನುಭವವನ್ನು ಉತ್ತಮಗೊಳಿಸುವ ಆಲೋಚನೆ ಬ್ರಾಂಡ್ ಗೆ ಇದೆ. ಈ ಸರ್ವೀಸ್ ಸೆಂಟರ್ 17 ಬೇ ಗಳನ್ನು ಹೊಂದಿದ್ದು, ಅದರಲ್ಲಿ 12 ಮೆಕ್ಯಾನಿಕಲ್ ಆಗಿರುತ್ತದೆ ಮತ್ತು 5 ಬಾಡಿ ಶಾಪ್‌ಗೆ ಇರುತ್ತದೆ. ಈ ಸರ್ವೀಸ್ ಸೆಂಟರ್ ತರಬೇತಿ ಪಡೆದ ಮತ್ತು ನುರಿತ ಕಾರ್ಯಪಡೆಯನ್ನು ಹೊಂದಿದ್ದು, ತಿಂಗಳಿಗೆ 800ಕ್ಕೂ ಹೆಚ್ಚು ವಾಹನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಟಾಟಾ.ಇವಿ ಕಲಮಸ್ಸೆರಿ ಕುರಿತು
ಟಾಟಾ.ಇವಿ ಕಲಮಸ್ಸೆರಿ ಸ್ಟೋರ್ ಗ್ರಾಹಕರಿಗೆ ಅತ್ಯಂತ ಸೊಗಸಾಗಿ ಕಾಣುತ್ತದೆ. ಟಾಟಾ ಇವಿಗಳನ್ನು ನೋಡಲು ಬಯಸುವ ಗ್ರಾಹಕರಿಗೆ ವಿಶಾಲವಾದ ಆರಾಮದಾಯಕ ಸ್ಥಳವನ್ನು ಹೊಂದಿದೆ. 6,100 ಚದರ ಅಡಿಗಳಷ್ಟು ವಿಶಾಲವಾದ ಪ್ರದೇಶ ಹೊಂದಿರುವ ಈ ರಿಟೇಲ್ ಮಳಿಗೆಯು ಸಂದರ್ಶಕರಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳವನ್ನು ಕೂಡ ಹೊಂದಿದೆ. ವಿಶೇಷವಾಗಿ ಇಲ್ಲಿ 6 ವಾಹನಗಳನ್ನು ಸುಲಭವಾಗಿ ಪ್ರದರ್ಶಿಸುವ ಸ್ಥಳಾವಕಾಶವಿದೆ. ಈ ಮಳಿಗೆಯಲ್ಲಿ 60 kW DC ವೇಗದ ಚಾರ್ಜರ್ ಅನ್ನು ಒದಗಿಸಲಾಗುತ್ತಿದ್ದು, ಸಂದರ್ಶಕರು ತಮ್ಮ ಇವಿಗಳನ್ನು ಎಲ್ಲಾ ಸಮಯದಲ್ಲಿಯೂ ಇಲ್ಲಿ ಚಾರ್ಜ್ ಮಾಡಬಹುದಾಗಿದೆ. ಗ್ರಾಹಕರಿಗಾಗಿ ಟಾಟಾ.ಇವಿ ಒರಿಜಿನಲ್ಸ್ ಪರಿಕರಗಳ ಶ್ರೇಣಿಯೂ ಮಾರಾಟಕ್ಕೆ ಲಭ್ಯವಿರುತ್ತದೆ.

11 ಮೆಕ್ಯಾನಿಕಲ್ ಬೇ ಹೊಂದಿರುವ ಈ ಸ್ಟೋರ್‌ ಗೆ ಮೀಸಲಾದ ಇವಿ ಸರ್ವೀಸ್ ಸೆಂಟರ್ ಅನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಈ ಸರ್ವೀಸ್ ಸೆಂಟರ್ ನುರಿತ ತಂತ್ರಜ್ಞ ಸಿಬ್ಬಂದಿಗಳನ್ನು ಹೊಂದಿರುವ ಈ ಸರ್ವೀಸ್ ಸೆಂಟರ್ ತಿಂಗಳಿಗೆ 700 ಇವಿಗಳನ್ನು ಸರ್ವೀಸ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಕೇಂದ್ರವು ಗ್ರಾಹಕರ ಅನುಭವ ಹೆಚ್ಚಿಸಲಿದ್ದು, ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುತ್ತದೆ.

ಟಾಟಾ.ಇವಿಯ ಬ್ರಾಂಡ್ ನ ಮೂಲತತ್ವಕಕ್ಕೆ ಅನುಗುಣವಾಗಿ ಕೊಚ್ಚಿಯಲ್ಲಿ ರಿಟೇಲ್ ಸ್ಟೋರ್ ಗಳು ಕಾರ್ಯ ನಿರ್ವಹಿಸಲಿವೆ. ಟಾಟಾ.ಇವಿ ಎಡಪಲ್ಲಿ ಮತ್ತು ಟಾಟಾ.ಇವಿ ಕಲಮಸ್ಸೆರಿ ಮಳಿಗೆಗಳು ಇವಿ ಸಮುದಾಯದ ಮಂದಿಗೆ ವಿಶೇಷ ಸೌಲಭ್ಯವನ್ನು ಒದಗಿಸುತ್ತವೆ. ಇವೋಲ್ವ್ ಸದಸ್ಯತ್ವ, ಭೇಟಿ ಮಾಡುವ ಸ್ಥಳಗಳು ಮತ್ತು ವರ್ಕ್ ಶಾಪ್ ಗಳಂತಹ ವಿಶಿಷ್ಟ ಸೇವೆಗಳನ್ನು ಟಾಟಾ ಗ್ರಾಹಕರು ಇಲ್ಲಿ ಪಡೆಯುತ್ತಾರೆ. ಈ ಮಳಿಗೆಗಳಲ್ಲಿ ಲಭ್ಯವಿರುವ ಕಾನ್ಫಿಗರೇಟರ್ ಪರದೆಯ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಟಾಟಾ ಇವಿಯ ಬೆಲೆ ಮತ್ತು ನಿರ್ದಿಷ್ಟ ವೇರಿಯಂಟ್ ನ ಫೀಚರ್ ಗಳು, ಲಭ್ಯವಿರುವ ಬಣ್ಣಗಳು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಬಹುದು. ಇವಿ ಡೆಮಿಸ್ಟಿಫೈಯರ್ ವಾಲ್ ಗ್ರಾಹಕರಿಗೆ ತಮ್ಮ ವಾಹನವನ್ನು ಚಾರ್ಜ್ ಮಾಡಲು ಲಭ್ಯವಿರುವ ವಿವಿಧ ಚಾರ್ಜಿಂಗ್ ಆಯ್ಕೆಗಳನ್ನು ತೋರಿಸುತ್ತದೆ. ಬಳಕೆದಾರರು ಸಾಗುವ ಮಾರ್ಗದಲ್ಲಿ ಲಭ್ಯವಿರುವ ವಿವಿಧ ಚಾರ್ಜಿಂಗ್ ಸ್ಟೇಷನ್‌ಗಳನ್ನು ಕೂಡ ಇಲ್ಲಿ ಪ್ರದರ್ಶಿಸಲಾಗುತ್ತದೆ. ಆ ಮೂಲಕ ಎರಡು ನಗರಗಳ ನಡುವೆ ಪ್ರಯಾಣ ಮಾಡುವ ಗ್ರಾಹಕರಿಗೆ ಸಹಾಯ ಮಾಡುವ ಮೂಲಕ ಅವರಿಗೆ ಇರಬಹುದಾದ ರೇಂಜ್ ಕುರಿತ ಆತಂಕವನ್ನು ಕಡಿಮೆ ಮಾಡಲಾಗುತ್ತದೆ. ಇದರ ಜೊತೆಗೆ ಮಳಿಗೆಯಲ್ಲಿ ಬ್ಲೂ ಟೋಕೈ ಕೆಫೆಯನ್ನು ಕಲಾತ್ಮಕ ಸೇರ್ಪಡೆಗೊಳಿಸಲಾಗಿದೆ. ಸಂದರ್ಶಕರು ಇಲ್ಲಿ ಅತ್ಯುತ್ತಮ ಕಾಫಿಯನ್ನು ಸವಿಯಬಹುದು ಮತ್ತು ಕೆಫೆಯಲ್ಲಿ ಲಭ್ಯವಿರುವ ಕ್ಯೂಆರ್ ಕೋಡ್ ಅನ್ನು ಬಳಸಿಕೊಂಡು ‘ಫೈಂಡ್ ಯುವರ್ ವೇ’ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಮಳಿಗೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.

ಭಾರತದಲ್ಲಿ ಇವಿ ವಿಭಾಗವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿರುವ ಬ್ರ್ಯಾಂಡ್ ಆಗಿರುವ ಟಾಟಾ.ಇವಿ 4-ಚಕ್ರ ವಾಹನ ವಿಭಾಗದಲ್ಲಿ ದೇಶದಲ್ಲಿನ ಬಹುಪಾಲು ಮಾರುಕಟ್ಟೆ ಪಾಲನ್ನು ಹೊಂದಿದ್ದು, ವೇಗವಾಗಿ ಮುನ್ನುಗ್ಗುತ್ತಿದೆ. ಟಾಟಾ.ಇವಿ ದೇಶದ ವರ್ತಮಾನವನ್ನು ರೂಪಿಸುವುದರ ಜೊತೆಗೆ ಸಾರಿಗೆ ಕ್ಷೇತ್ರದ ಭವಿಷ್ಯವನ್ನೂ ಮುನ್ನಡೆಸುತ್ತಿದೆ. ಇವಿ- ರಿಟೇಲ್ ಮಳಿಗೆಗಳು ಮತ್ತು ಉತ್ಪನ್ನಗಳ ಶ್ರೇಣಿಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿವೆ. ಒಟ್ಟಾರೆಯಾಗಿ ಟಾಟಾ.ಇವಿ ಹಸಿರು, ಸುರಕ್ಷಿತ ಮತ್ತು ಸ್ಮಾರ್ಟ್ ಆದ ಭವಿಷ್ಯದ ಕಡೆಗೆ ಮಾನವ ಸಮೂಹವನ್ನು ಕೊಂಡೊಯ್ಯಲು ಸಜ್ಜಾಗಿ ಕಾರ್ಯ ನಿರ್ವಹಿಸುತ್ತಿದೆ.