Monday, 28th October 2024

Teacher died: ಶಿಕ್ಷಕ ಜಂಗಮ್ ಶ್ರೀನಿವಾಸ್ ನಿಧನ-ಗಣ್ಯರ ಕಂಬನಿ

ಬಾಗೇಪಲ್ಲಿ: ತಾಲೂಕಿನ ಘಂಟಮವಾರಪಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ ಶಿಕ್ಷಕ ಜಂಗಮ್ ಎನ್ ಶ್ರೀನಿವಾಸ್ ರವರು ಅನಾರೋಗ್ಯದ ಹಿನ್ನಲೆಯಲ್ಲಿ ಗುರುವಾರ ಬೆಳಗ್ಗೆ ಸುಮಾರು ೧೦ಗಂಟೆಗೆ ನಿಧನ ಹೊಂದಿದ್ದಾರೆ.

ಹಲವು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯು ತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ. ಇವರ ತಾಲೂಕಿನ ಕಾನಗಮಾಕಲಪಲ್ಲಿ,ಮಿಟ್ಟೇಮರಿ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ,೨೦೦೮ ರಿಂದ ಘಂಟAವಾರಿಪಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು ೧೬ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು. ಶ್ರೀನಿವಾಸ್ ಅವರಿಗೆ ಮೂವರು ಹೆಣ್ಣು ಮಕ್ಕಳು, ಮಡದಿ ಇದ್ದಾರೆ. ಅವರ ನಿಧನದಿಂದಾಗಿ ಕುಟುಂಬಸ್ಥರ ಜೊತೆಗೆ ಅಪಾರ ಶಿಷ್ಯವೃಂದ ಮತ್ತು ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ, ಬಿಇಓ ವೆಂಕಟೇಶಪ್ಪ, ಆರ್.ವೆಂಕಟರಾಮ್, ಆರ್.ಹನುಮಂತ ರೆಡ್ಡಿ, ವೆಂಕಟರವಣ, ಸಿ.ವೆಂಕಟರಾಯಪ್ಪ, ಸರ್ಕಾರಿ ಘಂಟಂವಾರಿಪಲ್ಲಿ ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ, ಕೆ.ಬಿ.ಆಂಜನೇಯ ರೆಡ್ಡಿ, ಜಿ.ವಿ.ಚಂದ್ರಶೇಖರ, ಬಿರಾದಾರ ವಿಠಲ್ ಚಂದ್ರಶಾ, ಎಲ್. ರವಿ.ನಾರಾಯಣ ಸ್ವಾಮಿ, ಎನ್.ಸಂಧ್ಯಾ,ಎಸ್. ವರಲಕ್ಷಿö್ಮÃ ,ಸಿಬ್ಬಂದಿ ವರ್ಗ ರಾಮಚಂದ್ರ, ರಘುನಾಥ ರೆಡ್ಡಿ, ಹಾಗೂ ಶಾಲಾ ಮಕ್ಕಳು ಅವರ ಕುಟುಂಬಕ್ಕೆ ಆತ್ಮ ಶಾಂತಿ ಸಿಗಲಿ ಎಂದು ಕಂಬನಿಮಿಡಿದಿದ್ದಾರೆ.

ಇದನ್ನೂ ಓದಿ: Chickballapur News: ಜನಪ್ರತಿನಿಧಿ ಸಂಸ್ಥೆಗಳ ಕಾರ್ಯ ವೈಖರಿ ಬಗ್ಗೆ ಅರಿವು ಮೂಡಿಸುವುದೇ ಶಾಲಾ ಸಂಸತ್-ಬಿಇಒ ವೆಂಕಟೇಶ್