Friday, 22nd November 2024

ಕೆಲಸ ಮಾಡುವಾಗ ಮುಂದೆ ಗುರಿ ಹಿಂದೆ ಒಬ್ಬರು ಗುರು ಇರಬೇಕು : ಡಿ.ಕೆ.ಶಿವಕುಮಾರ್

ತಿಪಟೂರು: ಕೆಪಿಸಿಸಿಯ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು ಈ ವೇಳೆ ಮಠದಲ್ಲಿ ಸ್ವಾಮೀಜಿಯವರ ಜೊತೆ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡರು.

ನಾವು ನಾಮಪತ್ರ ಸಲ್ಲಿಸುವಾಗ, ಟಿಕೆಟ್ ಹಂಚಿಕೆ ಮಾಡುವಾಗ ಪ್ರತಿ ಬಾರಿಯೂ ಅಜ್ಜಯ್ಯನ ಆಶೀರ್ವಾದ ಪಡೆದಿದ್ದೇವೆ ನಮ್ಮ ಜೊತೆಯವರು ಎಷ್ಟೊಬ್ಬರು ಹೇಳಿದರು ನಮಗೆ ಸೀಟ್ ಕಡಿಮೆ ಆಗಬಹುದು ಅವರ ಜೊತೆ ಅಥವಾ ಇವರ ಜೊತೆ ಮಾತನಾಡಿ ಎಂದು ಆದರೆ ನಾನು ಸ್ಪಷ್ಟವಾಗಿ ಹೇಳಿದೆ ನಮಗೆ ಗುರು ಇದ್ದಾರೆ ನನಗೆ ಗುರಿಯಿದೆ. ಆ ಗುರುವೇ ಅಜ್ಜಯ್ಯನವರು ಅವರು ಈಗ ಆಶೀರ್ವಾದ ಮಾಡಿದ್ದಾರೆ.

ನಂತರ ಪತ್ರಕರ್ತರ ಜೊತೆ ಮಾತನಾಡಿ ನಾನು ಮೊದಲಿನಿಂದಲೂ ಗಂಗಾಧರ ಅಜ್ಜನನ್ನು ಮತ್ತು ಶಿವಯೋಗಿ ಶ್ರೀಗಳನ್ನು ನಂಬಿಕೊAಡು ಬಂದಿದ್ದೇನೆ ನನ್ನ ಜೀವನದ ಏಳು ಬೀಳುಗಳಲ್ಲಿ ಅವರ ಸಲಹೆ ಸೂಚನೆಗಳನ್ನು ಕೇಳಿಕೊಂಡು ಪಾಲಿಸಿಕೊಂಡು ಬಂದಿದ್ದೇನೆ. ನಾನು ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡುವುದರಿಂದ ಹಿಡಿದು ಯಾರಿಗೆ ಟಿಕೆಟ್ ಕೊಡಬೇಕು ಯಾರಿಗೆ ಕೊಡಬಾರದು ಎಂಬುದರ ಬಗ್ಗೆ ಸಲಹೆ ಸೂಚನೆಗಳನ್ನು ಇಲ್ಲಿಯೇ ಕೇಳಿದ್ದೇನೆ ನನ್ನ ಮೇಲೆ ಆದ ಈಡಿ ರೇಡಿನ ಸಮಯದಲ್ಲಿ ನಾನು ಜೈಲಿಗೆ ಹೋದಾಗ ನಾನು ಜೈಲಿನಿಂದ ಬಂದಾಗ ನನಗೆ ಬೆನ್ನಿಗೆ ನಿಂತು ಸಲಹೆ ಸೂಚನೆ ನೀಡಿದ್ದಾರೆ

ನಾನು ಕೆಪಿಸಿಸಿ ಅಧ್ಯಕ್ಷರಾದ ದಿನವೇ ಅಂದುಕೊ0ಡೆ ನಾವು ಸರ್ಕಾರ ಮಾಡಲೇಬೇಕು ಆದರೆ ಯಾರ ಹತ್ತಿರ ಹೋಗಬಾರದು ಸ್ವಂತ ಬಲದಲ್ಲಿ ಮಾಡಬೇಕು ಎಂದು ಆವಾಗ ಸ್ವಾಮೀಜಿಗಳನ್ನು ಕೇಳಿದಾಗ ನೀನು ಹೆಚ್ಚು ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸು ಅವರಿಗೆ ಸಂಬ0ಧಿಸಿದೆ ಯೋಜನೆ ರೂಪಿಸು ಎಂದರು. ಅದಕ್ಕೆ ನಾನು ಹೆಣ್ಣುಮಕ್ಕಳಿಗೆ ಸಂಬ0ಧಿಸಿ ದ0ತೆ ಗೃಹ ಭಾಗ್ಯ ಯೋಜನೆ ಬಸ್ಸಿನಲ್ಲಿ ಉಚಿತ ಪ್ರಯಾಣ, ಉಚಿತ ಅಕ್ಕಿ ಇವೆಲ್ಲವನ್ನು ತಕ್ಷಣವೇ ಜಾರಿ ಮಾಡುತ್ತೇವೆ.

ಪಕ್ಷ ನನಗೆ ಎಲ್ಲವನ್ನು ನೀಡಿದೆ ಪಕ್ಷಕ್ಕಾಗಿ ದುಡಿಯುತ್ತೇನೆ ನಾನು ಸಿದ್ದರಾಮ ಯ್ಯನವರ ನಡುವೆ ಇರುವ ಅಂತರ ಎಷ್ಟು ಎಂದು ಕೇಳಿದ್ದಕ್ಕೆ ಒಂದು ಇರುವೆ ಎಷ್ಟು ಅಂತರವಿಲ್ಲ ನಾವೆಲ್ಲ ಒಟ್ಟಾಗಿ ಒಂದೇ ಮನಸ್ಸಿನಲ್ಲಿ ಹೋಗುತ್ತಿದ್ದೇವೆ ಎಂದರು.  ಸಿದ್ದರಾ ಮಯ್ಯನವರು ಸಿಎಂ ಆದಾಗ ನಾನು ಸಮಾಧಾನದಿಂದ ಇರಲಿಲ್ಲವೇ. ನಾನು ಕೆಪಿಸಿಸಿ ಅಧ್ಯಕ್ಷರಾದಾಗ ಅವರು ಸಮಾಧಾನ ದಿಂದ ಇರಲಿಲ್ಲವೇ ಅದೇ ರೀತಿ ಎಲ್ಲವೂ ನಡೆಯುತ್ತದೆ ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಈ ಸಂಧರ್ಭದಲ್ಲಿ ಶಾಸಕರಾದ ಚಲುವರಾಯಸ್ವಾಮಿ, ಕೆ.ಷಡಕ್ಷರಿ, ವೇಲೂರು ಗೋಪಾಲಕೃಷ್ಣ, ಗುಬ್ಬಿ ಶ್ರೀನಿವಾಸು, ಸಂಸದ ಡಿ.ಕೆ ಸುರೇಶ್, ಹಾಗೂ ಕುಟುಂಬದವರು ಹಾಜರಿದ್ದು ಪೂಜೆ ಸಲ್ಲಿಸಿದರು.