Sunday, 15th December 2024

ಪರಿಷತ್‌ ಸದಸ್ಯ ಸ್ಥಾನಕ್ಕೆ ತೇಜಸ್ವಿನಿ ಗೌಡ ರಾಜೀನಾಮೆ

ಬೆಂಗಳೂರು: ಮಾಜಿ ಪರ್ತಕರ್ತೆ, ಬಿಜೆಪಿ ಪಕ್ಷದ ವಿಧಾನಸಭಾ ಪರಿಷತ್‌ ಸದಸ್ಯೆಯಾಗಿದ್ದ ತೇಜಸ್ವಿನಿ ಗೌಡ ಬುಧವಾರ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸ್ಪೀಕರ್‌ ಬಸವರಾಜ್‌ ಹೊರಟ್ಟಿ ಅವರನ್ನು ಭೇಟಿಯಾದ ತೇಜಸ್ವಿನಿ ಗೌಡ ಸ್ವಚ್ಛೆಯಿಂದ ರಾಜೀನಾಮೆ ನೀಡುತ್ತಿರುವಾಗಿ ತಿಳಿಸಿದ್ದಾರೆ. ಈ ರಾಜಿನಾಮೆ ಪತ್ರವನ್ನು ಹೊರಟ್ಟಿ ಅವರು ಅಂಗೀಕರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಹೊರಟ್ಟಿ ಅವರು ಸಾಕಷ್ಟು ಮನವೊಲಿಸಲು ಯತ್ನಿಸಿದೆ. ಆದರೆ ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ ಎಂದರು.

ಇನ್ನು ರಾಜೀನಾಮೆ ಹಿಂದೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈ ತಪ್ಪಿರುವ ಕಾರಣವೂ ಇದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ.