Sunday, 15th December 2024

ಮುಸಲ್ಮಾನರು ಏನು ಬೇಕಾದರೂ ಮಾಡಬಹುದು ಎನ್ನಲು ಇದು ಪಾಕಿಸ್ತಾನ ಅಲ್ಲ ಹಿಂದೂಸ್ತಾನ: ಕೆ.ಎಸ್‌ ಈಶ್ವರಪ್ಪ

ಉಡುಪಿ: ಮುಸಲ್ಮಾನರು ಏನು ಬೇಕಾದರೂ ಮಾಡಬಹುದು ಎನ್ನಲು ಇದು ಪಾಕಿಸ್ತಾನ ಅಲ್ಲ ಹಿಂದೂಸ್ತಾನ. ಮಂಗಳೂರು ಪಾಕಿಸ್ತಾನದ ಜಿಲ್ಲೆಯಲ್ಲ, ನೆನಪಿಟ್ಟುಕೊಳ್ಳಿ. ವಿಡಿಯೋ ಪತ್ರಿಕೆ ವರದಿ ಆಧರಿಸಿ ಎಲ್ಲರನ್ನು ಅರೆಸ್ಟ್ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಆಗ್ರಹಿಸಿದ್ದಾರೆ.

ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ನಮಾಜ್ ಮಾಡಿರುವ ಘಟನೆ ಕಳೆದ ಶುಕ್ರವಾರ ನಡೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯಿಸಿದ್ದು ರಾಜ್ಯ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರು ಹಿಂದುತ್ವ ವೀರರ ಭೂಮಿ. ರಸ್ತೆಯಲ್ಲಿ ನಮಾಜ್ ಮಾಡಲು ದುಷ್ಟ ಶಕ್ತಿಗಳ ಯಶಸ್ವಿಯಾಗಿದ್ದು ನೋವಾಗಿದೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಸರ್ಕಾರ ಸತ್ತಿದೆಯೋ, ಬದುಕಿದೆಯೋ ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್‌ ಠಾಣೆಗೆ ಪ್ರೈವೇಟ್ ಸೆಕ್ಯೂರಿಟಿ ನೀಡಬೇಕು ಎನ್ನುವ ಚರ್ಚೆಯಾಗುತ್ತಿದೆ. ಗೃಹ ಮಂತ್ರಿಗಳು ಆ ಸ್ಥಾನದಲ್ಲಿ ಉಳಿಯಲು ಸಮರ್ಥ ಅಲ್ಲ . ಉಡುಪಿ ಗ್ಯಾಂಗ್ ವಾರ್, ಕೊಲೆಗಳು, ಠಾಣೆಗಳ ಮೇಲೆ ದಾಳಿಯನ್ನು ಸಿಎಂ ಗೃಹ ಸಚಿವರು ಸಮರ್ಥನೆ ಮಾಡುತ್ತಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ರಾಜ್ಯದಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕಾಗುತ್ತದೆ ಇದು ನನ್ನ ಎಚ್ಚರಿಕೆ ಎಂದಿದ್ದಾರೆ.

ಮಂಗಳೂರಿನ ಕಂಕನಾಡಿಯಲ್ಲಿ ನಡು ರಸ್ತೆಯಲ್ಲೇ ನಮಾಜ್ ಮಾಡಿರುವ ಘಟನೆ ಕಳೆದ ಶುಕ್ರವಾರ ನಡೆದಿದ್ದು ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಕಂಕನಾಡಿಯಲ್ಲಿನ ಮಸೀದಿ ಮುಂದೆ ಇರುವ ರಸ್ತೆಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಗಿದೆ.