ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರು ಜುಲೈ 26ರಂದು ರಾತ್ರಿ ತಮ್ಮ ಕೋಳಿ ಅಂಗಡಿ ಮುಚ್ಚುತ್ತಿದ್ದಾಗ ವ್ಯವಸ್ಥಿತ ಸಂಚು ರೂಪಿಸಿ ಎರಡು ಬೈಕ್‍ಗಳಲ್ಲಿ ಬಂದ ಮುಸುಕು ದಾರಿ ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಚ್ಚು, ಲಾಂಗ್‍ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಅಂದಿನಿಂದ ಆರೋಪಿಗಳ ಪತ್ತೆಗಾಗಿ ಪೊಲೀಸರು ಐದು ತಂಡಗಳನ್ನಾಗಿ ಮಾಡಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಆರೋಪಿಗಳು ರಾಜ್ಯದ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
ತನಿಖಾ ಸಂದರ್ಭದಲ್ಲಿ ದುಷ್ಕರ್ಮಿಗಳು ಬಯಸಿದ್ದ ಬೈಕ್ ನಂಬರ್ ಕೇರಳ ನೊಂದಣಿ ಸಂಖ್ಯೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ತನಿಖೆ ಮುಂದುವರೆಸಿ, ಆರೋಪಿಗಳಿಗೆ ಬೈಕ್ ನೀಡಿದ್ದ ಸುಳ್ಯದ ಕಬೀರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕಬೀರ್ ತನ್ನ ಪರಿಚಯಿಸ್ಥನಿಂದ ಬೈಕ್ ಪಡೆದು ಅದನ್ನು ಹಂತಕನಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಪ್ರಮುಖ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು.