Sunday, 15th December 2024

ಸುರಕ್ಷತಾ ಕ್ರಮ ಅನುಸರಿಸಿದರೆ ಅಪಘಾತ ತಪ್ಪಿಸಬಹುದು

ತಿಪಟೂರು: ವಾಹನ ಸವಾರರು ರಸ್ತೆ ಸುರಕ್ಷತಾ ಕ್ರಮಗಳನ್ನು ತಿಳಿದುಕೊಂಡು ವಾಹನದಲ್ಲಿ ಸಂಚರಿಸಿದಾಗ ಅಪಘಾತಗಳಿಂದ ದೂರ ಉಳಿಯಬಹುದು ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ತಿಳಿಸಿದರು.

ನಗರದ ಹಾಸನ ಸರ್ಕಲ್ ಬಳಿಯ ಅದ್ವೆöÊತ್ ಹೊಂಡೈ ಕಾರ್ ಮಾರಾಟ ಹಾಗೂ ಪ್ರದರ್ಶನ ಮಳಿಗೆಯಲ್ಲಿ ಹೊಂಡೈ ಮೋರ‍್ಸ್ ಇಂಡಿಯಾ ಲಿಮಿಟೆಡ್ ಕಂಪನಿ ವತಿಯಿಂದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಾರುಕಟ್ಟೆಗೆ ಹೊಸ ವಿನ್ಯಾಸವುಳ್ಳ ಹುಂಡೈ ಎಕ್ಸೆಡರ್ ಕಾರನ್ನು ಲೋಕರ್ಪಣೆ ಮಾಡಿ ಮಾತನಾಡಿದರು.

ಸಂಧರ್ಭದಲ್ಲಿ ಅದ್ವೆöÊತ್ ಹೊಂಡೈ ಕಾರ್ ವ್ಯವಸ್ಥಾಪಕ ಆದರ್ಶ ಸಿ.ಎನ್, ಸರ್ವಿಸ್ ಮ್ಯಾನೇಜರ್ ವಸಂತ್‌ಕುಮಾರ್, ವಿಶ್ವನಾಥ್, ಸಂಪಿಗೆ ಸುರೇಶ್, ಉಮೇಶ್ ಮತ್ತಿತ್ತರು ಹಾಜರಿದ್ದರು.