Sunday, 15th December 2024

ಕಾಯಕ ಮತ್ತು ದಾಸೋಹದಿಂದ ಮಾನವನ ಪ್ರಗತಿ ಸಾಧ್ಯ

ತಿಪಟೂರು: 12ನೇ ಶತಮಾನದ ಬಸವಾದಿ ಶರಣರು ಶರಣ ರ‍್ಮದ ಆಧಾರದಡಿ ಕಾಯಕದ ಮಹತ್ವವನ್ನು ಅರಿತು ಪ್ರತಿಯೊಬ್ಬ ಮನುಷ್ಯನು ಆಧ್ಯಾತ್ಮ ಜ್ಞಾನದ ಜೊತೆಗೆ ಕಾಯಕ ಮತ್ತು ದಾಸೋಹದ ಮನೋಭಾವವನ್ನು ಚಾಚು ತಪ್ಪದೆ ಪಾಲಿಸಿ ರ‍್ವ ಸಮಾನತೆಯ ಸ್ವಾಸ್ಥ್ಯ ಸಮಾಜ ನರ‍್ಮಾಣಕ್ಕೆ ಹಗಲಿರುಳು ಶ್ರಮಿಸಿದವರು ಶರಣರ ಕಾಯಕ ನಿಷ್ಠೆಯಿಂದ ಶ್ರೇಷ್ಠರೆನಿಸಿದರು.

ದುಡಿಯುವ ರ‍್ಗವು ನಿಷ್ಠೆಯಿಂದ ಕಾಯಕ ಮತ್ತು ದಾಸೋಹದ ಅನುಭವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಪ್ರತಿಯೊಬ್ಬ ಮಾನವನ ಪ್ರಗತಿ ಸಾಧ್ಯ ಎಂಬುದು ಅವರ ಆರ‍್ಶ ಬದುಕಿನಿಂದ ನಮಗೆ ಪ್ರೇರಕವಾಗಿದೆ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣ ಕೆ ಎಂ ಪರಮೇಶ್ವರಯ್ಯ ಅಭಿಪ್ರಾಯಪಟ್ಟರು ನಗರದ ವಿದ್ಯಾ ನಗರ ಬಡಾವಣೆ ಶ್ರೀ ಸತ್ಯ ಗಣಪತಿ ಸಮುದಾಯ ಭವನದಲ್ಲಿ ರ‍್ಪಡಿಸಿದ್ದ ಬಸವ ಜಯಂತಿ ಹಾಗೂ ಕಾಯಕ ದಿನ ಮತ್ತು ದತ್ತಿ ಉಪನ್ಯಾಸದ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ತಾಲೂಕುಪ್ರಧಾನ ಕರ‍್ಯರ‍್ಶಿ ಸರ‍್ಥವಳ್ಳಿ ಶಿವಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ ಕಳೆದ ಆರು ಏಳು ರ‍್ಷಗಳಿಂದ ತಿಪಟೂರು ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ರ‍್ಷ ಮೇ ಒಂದರಂದು ವಿಶ್ವ ಕಾಯಕ ದಿನದ ಅಂಗವಾಗಿ ವಿವಿಧ ಕಾಯಕದಲ್ಲಿ ನಿರತರಾದ ಶ್ರೇಷ್ಠ ಕಾಯಕ ಜೀವಿಗಳಿಗೆ , ದುಡಿಯುವ ರ‍್ಗವನ್ನ ಶರಣರ ಸಮಾನತೆಯ ಸಮಾಜಕನುಗುಣವಾಗಿ ಎಲ್ಲ ರ‍್ಗದ ಕಾಯಕಯೋಗಿಗಳಿಗೆ ಗೌರವವನ್ನು ಸಲ್ಲಿಸುತ್ತಾ ಬಂದಿರುವುದು ಸಂತೋಷವನ್ನು ತಂದಿದೆ ಎಂದು ಅಂದಿನ ಸಮಾಜದಲ್ಲಿ ಸ್ತ್ರೀ ಯು ಸಮಾಜದ ಮೂಢನಂಬಿಕೆ ಮತ್ತು ಕಟ್ಟುಪಾಡುಗಳಿಗೆ ಒಳಪಟ್ಟು ಜೋಶಿತಳಾಗಿದ್ದ ಸಂರ‍್ಭದಲ್ಲಿ ಇಡೀ ವಿಶ್ವದಲ್ಲೆ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಸಮಾಜದಲ್ಲಿ ಎಲ್ಲ ರೀತಿಯ ಸಮಾನತೆಯನ್ನು ದೊರಕಿಸಿ ಕೊಟ್ಟವರು ಶರಣರು.

ಆಂದಿನ ಕಾಲಘಟ್ಟದ ಅಕ್ಕಮಹಾದೇವಿ ಸತ್ಯಕ್ಕ ಆಯ್ದಕ್ಕಿ ಲಕ್ಕಮ್ಮ ಮುಂತಾದ ಸ್ತ್ರೀಯರು ಕಾಯಕದ ಮಹತ್ವವನ್ನು ಜಗತ್ತಿಗೆ ತೋರಿಸಿಕೊಟ್ಟಂತಹ ಶ್ರೇಷ್ಠರು ಎಂದು ಶಿಕ್ಷಕಿ ಶರಣೆ ವಿ ಎನ್ ಕವಿತಾ ತಿಳಿಸಿದರು ಅವರು ದತ್ತಿ ಉಪನ್ಯಾಸದಲ್ಲಿ ಸ್ತ್ರೀ ಸಮಾನತೆ ಮತ್ತು ಕಾಯಕದ ಮಹತ್ವ ಕುರಿತು ಮಾತನಾಡಿದರು ಶರಣ ಚಿಂತಕರಾದ ದಿಬ್ಬದಹಳ್ಳಿ ಶಮಸುಂದರ್ ಶರಣರ ಆರ‍್ಶ ಬದುಕು ಇಂದಿನ ಸಮಾಜಕ್ಕೆ ಅತ್ಯವಶ್ಯಕವಾಗಿದ್ದು ನಾವೆಲ್ಲರೂ ಶರಣರ ಮರ‍್ಗದಲ್ಲಿ ನಡೆದಿದ್ದೆ ಆದರೆ ನಮ್ಮ ಬದುಕು ಹಸನಾಗುವು ದರಲ್ಲಿ ಸಂಶಯವಿಲ್ಲ ಎಂದರು.

ವಿದ್ಯಾನಗರ ಸತ್ಯ ಗಣಪತಿ ಸೇವಾ ಟ್ರಸ್ಟ್ ನ ಮುಖ್ಯಸ್ಥರಾದ ಶರಣ ರಾಜಶೇಖರಯ್ಯ ಕರ‍್ಯಕ್ರಮವನ್ನು ಬಸವಜೋತಿ ಬೆಳಗಿಸುವು ದರ ಮುಖಾಂತರ ಉದ್ಘಾಟಿಸಿದರು.

ವೇದಿಕೆಯಲ್ಲಿ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಹಿರಿಯರು ಆದ ಶರಣೆ ಸ್ರ‍್ಣ ಗೌರಮ್ಮನವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕರ‍್ಯರ‍್ಶಿ ಶ್ರೀ ಮಂಜಪ್ಪನವರು ತಾಲೂಕು ಕಲ್ಪಶ್ರೀ ಕಲಾವಿದರ ಸಂಘದ ಅಧ್ಯಕ್ಷರಾದ ಶ್ರೀ ಟಿ ಎಚ್ ಬಸವರಾಜು ತಾಲೂಕು ನಿವೃತ್ತ ನೌಕರರ ಸಂಘದ ಪ್ರಧಾನ ಕರ‍್ಯರ‍್ಶಿ ಪಿ ಆರ್ ಗುರುಸ್ವಾಮಿ ಹಿರಿಯ ರಾದ ಕೊಬ್ಬರಿಬ್ಬರಿ ರ‍್ತಕ ಪರಮಶಿವಯ್ಯ ಸ್ಥಳೀಯ ರಾದ ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ತಿಪಟೂರಿನ ಗೋವಿನಪುರ ಬಡಾವಣೆಯ ಲಿಂಗೈಕ್ಯ ವಿಜಯಮ್ಮ ಮತ್ತು ಲಿಂಗೈಕ್ಯ ಶರಣ ಶಿವಣ್ಣನವರ ಸಂಸ್ಮರಣರ‍್ಥ ವಿಶೇಷ ದತ್ತಿ ಉಪನ್ಯಾಸ ಕರ‍್ಯಕ್ರಮವನ್ನು ಶ್ರೀಮತಿ ಸುಮಿತ್ರ ಮತ್ತು ಕುಟುಂಬದವರು ಉಪಸ್ಥಿತರಿದ್ದು ನಡೆಸಿಕೊಟ್ಟರು ಕಾಯಕ ದಿನದ ಅಂಗವಾಗಿ ತಾಲೂಕಿನ ವಿವಿಧ ಭಾಗಗಳ ವಿವಿಧ ಕಾ ಕಾಯಕ ಜೀವಿಗಳಿಗೆ ಗೌರವ ಸಲ್ಲಿಸಲಾಯಿತು ಶರಣ ಸಾಹಿತ್ಯ ಪರಿಷತ್ತಿನ ಸಂಘಟನಾ ಕರ‍್ಯರ‍್ಶಿ ಶ್ರೀ ಕೆಎಂ ಶಿವಕುಮಾರ ಸ್ವಾಮಿ ರೇಣುಕಾರಾಧ್ಯ ಸೇರಿದಂತೆ ನೂರಾರು ಸಂಖ್ಯೆಯ ಶರಣರು ಉಪಸ್ಥಿತರಿದ್ದರು ದತ್ತಿದಾನೆಗಳ ಕುಟುಂಬದಿಂದ ರ‍್ವರಿಗೂ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.