Sunday, 15th December 2024

ಮನುಷ್ಯತ್ವ ತೋರಿದ ಬಸ್ ಚಾಲಕ, ನಿರ್ವಾಹಕ

ತಿಪಟೂರು: ಶಿವಮೋಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ( ಕೆ.ಎ ೧೭ ಎಫ್ ೧೬೪೭ ) ಭದ್ರಾವತಿ ಘಟಕದ ಬಸ್ ತಿಪಟೂರು ಬಸ್ ನಿಲ್ದಾಣದಲ್ಲಿ ಪ್ರಯಾಣೀಕರನ್ನು ತಿಪಟೂರು ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಳ್ಳುವ ಸಂಧರ್ಭ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈಶ್ವರ್‌ ರೆಡ್ಡಿಯವರಿಗೆ ಬಸ್‌ನಲ್ಲಿ ಉಸಿ ರಾಟ ಮಾಡಲು ಆಗದೆ ಬಸ್‌ನಲ್ಲಿಯೇ ಕುಸಿದರು.

ಮೂರ್ಛೆ ಬಂದು ನಾಲಿಗೆಯಲ್ಲಿ ನೊರೆ ಹಾಗೂ ರಕ್ತ ಬರುತ್ತಿರುವುದನ್ನು ಗಮನಿಸಿದ ನಿರ್ವಾಹಕ ಓಂಕಾರ್ ತಕ್ಷಣ ಚಾಲಕ ಪ್ರಕಾಶ್‌ಗೆ ಮಾಹಿತಿ ತಿಳಿಸಿ ಬಸ್‌ ನಲ್ಲಿಯೇ ತುರ್ತು ವಾಹನದ ರೀತಿಯಲ್ಲಿ ತಿಪಟೂರಿನ ಸಾರ್ವಜನಿಕ ಆಸ್ವತ್ರೆಗೆ ಕರೆದು ತಂದು ತಕ್ಷಣ ಚಿಕಿತ್ಸೆ ನೀಡಿ ಮಾನವೀ ಯತೆ ಹಾಗೂ ಮನುಷ್ಯತ್ವವನ್ನು ಮೆರೆದಿದ್ದು ಒಬ್ಬ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ತಿಪಟೂರು ನಗರದಲ್ಲಿ ನೆಡೆಯಿತು.

*

ಚಿಕಿತ್ಸೆಗೆ ಒಳಗಾದ ಪ್ರಯಾಣಿಕನ್ನು ಆಟೋದಲ್ಲಿ ಆಸ್ವತ್ರೆಗೆ ಹೋಗಿ ಎಂದು ಹೇಳಬಹುದಿತ್ತು ಆದರೆ ಪ್ರಯಾಣಿಕರಿಂದ ಇಂದು ನಮ್ಮಗಳ ಪುಟ್ಟ ಜೀವನವು ನಡೆಯುತ್ತಿದೆ ಹಾಗೂ ಕಷ್ಟದಲ್ಲಿರುವಾಗ ಸಹಾಯ ಮಾಡುವುದು ಸಹ ನಮ್ಮ ಕರ್ತವ್ಯವಾಗಿರಬೇಕು ಓಂಕಾರ್ ಹಾಗೂ ಪ್ರಕಾಶ್, ಚಾಲಕ ನಿರ್ವಾಹಕ

ತುರ್ತು ಸಂಧರ್ಭದಲ್ಲಿ ನನ್ನನ್ನು ಬಸ್‌ನಲ್ಲಿಯೇ ಕರೆದು ತಂದು ಸಾರ್ವಜನಿಕ ಆಸ್ವತ್ರೆಗೆ ದಾಖಲು ಮಾಡಿ ಪ್ರಾಣಾಪಾಯದಿಂದ ನನ್ನನ್ನು ತಪ್ಪಿಸಿದ್ದಾರೆ, ಸಾರ್ವಜನಿಕ ಆಸ್ವತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿದ್ದಾರೆ.

ಈಶ್ವರ್‌ರೆಡ್ಡಿ ಚಿಕಿತ್ಸೆಯ ಪ್ರಯಾಣೀಕ.