Thursday, 21st November 2024

ರೈತರ ಅಭಿವೃದ್ಧಿಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ

ಕೃಷಿ ಯೋಜನೆಗಳ ಅನುಷ್ಠಾನ ಮಾಡಲು ಮಂಡ್ಯದಲ್ಲಿ ಸ್ಪರ್ಧೆ: ಕುಮಾರಸ್ವಾಮಿ

ತಿಪಟೂರು: ರಾಜ್ಯದ ನೀರಾವರಿ ಯೋಜನೆಗಳಿಗೆ, ರೈತರ ಬದುಕನ್ನು ಹಸನಗೊಳಿಸಲು, ಹೊಸ ಕೃಷಿ ನೀತಿಗಳನ್ನು ಅಳವಡಿ ಸಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ನೊಣವಿನಕೆರೆ ಗ್ರಾಮದಲ್ಲಿ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ಮತಯಾಚನೆ ಸಂದರ್ಭ ಹಾಗೂ ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದರು.

ಸಾಲ ಮನ್ನಾ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡಿದ ಯಡಿಯೂರಪ್ಪ ಹಾಗೂ ನಾನು ಸೇರಿ ಜನರಿಗೆ ನೀಡಿದ ಸರ್ಕಾರದ ಯೋಜನೆಗಳನ್ನು ಮತ್ತೆ ಮರುಗಳಿಸಬೇಕಾಗಿದ್ದು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ತಾವುಗಳು ಮೈತ್ರಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಕೊಬ್ಬರಿ ಬೆಳೆಯ ಬೆಲೆಯು ಕಡಿಮೆ ಯಾಗಿದ್ದು ರಾಜ್ಯ ಸರ್ಕಾರ ನೀಡಿರುವ ೧೫೦೦ ಬೆಂಬಲ ಬೆಲೆಯನ್ನು ನೀಡಿದ್ದರೂ ಸಹ ಯಾರಿಗೂ ಸಹ ನೀಡಿರುವುದಿಲ್ಲ, ಮುಂದಿನ ದಿನಗಳಲ್ಲಿ ೧೫ ರಿಂದ ೧೬ ಸಾವಿರಕ್ಕೆ ನಿಗದಿ ಮಾಡಲಾಗುವುದು ಎಂದರು.

ಮತ್ತೊಮ್ಮೆ ಕಾಂಗ್ರೆಸ್ ಗೆಲುವಾದರೆ ಗ್ಯಾರೆಂಟಿ ಯೋಜನೆಗಳ ಮೇಲಿರುವ ಸಾಲದ ಹೊರೆಯನ್ನು ಮತ್ತೊಮ್ಮೆ ನಮ್ಮ ಮೇಲೆ ತೆರಿಗೆ ರೂಪದಲ್ಲಿ ಹೊರೆಸುತ್ತಾರೆ ಇದನ್ನು ತಪ್ಪಿಸಲು ಮೋದಿಯವರನ್ನು ಬೆಂಬಲಿಸಿ ಎಂದರು.

ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ ಕಾರ್ಯಕರ್ತರು ಮತಗಟ್ಟೆಗಳಲ್ಲಿ ಸರಿಯಾಗಿ ಕೆಲಸ ಮಾಡಿದರೆ ವಿ.ಸೋಮಣ್ಣ ಏರಡು ಲಕ್ಷ ಮತಗಳ ಅಂತರದಿAದ ಗೆಲುವು ಸಾಧ್ಯ. ರಾಜ್ಯಾದ ೨೮ ಕ್ಷೇತ್ರಗಳಲ್ಲಿಯೂ ಸಹ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲವು ಸಾಧ್ಯವಾಗುವ ಸ್ಥಿತಿಯಲ್ಲಿದ್ದು ತಾವುಗಳು ಸಹ ತುಮಕೂರು ಅಭ್ಯರ್ಥಿಯ ಗೆಲುವಿಗೆ ಸಹಕರಿಸ ಬೇಕು ಎಂದರು.

ಮಾಜಿ ಸಚಿವ ಬಿ.ಸಿ ನಾಗೇಶ್ ಮಾತನಾಡಿ ರಾಷ್ಟçದ ಅಭಿವೃದ್ದಿಗಾಗಿ ಜನರ ಕಲ್ಯಾಣಕ್ಕಾಗಿ ಭವ್ಯ ಭಾರತವನ್ನು ಸದೃಢಗೊಳಿ ಸಲು ಮೋದಿಯವರನ್ನು ಬೆಂಬಲಿಸಬೇಕು ಎಂದರು.

ಪ್ರಚಾರ ಕಾರ್ಯದಲ್ಲಿ ರಾಜ್ಯಸಭಾ ಸದಸ್ಯ ಜಗ್ಗೇಶ್, ಶಾಸಕ ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್, ಶಾಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಗುಲಾಬಿ ಸುರೇಶ್, ಆಯರಹಳ್ಳಿ ಶಂಕರಪ್ಪ, ಬಿಸಲೇಹಳ್ಳಿ ಜಗದೀಶ್ ಮತ್ತಿತರರು ಹಾಜರಿದ್ದರು. ಬೃಹತ್ ರೋಡ್ ಶೋನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.