Thursday, 21st November 2024

ಶಿಕ್ಷಣದ ಮಹತ್ವವು ಎಲ್ಲಡೆ ಫಸರಿಸಿ ದೇಶಾಭಿಮಾನ ಮೂಡಬೇಕು: ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ

ತಿಪಟೂರು: ವಿದ್ಯೆ ನೀಡಿದ ಶಿಕ್ಷಕರನ್ನು ಸ್ಮರಣೆ ಮಾಡುತ್ತಾ ಗ್ರಾಮ ಮಟ್ಟದಲ್ಲಿ ರೈತರ ಸಂಘಟನೆ ಮಾಡಿ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದಾಗ ಶಿಕ್ಷಣ ಕಲಿಸಿದಾಗ ಶಿಕ್ಷಕ ವೃತ್ತಿಗೆ ಸಾರ್ಥಕತೆ ಸಿಗುತ್ತದೆ ಎಂದು ನಿವೃತ್ತ ಶಿಕ್ಷಕ ಮರುಳ ಸಿದ್ದಪ್ಪ ತಿಳಿಸಿದರು.

ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಶ್ರೀ ರಂಗನಾಥ ತೆಂಗು ಉತ್ಪಾದಕರ ಸಂಘದ ವತಿ ಯಿಂದ ಸ್ವಾತ್ರಂತ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇ ರಿಸಿ ಮಾತನಾಡಿದ ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರ ಶೇಖರ್ ಸ್ವಾತಂತ್ರ‍್ಯ ದಿನಾಚರಣೆ ಸರ್ಕಾರಿ ಕಾರ್ಯಕ್ರಮವಾಗದೆೆ ಎಲ್ಲರ ಮನೆ – ಮನ ಗಳಲ್ಲೂ ಸಹ ಕಾರ್ಯಕ್ರಮ ರೂಪಗೊಂಡಾಗ ಹಬ್ಬದ ವಾತಾವರಣ ಉಂಟಾಗುತ್ತದೆ. ಅದರಂತೆ, ತೆಂಗು ಸಂಘಟನೆಯೂ ಸಹ ಕಾರ್ಯಕ್ರಮವನ್ನು ಆಚರಣೆ ಮಾಡಿರುವುದು ಉತ್ತಮ ವಾಗಿದೆ.

ತಿಪಟೂರು ತೆಂಗಿನ ಬೆಳೆಯಲ್ಲಿ ವಿಶ್ವಪ್ರಸಿದ್ಧಿಯನ್ನು ಹೊಂದಿದ್ದು ಕಲ್ಪತರು ನಾಡು ಎಂದು ಹೆಸರಾಗಿದೆ, ಅದೇ ರೀತಿಯಲ್ಲಿ ರೈತನು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆತಾಗ ಮಾತ್ರ ರೈತ ಆರ್ಥಿಕವಾಗಿ ಸಧೃಡ ವಾಗಬಹುದು ಹಾಗೂ ತೆಂಗು ಬೆಳೆಗೆ ಸಂಬ0ಧಪಟ್ಟ0ತೆ ಇಲಾಖೆ ವತಿಯಿಂದ ಹಲವಾರು ಪ್ರತ್ಯಾಕ್ಷತೆಗಳ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದ್ದು ಇದರ ಪ್ರಯೋಜನವನ್ನು ರೈತಾಪಿ ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿ ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಂಗನಾಥ ತೆಂಗು ಉತ್ಪಾದಕರ ಸಂಘದ ಅಧ್ಯಕ್ಷ ಶಂಕರಮೂರ್ತಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ‍್ಯ ಹಲವಾರು ಪುಣ್ಯಪುರುಷಗಳ ತ್ಯಾಗ ಮತ್ತು ಬಲಿದಾನದ ಮೂಲಕ ಸ್ವಾತಂತ್ರ‍್ಯದ ದೊರೆತಿದ್ದು ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ ಅಷ್ಟೇ ಕೃಷಿಕನಾದ ರೈತರು ಸಹ ಅತಿಮುಖ್ಯವಾಗಿದ್ದಾನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರು ಶಂಕರ್‌ರಾವ್ ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ ಇವರಿಗೆ ಸನ್ಮಾನಿಸಲಾಯಿತು.

ಕಾರ್ಯ ಕ್ರಮದಲ್ಲಿ ಸಂಘದ ಖಜಾಂಜಿ ಕೆರಗೋಡಿ ರಾಜಶೇಖರ್ ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀಮತಿ ರಕ್ಷಿತಾ, ನಿವೃತ್ತ ದೈಹಿಕ ಶಿಕ್ಷಕ ಶಂಕರಮೂರ್ತಿ ಉಪಾಧ್ಯಕ್ಷ ಮನೋಹರ್, ಪ್ರಗತಿಪರ ರೈತರಾದ ಚೆನ್ನೇಗೌಡಮತ್ತಿಹಳ್ಳಿ. ಜಯಣ್ಣ, ನವೀನ್, ರವೀಂದ್ರ, ರೇಣುಕಪ್ಪ ಬನ್ನಿಹಳ್ಳಿ, ಬ್ರಹ್ಮಲಿಂಗೇಶ್ವರ ತೆಂಗು ಉತ್ಪಾದಕರ ಸಂಘದ ಅದ್ಯಕ್ಷ ಪ್ರಶಾಂತ್‌ ಕರೀಕೆರೆ, ಮತ್ತಿಹಳ್ಳಿ ನೇಗಿಲಯೋಗಿ ಈಶ್ವರಪ್ಪ ಸ್ವಾಗತಿಸಿ, ವಿವೇಕ್ ವಂದಿಸಿದರು ಮುಂತಾದವರು ಭಾಗವಹಿಸಿದ್ದರು.