Monday, 14th October 2024

ಸಹಕಾರಿ ಸಂಘಗಳು ಪ್ರತಿ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ

ತಿಪಟೂರು: ಸಹಕಾರಿ ಸಂಘಗಳು ಕೇವಲ ಬ್ಯಾಕಿಂಗ್ ಕ್ಷೇತ್ರ ದತ್ತ ಗಮನಹರಿಸುತ್ತಾ ಜೊತೆ-ಜೊತೆಯಲ್ಲಿಯೂ ಷೇರುದಾರರ ಕುಟುಂಬಗಳ ಆರ್ಥಿಕತೆ ಸಾಮಾಜಿಕ ಬದ್ದತೆಗೆ ಹೆಚ್ಚು ಗಮನ ನೀಡಿ, ಜನಸಾಮಾನ್ಯರ ವಲಯದಲ್ಲಿ ಸಹಕಾರಿ ಬ್ಯಾಂಕ್‌ಗಳು ಉಳಿಯ ಬೇಕಾದರೆ ಸಮಾಜದಲ್ಲಿ ಸಾಮಾಜಿಕ ಕಳಕಳಿಯ ಕೆಲಸಗಳು ನೆಡೆಯುತ್ತಿದ್ದು, ಅನ್ನ ದಾತನ ನೆರವಿಗೆ ಸಹಕಾರಿ ಬ್ಯಾಂಕ್‌ ಗಳು ಸದಾ ಪ್ರಯೋಜನಕಾರಿಯಾಗಿದ್ದಾಗ ಮಾತ್ರ ಸುಧೀರ್ಘ ಕಾಲ ವ್ಯವಸ್ಥಿತವಾಗಿ ಉಳಿಯುತ್ತವೆ ಎಂದು ಕೆರಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶೀಕೇಂದ್ರ ಮಹಾಸ್ವಾಮಿಜಿ ತಿಳಿಸಿದರು.

ನಗರದ ದೊಡ್ಡಯ್ಯನಪಾಳ್ಯದ ಶ್ರೀ ಚೌಡೇಶ್ವರಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಎಸ್‌ಎನ್‌ಎಸ್‌ ಕನ್ವೆಕ್ಷನ್ ಹಾಲ್‌ನಲ್ಲಿ ನಡೆದ ಸಮಾರಂಬದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸಹಕಾರಿ ಸಂಘಗಳು ಪ್ರತಿ ಕ್ಷೇತ್ರಗಳಲ್ಲಿಯೂ ತಮ್ಮದೇ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ. ಸಾಮಾಜಿಕ ಕ್ಷೇತ್ರದಲ್ಲಿಯೂ ಉತ್ತಮ ಜನಸ್ಪಂದನೆ ದೊರಕುತ್ತಿರುವುದು ಉತ್ತಮ ಬೆಳವಣಿಗೆ, ಸಾಮಾಜಿಕ ಅಸಮತೋಲನವನ್ನು ಸರಿಪಡಿಸಲು ಸಹಕಾರಿ ಸಂಘಗಳು ಶ್ರಮಿಸಲಿ. ೨೧ ವರ್ಷಗಳ ಸುಧೀರ್ಘವಾದ ಸೇವೆಗೆ ಇಂದು ಸುಸಜ್ಜಿತವಾದ ಕಟ್ಟಡ ಸಹಕಾರಿಯದ್ದಾಗಿದೆ, ಸಹಕಾರಿ ಮತ್ತು ಸದಸ್ಯರ ನಡುವಿನ ಸಂಬ0ಧ ಮತ್ತು ನಂಬಿಕೆಗೆ ಅರ್ಹವಾಗಿದೆಎನ್ನುವುದನ್ನು ಸೂಚಿಸುತ್ತದೆ ಎಂದರು.

ಲೋಕಸಭಾ ಸಂಸದಜಿ.ಎಸ್.ಬಸವರಾಜುರವರು ಮಾತನಾಡಿ, ರಾಷ್ಟಿçÃಯ ಬ್ಯಾಂಕುಗಳಿಗಿAತ ಸಹಕಾರಿ ಬ್ಯಾಂಕುಗಳೇ ಇಂದು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ, ಬಡ ಮತ್ತು ಮದ್ಯ ವರ್ಗದಜನರಿಗೆ, ಅದರಜೊತೆಗೆ ವ್ಯಾಪಾರಿ ವರ್ಗದವರಿಗೆ ಇಂತಹ ಸಹಕಾರಿಗಳು ಆಧಾರ ಸ್ತಂಭವಾಗಿದೆ. ಸಹಕಾರಿಗಳು ಸಾಲ ವಸೂಲಾತಿಯ ಸಂದರ್ಭದಲ್ಲಿ ಕಾನೂನಿಗಿಂತ ಮಾನವೀಯತೆಯ ಆಧಾರದ ಮೇಲೆ ವರ್ತಿಸಬೇಕು ಮತ್ತು ಅತ್ಯಂತ ಪ್ರಾಮಾಣಿಕತೆಯಿಂದ ನಡೆದರೆ ಸಹಕಾರಿಯ ಅಭಿವೃದ್ಧಿಯು ಸಾಧ್ಯವೆಂದು ತಿಳಿಸಿದರು.

ಸಹಕಾರರತ್ನ ಮತ್ತು ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಿ.ವಿ.ಮಹಾಲಿಂಗಯ್ಯ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಸದಸ್ಯರಿಗೆ ನಂಬಿಕೆಯನ್ನು ಮೂಡಿಸಬೇಕು, ಇದಕ್ಕೆ ಸಹಕಾರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಅತೀಮುಖ್ಯ. ಈ ಸಹಕಾರಿಯು ೨೦ ವರ್ಷಗಳ ಅವದಿಯಲ್ಲಿ ೩ ಕೋಟಿ ರೂಗಳ ಸುಸಜ್ಜಿತ ಕಟ್ಟಡವನ್ನು ಹೊಂದಿದೆ ಎಂದಾದರೆ ಸಹಕಾರಿಯ ಕರ್ತವ್ಯ ನಿಷ್ಠೆ ಅರಿವಾಗುತ್ತದೆ ಎಂದರು.

ಸಹಕಾರಿಯ ಅಧ್ಯಕ್ಷ ಸೋಮಶೇಕರ್ ಮಾತನಾಡಿ, ರಾಜ್ಯ ಮತ್ತು ದೇಶದ ಅಭಿವೃದ್ದಿಗೆ ಸಹಕಾರಿಗಳ ಕೊಡುಗೆ ಇದೆ, ಸಹಕಾರಿ ಯು ಅಭಿವೃದ್ಧಿಯನ್ನು ಕಾಣಲು ಪಾರದರ್ಶಕತೆ, ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಕಾಲಕ್ಕೆ ತಕ್ಕಂತೆ ನಿಯಮಗಳನ್ನು ಜಾರಿಗೊಳಿಸುವುದು ಪ್ರಮುಖವಾಗುತ್ತದೆಂದರು.

ಕರ್ನಾಟಕರಾಜ್ಯ ಸೌಹಾರ್ಧ ಸಹಕಾರಿ ನಿಯಮಿತದ ನಿದೇರ್ಶಕರಾದ ಬಿ.ಹೆಚ್.ಕೃಷ್ಣಾರೆಡ್ಡಿ, ಚಾಮುಂಡೇಶ್ವರಿ ಸಹಕಾರಿಯ ಅಧ್ಯಕ್ಷೆ ವಿಶಾಲಾ ಸೋಮಶೇಖರ್, ಉಪಾಧ್ಯಕ್ಷ ಎಂಸಿ ಮಂಜುನಾಥ್, ನಿರ್ದೇಶಕರಾದ ಶಂಕರಮೂರ್ತಿ, ನಟರಾಜ್, ಸಂಜೀವಯ್ಯ, ಶಶಿಕಿರಣ್, ಮಡೇನೂರ್ ಸೋಮಶೇಖರ್, ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಸಿ. ಮೃತ್ಯುಂಜಯ, ಕಲ್ಲೇಶ್ ಸೇರಿದಂತೆ ಸಹಕಾರಿಯ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗರದ ಇತರೆ ಸಹಕಾರಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.

*

ಜನಸಾಮಾನ್ಯರ ವಲಯದಲ್ಲಿ ಸಹಕಾರಿ ಬ್ಯಾಂಕ್‌ಗಳು ಉಳಿಯಬೇಕಾದರೆ ಸಮಾಜದಲ್ಲಿ ಸಾಮಾಜಿಕ ಕಳಕಳಿಯ ಕೆಲಸಗಳು ನೆಡೆಯುತ್ತಿದ್ದು, ಅನ್ನದಾತನ ನೆರವಿಗೆ ಸಹಕಾರಿ ಬ್ಯಾಂಕ್‌ಗಳು ಸದಾ ಪ್ರಯೋಜನಕಾರಿಯಾಗಿದ್ದಾಗ ಮಾತ್ರ ಸುಧೀರ್ಘ ಕಾಲ ವ್ಯವಸ್ಥಿತವಾಗಿ ಉಳಿಯುತ್ತವೆ.

ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಜಿಯವರು ಕೆರೆಗೋಡಿ-ರಂಗಾಪುರ

ರಾಜ್ಯ ಮತ್ತು ದೇಶದ ಅಭಿವೃದ್ದಿಗೆ ಸಹಕಾರಿಗಳ ಕೊಡುಗೆ ಅಪಾರ, ಸಹಕಾರ ಕ್ಚೇತ್ರವು ಅಭಿವೃದ್ಧಿಯನ್ನು ಕಾಣಲು ಪಾರದರ್ಶ ಕತೆ, ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಕಾಲಕ್ಕೆ ತಕ್ಕಂತೆ ನಿಯಮಗಳನ್ನು ಜಾರಿಗೊಳಿಸುವುದು ಅವಶ್ಯಕತೆ.
ಸೋಮಶೇಖರ್ ಅದ್ಯಕ್ಷರು. ಚೌಡೇಶ್ವರಿ ಪತ್ತಿನ ಸಹಕಾರ ಸಂಘ