Saturday, 27th July 2024

ಭಕ್ತಿ ಸಡಗರದಿಂದ ಶ್ರೀರಾಮ ಜಯಂತಿ ಆಚರಣೆ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ಭಕ್ತಿ ಸಡಗರದಿಂದ ಶ್ರೀರಾಮ ಜಯಂತಿಯನ್ನು ಆಚರಣೆ ಮಾಡಲಾಯಿತು.

ಶ್ರೀ ರಾಮನವಮಿ ಜನ್ಮ ದಿನದ ಪ್ರಯುಕ್ತ ಊರಿನ ಮುಂಭಾಗದಲ್ಲಿರುವ ಅರಳಿಕಟ್ಟೆ ಹಾಗೂ ಬೇವಿನ ಮರದ ಕಟ್ಟೆಯನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಶೃಂಗಾರ ಮಾಡಿ ಪುಷ್ಪಗಳಿಂದ ಅಲಂಕಾರ ಮಾಡಿ ಕರೀಕೆರೆ ಗ್ರಾಮದೇವರಾದ ಶ್ರೀ ಬ್ರಹ್ಮಲಿಂಗೇಶ್ವರ ಸ್ವಾಮಿಯ ಪೂಜೆ ಸಲ್ಲಿಸಿ ಊರಿನ ಗ್ರಾಮಸ್ಥರಿಗೆ ಪಾನಕ ಫಲಹಾರ ವಿತರಣೆ ಮಾಡಲಾಯಿತು.

ಶ್ರೀರಾಮನ ಜನ್ಮದಿನವನ್ನು ಆಚರಣೆಯನ್ನು ಕೆಲವು ಕಡೆ ರಾಮನ ಭಕ್ತ ಆಂಜನೇಯ ದೇವಸ್ಥಾನದಲ್ಲಿ, ಅಂಗಡಿ, ಬಸ್, ಆಟೋ ನಿಲ್ದಾಣಗಳಲ್ಲಿ ಶ್ರೀರಾಮನ ಪೋಟೋಗಳನ್ನುಟ್ಟು ವಿಶೇಷ ಪೂಜೆ ಮಾಡಿ ಆಚರಣೆ ಮಾಡಲಾಯಿತು.

ತಾಲೂಕಿನ ವಿವಿಧ ಗ್ರಾಮಗಳಾದ ಹೊನ್ನವಳ್ಳಿ, ನೊಣವಿನಕೆರೆ, ಚಿಕ್ಕಬಿದರೆ, ಗಂಗನಘಟ್ಟ, ರಂಗಾಪುರ ಶ್ರೀಮಠ, ರಾಯರ ತೋಟ, ನಗರದ ಕೋಟೆ ಅಂಜನೇಯ ಸ್ವಾಮಿ ದೇವಾಲಯ, ಕೊನೇಹಳ್ಳಿ, ಬಿಳಿಗೆರೆ ಸುಗೂರು ಮುಂತಾದ ಗ್ರಾಮಗಳಲ್ಲಿ ಜನ್ಮ ದಿನವನ್ನು ಆಚರಣೆ ಮಾಡಿ ಭಕ್ತರಿಗೆ ಪಾಯಸ, ಫಲಾಹಾರ, ಮಜ್ಜಿಗೆ, ಪಾನಕ ಪ್ರಸಾದ ವಿನಿಯೋಗ ಮಾಡಲಾಯಿತು.

*

ಶ್ರೀರಾಮಚಂದ್ರನು ಮಾನವನಾಗಿ ಜನಿಸಿ ಮರ್ಯಾದಿ ಪುರುಷನಾಗಿ, ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾಗಿಸಿದಂತ ವ್ಯಕ್ತಿ ಹಾಗೂ ತನ್ನ ರಾಜ್ಯದಲ್ಲಿ ಪ್ರಜೆಗಳನ್ನು ಶಾಂತಿ ಸಮೃದ್ದವಾಗಿ ಜೀವನ ಮಾಡಲು ಸಹಕಾರಿಯಾಗಿದ್ದು, ವ್ಯಕ್ತಿಯಾಗಿ ಹುಟ್ಟಿ ರಾಜನಾಗಿ ಬೆಳೆದು ಸೇವಕನಾಗಿ ಕೆಲಸ ಮಾಡಿ ನಂತರ ಅಖಂಡ ಹಿಂದೂಗಳ ಮನಸ್ಸಿನಲ್ಲಿ ದೇವರಾಗಿ, ದೈವ ಮಾನವನಾಗಿ ಉಳಿದಿರುವ ರಾಮನ ಭಜನೆಯನ್ನು ಮಾಡಿ ರಾಮನ ಆದರ್ಶಗಳನ್ನು ಮುಂದಿನ ಪೀಳಿಗೆ ಸಾಗಿಸುವುದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲ.
ರಾಮೇಗೌಡ ಹಿರಿಯ ಗ್ರಾಮಸ್ಥರು

Leave a Reply

Your email address will not be published. Required fields are marked *

error: Content is protected !!