Wednesday, 9th October 2024

ತಂಬಾಕು, ಮದ್ಯಪಾನ, ಸಿಗರೇಟ್, ಮಾದಕ ವ್ಯಸನಿಗಳಾಗಬಾರದು

ಗುಬ್ಬಿ : ಯುವ ಪೀಳಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ, ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆ ವಿನಃ ತಂಬಾಕು, ಮದ್ಯಪಾನ, ಸಿಗರೇಟ್, ಮಾದಕ ವ್ಯಸನಿಗಳಾಗಬಾರದು ಎಂದು ನ್ಯಾಯಾ ಧೀಶೆ ಮಂಜುಳ ಉಂಡಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವತಿಯಿಂದ  ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಜಾತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂಬಾಕು ಸೇವನೆ ಮಾಡುವುದರಲ್ಲಿ ಮೂರು ವಿಧದ ಜನಗಳಿದ್ದಾರೆ. ಒಂದನೇ ವರ್ಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ.ಎರಡನೇ ವರ್ಗದವರು ಮಾನಸಿಕ ಒತ್ತಡಕ್ಕೆ ಸಿಲುಕಿದವರು ಚಿಕ್ಕ ಮಕ್ಕಳಿಂದ ವಯೋ ವೃದ್ಧರವರೆಗೂ ಸಣ್ಣ ಸಣ್ಣ ವಿಷಯಕ್ಕೆ ಖಿನ್ನತೆಗೆ ಒಳಗಾದವರು ಮಾದಕ ವಸ್ತುಗಳಿಗೆ ಬಲಿಯಾಗು ತ್ತಿದ್ದಾರೆ. ಮೂರನೇ ವರ್ಗದವರು ಕ್ಷಣಿಕ ಸುಖಕ್ಕೋಸ್ಕರ ಕೆಲವು ಐಷಾರಾಮಿ ಜನರು ಮಾದಕ ವಸ್ತುಗಳಿಗೆ ಬಲಿಯಾಗು ತ್ತಿದ್ದಾರೆ. ಯುವ ಪೀಳಿಗೆ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗಾ,ಧ್ಯಾನ, ಓದುವ ಅಭ್ಯಾಸ, ರೂಡಿಸಿ ಕೊಳ್ಳಬೇಕೆ ವಿನಃ ಮಾದಕ ವಸ್ತುಗಳಾದ ತಂಬಾಕು, ಸಿಗರೇಟು, ಮಧ್ಯ ವ್ಯಸನಿಗಳಾಗಬಾರದು ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಬಿಂದು ಮಾಧವ್ ಮಾತನಾಡಿ ವಿಶ್ವ ಆರೋಗ್ಯ ಸಂಸ್ಥೆಯು ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸುತ್ತಾ ಬಂದಿದೆ.” ನಮಗೆ ಆಹಾರ ಬೇಕು – ತಂಬಾಕು ಬೇಡ” ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ ಚಟಕ್ಕೆ ದಾಸರಾಗದೆ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಶಶಿಕಲಾ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ವಕೀಲರು, ವೈದ್ಯರು ರಸ್ತೆಯಲ್ಲಿ ಜಾತ ನಡೆಸುವ ಮೂಲಕ ತಂಬಾಕಿನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.