Saturday, 14th December 2024

ಕ್ಷೇತ್ರದ ಜನರು ಸರ್ಕಾರ ಬದಲಾಯಿಸಲು ಹವಣಿಸುತ್ತಿದ್ದಾರೆ: ಟೂಡ ಶಶಿಧರ್

ತಿಪಟೂರು: ಭಾರತ್ ಜೋಡೋ ಯಾತ್ರೆ ಪ್ರೇರಣೆಯಿಂದ ತಿಪಟೂರು ಕ್ಷೇತ್ರದಲ್ಲಿ ಕ್ಷೇತ್ರ ಸಂಚಾರದಲ್ಲಿ ೮ ಗ್ರಾಮ ಪಂಚಾಯಿತಿ ಗಳಾದ ಗುಡಿಗೊಂಡನಹಳ್ಳಿ, ಗುಂಗರ ಮಳೆ, ಗ್ಯಾರಘಟ್ಟ, ಹಾಲ್ಕುರಿಕೆ ತಡಸೂರು ಸಾರ್ಥವಳ್ಳಿ ಗುರುಗದಹಳ್ಳಿ ಬಳುವನೇರಲು ಪಂಚಾಯಿತಿ ಕ್ಷೇತ್ರಗಳಲ್ಲಿ ಸಂಚಾರ ನಡೆಸಿದ ಸಂದರ್ಭದಲ್ಲಿ ಗ್ರಾಮದ ಜನರು ತಾಲ್ಲೂಕಿನ ಶೈಕ್ಷಣಿಕ, ಆರೋಗ್ಯ ಮತ್ತು ನಿರುದ್ಯೋಗ ಸಮಸ್ಯೆಯ ಬಗ್ಗೆ ಅಳಿಲು ತೋಡಿಕೊಂಡಿದ್ದಾರೆ. ತಾಲೂಕಿನಲ್ಲಿ ೨೭% ಯುವಕರು ಆರ್ಥಿಕ ಸಬಲೀಕರಣಗೊಳ್ಳಲು ಸರ್ಕಾರದ ನೆರವಿಗಾಗಿ ಅಂಗಲಾಚಿದರು. ಯಾವುದೇ ಪ್ರಯೋಜನವಾಗಿಲ್ಲ. ಕ್ಷೇತ್ರದ ಯುವಕರು ಮತ್ತು ಮಹಿಳೆಯರು ಚುನಾವಣೆಗಾಗಿ ಕಾಯುತ್ತಿದ್ದು ಸರ್ಕಾರ ಬದಲಾಯಿ ಸಲು ಹವಣಿಸು ತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಟೂಡ ಶಶಿಧರ್ ಹೇಳಿದರು.

ನಗರದ ಖಾಸಗಿ ಹೋಟೆಲಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕ್ಷೇತ್ರ ಸಂಚಾರದ ಸಮಯದಲ್ಲಿ ೭೦ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷ ಭೇದ ಮರೆತು ಸರ್ಕಾರ ಬದಲಾವಣೆಗೆ ಬಗ್ಗೆ ಮಾತನಾಡುತ್ತಿದ್ದಾರೆ. ಮುಂದಿನ ಬಾರಿ ಯಾವುದೇ ಸಂಶಯವಿಲ್ಲದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ತಾಲ್ಲೋಕಿನ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರಸೂತಿ ವೈದ್ಯರ ಕೊರತೆಯಿದ್ದು ಸರ್ಕಾರ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಯುವಕರು ವಿದ್ಯೆಯಿದ್ದರೂ ಉದ್ಯೋಗವಿಲ್ಲ ಎಂದರೆ ವಿದ್ಯಾರ್ಥಿಗಳು ನಮಗಿನ್ನೂ ಪುಸ್ತಕಗಳು ಸಿಕ್ಕಿಲ್ಲ ಎನ್ನುತ್ತಾರೆ. ಸಚಿವರು ಮಾಡಿರುವ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ ಎಂದರು, ತಾಲ್ಲೂಕಿನ ರೈತರ ಪ್ರಮುಖ ಬೆಳೆ ಕೊಬ್ಬರಿ ೧೨ ಸಾವಿರಕ್ಕೆ ಬಂದರು, ಜಿಲ್ಲೆಯ ಸಚಿವ ದ್ವಯರು ಧ್ವನಿ ಎತ್ತುವುದಿಲ್ಲ ರೈತರ ಪರವಾಗಿಯೂ ಸರ್ಕಾರವಿಲ್ಲ ಕೋವಿಡ್ ರೋಗದಿಂದ ಶಿಕ್ಷಣ ವ್ಯವಸ್ಥೆ ಹಾಳಾದರೆ ಈಗಿನ ಶಿಕ್ಷಣ ಸಚಿವರಿಂದ ಶಿಕ್ಷಣ ವ್ಯವಸ್ಥೆಗೆ ಕೊರೊನಾ ಬಂದಿದೆ ಎಂದು ಲೇವಡಿ ಮಾಡಿದರು.

ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂಬಿ ಪರಮಶಿವಯ್ಯ ಮಾತನಾಡಿ ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಹಿನ್ನಲೆಯ ಶಾಸಕರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿ ಶಿಕ್ಷಣ ವ್ಯವಸ್ಥೆಯನ್ನೇ ಹದಗೆಡಿಸಿದರು, ಗ್ರಾಮಾಂತರ ಭಾಗದ ಆರೋಗ್ಯ ಇಲಾಖೆಗಳು ಮಾರಾಟವಾಗಿವೆ ವೈದ್ಯರು ಪ್ರತಿ ತಿಂಗಳಿಗೆ ಬದಲಾವಣೆಯಾಗುತ್ತಿದ್ದಾರೆ.

ಕೆಂಪು ಬಣ್ಣ ಹೊಡೆಯುವ ಬದಲು ಮೊದಲು ಸುಣ್ಣ ಬಳಿಯಲಿ, ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ ಹದಗೆಟ್ಟ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕೆಲಸವನ್ನಾದರೂ ಮಾಡಲಿ, ನಾನು ಸುಮಾರು ಮೂವತ್ತು ವರ್ಷ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಸೇವೆ ಸಲ್ಲಿಸುತ್ತಿದ್ದು ಈ ಬಾರಿ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತ ಜನರು ನಾನು ಪ್ರಚಾರ ಮಾಡಿದ ಕಾಂಗ್ರೆಸ್ ಪಕ್ಷದ ನಾಲ್ಕು ಚುನಾವಣೆಗಳಿಗಿಂತಲೂ ಹೆಚ್ಚು ಜನಸ್ತೋಮ ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತಿದೆ ಎಂದರು.

ಬಳುವನೇರಳು ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಪ್ಪ ಮಾತನಾಡಿ ದೇಶದ ಜನರಿಗೆ ೧೫ ಲಕ್ಷ ಹಣ ಹಾಕುತ್ತೇನೆ ಎಂದು ಪ್ರಧಾನ ಮಂತ್ರಿ ಬರೀ ಸುಳ್ಳು ಹೇಳಿ ಅಧಿಕಾರ ಪಡೆದರು ಅವರ ಅನುಯಾಯಿಗಳಾದ ಬಿಜೆಪಿ ಪಕ್ಷದ ಶಾಸಕರು ಮತ್ತು ಸಚಿವರು ಸುಳ್ಳನ್ನೇ ಪರಿಪಾಠ ಮಾಡಿಕೊಂಡಿದ್ದಾರೆ ಇದೆಲ್ಲವನ್ನು ಯುವಕರು ಅರ್ಥ ಮಾಡಿಕೊಂಡಿದ್ದು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಾಸು, ಯೋಗೀಶ್, ದಿನೇಶ್, ಷಣ್ಮುಖ ಮುಂತಾದವರಿದ್ದರು.

*
ತಾಲ್ಲೂಕಿನಲ್ಲಿ ಕ್ಷೇತ್ರ ಸಂಚಾರದ ಸಮಯದಲ್ಲಿ ಬಹಳಷ್ಟು ಜನರು ಕ್ಷೇತ್ರಕ್ಕೆ ನಿಮ್ಮಂತ ಯುವಕರ ಅವಶ್ಯಕತೆಯಿದೆ ಎನ್ನುತ್ತಿ ದ್ದಾರೆ. ಪಕ್ಷ ಗುರುತಿಸಿ ಟಿಕೆಟ್ ನೀಡಿದರೆ ರಾಜಕೀಯದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ, ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕರಾಗಿ ಆಯ್ಕೆಯಾಗಿ ಶಿಕ್ಷಣ ಸಚಿವರಾದರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಮನೆ ಮನೆಗೆ ಶಿಕ್ಷಣಧಾರೆ ಎರೆಯುವ ಬದಲು ಕೇಸರಿಕರಣ ಮತ್ತು ಧ್ಯಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಎಷ್ಟೋ ಬಡ ಮಕ್ಕಳಿಗೆ ಪುಸ್ತಕಕೊಳ್ಳಲು ಸಹ ಹಣ ಇರುವುದಿಲ್ಲ ಕ್ಷೇತ್ರದ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ, ಹತ್ತಾರು ಶಾಲೆಗಳ ಚಾವಣಿ ಕುಸಿದು ಮರದ ಕೆಳಭಾಗದಲ್ಲಿ ಪಾಠ ಮಾಡುತ್ತಿದ್ದರು ಸೌಜನ್ಯಕ್ಕಾದರೂ ಭೇಟಿ ನೀಡಿಲ್ಲ, ತೆಂಗು ಬೆಳೆಗಾರರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದೆ ಮಿಶ್ರ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೆ ನೇಪಾಳದಿಂದ ಅಡಿಕೆ ಆಮದು ಮಾಡಿಕೊಂಡು ತೆಂಗು ಮತ್ತು ಅಡಿಕೆ ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ. ತೆಂಗು ಬೆಳೆದ ಜಾಗದಲ್ಲಿ ಮತ್ತೊಂದು ತೆಂಗು ಸಸಿ ನೆಟ್ಟರೆ ಬೆಳೆಯುತ್ತಿಲ್ಲ ಕಾರಣ ಸುಮಾರು ೨೫ ವರ್ಷಗಳಿಂದ ಮಣ್ಣಿನ ಸತ್ವ ಪರೀಕ್ಷೆ ಮಾಡಿಸಿಲ್ಲ ರೈತರೇ ಬೆನ್ನೆಲುಬು ಎಂದು ಹೇಳುವ ಸರ್ಕಾರಕ್ಕೆ ನಾಚಿಕೆ ಯಾಗಬೇಕು.

ಟೂಡ ಶಶಿಧರ್, ಕಾಂಗ್ರೆಸ್ ಮುಖಂಡ