ತುಮಕೂರು : ವಿಶ್ವವಿದ್ಯಾಲಯದಲ್ಲಿ ಪದೇ ಪದೇ ಕುಲಸಚಿವರನ್ನು ಬದಲಾಯಿಸುವ ರಾಜ್ಯ ಸರಕಾರದ ನಿರ್ಧಾರವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ತೀವ್ರವಾಗಿ ಖಂಡಿಸುತ್ತದೆ.
ವಿಶ್ವವಿದ್ಯಾಲಯದಲ್ಲಿ ಕುಲಸಚಿವರ ನೇಮಕಾತಿಯನ್ನು ವಿವಿ ಕಾಯ್ದೆ ಅಡಿಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಅಡಿಯಲ್ಲಿ ಅವರ ಸೇವೆ ಆಧಾರದ ಮೇಲೆ ನೇಮಕಾತಿ ಮಾಡ ಲಾಗುತ್ತದೆ. ಇದರ ಅಡಿಯಲ್ಲಿನ ತುಮಕೂರು ವಿವಿಯ ಕುಲಸಚಿವ ಡಾ.ಶಿವಚಿತ್ತಪ್ಪ ಅವರನ್ನು ಮೈಸೂರು ವಿವಿಯಿಂದ ತುಮಕೂರು ವಿವಿಗೆ ಕುಲಸಚಿವರನ್ನಾಗಿ ಕಳೆದ ಒಂದು ವರ್ಷದ ಹಿಂದೆ ನೇಮಿಸಲಾಗಿತ್ತು.
ವಿವಿ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ರಾಜ್ಯ ಸರಕಾರ ದಿಢೀರ್ ಎಂದು ಶಿವಚಿತ್ತಪ್ಪ ಅವರನ್ನು ಕುಲಸಚಿವ ಹುದ್ದೆ ಯಿಂದ ಬದಲಾವಣೆ ಮಾಡಲಾಗಿದೆ. ಯಾವುದೇ ಅನುಭವ ಇಲ್ಲದ ಕೊರಟಗೆರೆ ತಹಶೀಲ್ದಾರ್ ನಹೀದಾ ಜಮ್ ಜಮ್ ಅವರನ್ನು ಕುಲಸಚಿವರನ್ನಾಗಿ ನೇಮಕ ಮಾಡ ಲಾಗಿದೆ. ಇದರಿಂದ ಯಾವುದೇ ಅನುಭವ ಇಲ್ಲದಿದ್ದರೂ ಸಹ ನೇಮಕ ಮಾಡಿರುವುದು ವಿವಿ ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ.
ಆದ್ದರಿಂದ ಕೂಡಲೇ ರಾಜ್ಯ ಸರಕಾರವು ಈವರೆಗೆ ಇದ್ದಂತಹ ಕುಲಸಚಿವರನ್ನೇ ಮುಂದುವರೆಸಬೇಕು. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾಧ್ಯಕ್ಷ ಈ.ಶಿವಣ್ಣ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆದೇಶ ವನ್ನು ಕೂಡಲೇ ರದ್ದು ಮಾಡಿ ಇದುವರೆಗೆ ಇದ್ದಂತಹ ಕುಲಸಚಿವರನ್ನು ವಿವಿ ಅಭಿವೃದ್ಧಿ ದೃಷ್ಟಿಯಿಂದ ಮುಂದುವರೆಸ ಬೇಕೆಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.