Sunday, 15th December 2024

ಹಕ್ಕು ಪತ್ರ ಆದೇಶದ ಪ್ರತಿ ವಿತರಣೆ

ತಿಪಟೂರು: ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧದಲ್ಲಿ ವಿವಿಧ ದೇವಾಲಯಗಳಿಗೆ ಆರಾಧನಾ ಯೋಜನೆಯಿಂದ ಹಾಗೂ ವಿವಿಧ ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆಯಿಂದ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸಂಬ೦ಧಿಸಿದ೦ತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹಕ್ಕು ಪತ್ರ ಆದೇಶದ ಪ್ರತಿಯನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜದ ಅಬಿವೃದ್ದಿಗೆ ಸರ್ಕಾರವು ಸ್ವಂದಿಸುತ್ತಿದ್ದು ಇದರ ಸದುಪಯೋಗವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಹಾಗೂ ಸಮುದಾಯ ಭವನಕ್ಕೆ ಬೇಕಾಗಿರುವ ದಾಖಾಲೆಗಳನ್ನು ಬೇಗ ನೀಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ರಾಮ್ ಮೋಹನ್, ತಾಲ್ಲೂಕು ಉಪವಿಭಾಗದಿಕಾರಿ ಶ್ರೀಮತಿ ಕಲ್ಪಶ್ರೀ, ತಹಶೀಲ್ದಾರ್ ಪವನ್‌ಕುಮಾರ್, ತಾಲ್ಲೂಕು ಪಂಚಾಯಿತ್ ಇಒ ಸುದರ್ಶನ್, ನಗರಸಭೆ ಆಯುಕ್ತ ಉಮಾಕಾಂತ್, ವಿವಿಧ ಸಮಾಜದ ಮುಖಂಡರು ಹಾಜರಿದ್ದರು.