Sunday, 15th December 2024

ಅಂಬೇಡ್ಕರ್ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರ ಬದುಕಿನಲ್ಲೂ ಅತ್ಯವಶ್ಯಕ

ಗುಬ್ಬಿ: ಶೋಷಿತ  ಸಮುದಾಯಕ್ಕೆ ಬದುಕನ್ನು ಕಟ್ಟಿಕೊಟ್ಟ ಶೋಷಿತರ ಧ್ವನಿ  ಮಹಾನ್ ಮಾನವತವಾದಿ  ಕಾನೂನು ತಜ್ಞ  ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಪ್ರತಿಯೊಬ್ಬರ ಬದುಕಿನಲ್ಲೂ ಅತ್ಯವಶ್ಯಕವಾಗಿದೆ ಎಂದು ದಲಿತ ಮುಖಂಡ ಅದಲಗೆರೆ ಈಶ್ವರಯ್ಯ  ತಿಳಿಸಿದರು.
ತಾಲೋಕಿನ  ಅದಲಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ  ಡಾ. ಬಿಆರ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ  ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು ವಿಶ್ವಕ್ಕೆ ಮಾದರಿ ಯಾದ ಸಂವಿಧಾನ ರಚಿಸಿ  ಎಲ್ಲರಿಗೂ  ಸರಿಸಮಾನವಾದ ತಾರತಮ್ಯವಿಲ್ಲದ  ಕಾನೂನು ರಚಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.  ಮಹಿಳೆಯರ ಶೋಷಿತರ ಬದುಕನ್ನು ಕಟ್ಟಿಕೊಳ್ಳಲು ಸಮ ಸಮಾಜದ ನಿರ್ಮಾಣಕಾಗಿ ಹೋರಾಟ ಮಾಡಿ ವಿಶ್ವ ಮಾನವತಾವಾದಿ ಡಾ. ಬಿಆರ್ ಅಂಬೇಡ್ಕರ್ ಅವರು ನಮಗೆಲ್ಲ ದಾರಿ ದೀಪ ವಾಗಿದ್ದಾರೆ. ನಮ್ಮ ಗ್ರಾಮದಲ್ಲಿ  ಅಂಬೇಡ್ಕರ್ ಜಯಂತಿಯ ಜೊತೆಗೆ  ಮತದಾನದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡು  ನಮ್ಮ ಮತದ  ಅಮೂಲ್ಯತೆಯನ್ನು  ತಿಳಿಸಿಕೊಡಲಾಗಿದೆ ಎಂದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ  ತಾ ಪಂ ಸ  ಶೆಟ್ಟಳಯ್ಯ , ಗುತ್ತಿಗೆದಾರರಾದ  ಜಿಗನಹಳ್ಳಿ ಬಸವರಾಜು, ಯಜಮಾನ್  ಮಾದೇವಯ್ಯ, ಮುಖಂಡರಾದ  ಮೂಡಲಗಿರಿಯಪ್ಪ, ಸಣ್ಣ ತಿಮ್ಮಯ್ಯ, ಸುರೇಶ್, ಹನುಮಂತಯ್ಯ, ಪರಮೇಶ್, ಗಿರಿಯಪ್ಪ, ಹಾಗೂ ಗ್ರಾಮಸ್ಥರು ಹಾಜರಿದ್ದರು.