Sunday, 1st December 2024

ಜೀರ್ಣೋದ್ಧಾರಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹೆಚ್ಚು ಅನುದಾನ

ಗುಬ್ಬಿ : ರಾಮಮಂದಿರ ಜೀರ್ಣೋದ್ಧಾರಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಹೆಚ್ಚು ಅನುದಾನ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೇಶ್ ತಿಳಿಸಿದರು.

ತಾಲೂಕಿನ ಎಂಎನ್. ಕೋಟೆ ಗ್ರಾಮದಲ್ಲಿ ರಾಮ ಮಂದಿರ ಜೀರ್ಣೋದ್ಧಾರ ಕಾಮಗಾರಿ ಹಾಗೂ ನರೇಗಾ ಯೋಜನೆ ಅಡಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು 15ನೇ ಹಣಕಾಸು ಯೋಜನೆ ಅಡಿಯಲ್ಲಿ ಮೊದಲ ಹಂತವಾಗಿ ಜೀರ್ಣೋದ್ಧಾರ ಕಾಮಗಾರಿಗೆ 1 ಲಕ್ಷ ರೂ ಬಿಡುಗಡೆ ಗೊಳಿಸಿದ್ದು ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ನೀಡಿ ಜೀರ್ಣೋದಾರ ಪೂರ್ಣಗೊಳಿಸ ಲಾಗುವುದು. ನಮ್ಮ ಪಂಚಾಯಿತಿಯ ಪ್ರತಿ ಗ್ರಾಮಗಳಲ್ಲೂ ಸಹ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
 ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿಲೀಪ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ದಿಂದ ಎಲ್ಲ ಒಟ್ಟಾಗಿ ಪುರಾತನ ಇತಿಹಾಸವುಳ್ಳ ರಾಮ ಮಂದಿರ ಜೀರ್ಣೋದ್ಧಾರ ಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.
 ಗ್ರಾ ಪಂ ಸದಸ್ಯ ಭೀಮ್ ಶೆಟ್ಟಿ ಮಾತನಾಡಿ ನಮ್ಮ ಊರಿನಲ್ಲಿ ಸುಮಾರು ವರ್ಷಗಳ ಇತಿಹಾಸವಿರುವ ರಾಮ ಮಂದಿರ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಶ್ರೇಷ್ಠವಾದ ರಾಮಮಂದಿರವಾಗಿ ಪರಿವರ್ತಿಸಲು ಹೆಚ್ಚು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮಾಜಿ ಗ್ರಾ ಪಂ. ಸದಸ್ಯ ಸಿದ್ದಗಂಗಮ್ಮ ಕಲ್ಲೇಶ್ ಮಾತನಾಡಿ ಈ ಶ್ರೇಷ್ಠವಾದ ರಾಮಮಂದಿರದಲ್ಲಿ ಪೂರ್ವಜರ ಕಾಲದಿಂದಲೂ ಸಹ ಭಜನೆ,ದಾಸರ ಕೀರ್ತನೆ, ದೇವರ ಸ್ಮರಣೆ ಹಾಗೂ ಅನೇಕ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿ ನಡೆದುಕೊಂಡು ಬಂದಿದ್ದು ಎಂದರು.
 ಈ ಸಂದರ್ಭದಲ್ಲಿ ಸಿದ್ದಗಂಗಮ್ಮ ಕಲ್ಲೇಶ್, ಶೈಲಜಾ ಗಂಗಾಧರಸ್ವಾಮಿ, ,ನಾಗರಾಜು, ರವಿಕುಮಾರ್, ಪ್ರಕಾಶ್, ರಂಗಸ್ವಾಮಿ ( ಪಾಂಡು ) ದೊಡ್ಡ ರಂಗಯ್ಯ, ಮಹಾದೇವಯ್ಯ, ಬಸವರಾಜು,ನಜುಂಡಯ್ಯ ,ಉಮಾತೇಜು, ಮಹೇಶ್, ಮಂಜುನಾಥ್, ನಾಗೇಶ್, ಇತರರು ಇದ್ದರು.