Wednesday, 11th December 2024

ವಿಧ್ಯಾಭ್ಯಾಸಕ್ಕೆ ತಕ್ಕಂತೆ ವಿದ್ಯಾರ್ಥಿನಿಲಯಗಳ ಅವಶ್ಯಕತೆಯಿದೆ: ಬಿ ಸಿ ನಾಗೇಶ್

೩೨೬ ಲಕ್ಷ ರೂಗಳ ವಿದ್ಯಾರ್ಥಿನಿಲಯ ಶಂಕುಸ್ಥಾಪನೆ

ತಿಪಟೂರು: ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಅನುಕೂಲಕರವಾದ ಸೌಲಭ್ಯ ಸವಲತ್ತುಗಳನ್ನು ಸಮರ್ಪಕವಾಗಿ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ನಗರದ ಹೊರವಲಯದ ಲಿಂಗದಹಳ್ಳಿ ಗೇಟ್ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದರು.

ತುಮಕೂರು ಜಿಲ್ಲೆಯ ನಂತರ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ತಾಲ್ಲೋಕಿನಲ್ಲಿ ದಿನೇ ದಿನೇ ಸಮರ್ಪಕವಾಗಿ ಅಭಿವೃದ್ದಿಯಾಗುತ್ತಿದ್ದು ಪದವಿ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಯಿಂದ ದಾಖಾಲಾತಿಯಲ್ಲಿ ಹೆಚ್ಚಳ ಆಗುತ್ತಿದ್ದೆ ಅನೇಕ ವಿದ್ಯಾಸಂಸ್ಥೆಗಳಿ0ದ ಶಿಕ್ಷಣದಲ್ಲಿ ಪ್ರಗತಿ ಹೊಂದುತ್ತಿದ್ದು, ಪದವಿ ಕಾಲೇಜುಗಳು, ಪದವಿ ಪೂರ್ವ ಕಾಲೇಜು, ವೃತ್ತಿ ಸಂಬ0ಧೀಸಿದ ಕೋರ್ಸ್ಗಳು, ಇಂಜಿನಿಯಿರಿಗ್ ಕೋರ್ಸ್ಗಳು, ಪ್ಯಾರಮೆಡಿಕಲ್ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸಕ್ಕೆ ಅನುಕೂಲರವಾಗಲು ಹಾಗೂ ಆರ್ಥೀಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಅನುಕೂಲ ವಾಗುವಂತೆ ಇಂದು ಕನಕದಾಸರ ಹೆಸರಿನಲ್ಲಿ ವಿಧ್ಯಾರ್ಥಿನಿಲಯವನ್ನು ಆರಂಭಿಸಲಾಗಿದೆ. ಭಾಜಪ ಸರಕಾರ ಆಸ್ವಿತ್ತಕ್ಕೆ ಬಂದಾಗ ದೀನ ದಲಿತರ, ಬಡವರ, ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ.

ಶಂಕು ಸ್ಥಾಪನೆಯಲ್ಲಿ ನಗರಸಭೆಯ ಅದ್ಯಕ್ಷ ರಾಮ್ ಮೋಹನ್, ಸ್ಥಾಯಿ ಸಮಿತಿ ಅದ್ಯಕ್ಷ ಶಶಿಕಿರಣ್, ಹಿಂದುಳಿದ ವರ್ಗಗಳ ಇಲಾಖೆಯ ಅದಿಕಾರಿ ಜಲಜಾಕ್ಷಮ್ಮ, ವಿಸ್ತರಣಾಧಿಕಾರಿ ಗಂಗಾಧರ್, ಎಇಇ ಹಾಲೇಶಪ್ಪ, ಸಿಬ್ಬಂದಿ ಕೆಂಪಣ್ಣ, ಮುಖಂಡರಾದ ಬೋಜೆಗೌಡ, ಲಿಂಗರಾಜು ಮತ್ತಿಹಳ್ಳಿ, ಮತ್ತಿತ್ತರು ಹಾಜರಿದ್ದರು.

ತಿಪಟೂರಿನ ಎಪಿಎಮ್‌ಸಿ ಆವರಣದಲ್ಲಿ ಫೆಬ್ರವರಿ ೦೨ ರಿಂದ ಕೊಬ್ಬರಿ ನೆಪೆಡ್ ಕೇಂದ್ರವನ್ನು ತೆರಯಲಾಗುವುದು ಕೇಂದ್ರ ಸರಕಾರದ ಬೆಂಬಲ ಬೆಲೆಯಾದ ೧೧೭೫೦ ರೂಪಾಯಿಗಳಲ್ಲಿ ಖರೀದಿ ಮಾಡಲಾಗುವುದು. ಮೊದಲು ರೈತರು ನೊಂದಾಣಿ ಪ್ರಕ್ರೀಯೆಯಲ್ಲಿ ಭಾಗವಹಿಸಿದ ನಂತರ ಕೆಲವೇ ದಿನದಲ್ಲಿ ನೆಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.