Saturday, 2nd December 2023

ಅಮಾಯಕರು ಕಟ್ಟು ಗ್ಲಾಸು ಹಾಕಿಕೊಂಡು ಇಟ್ಟುಕೊಂಡರೂ!

ಚಿಕ್ಕನಾಯಕನಹಳ್ಳಿ: ೨೦೦ ಯುನಿಟ್ ವಿದ್ಯುತ್ ಉಚಿತ, ೨೦೦೦ ರೂ ಪ್ರೋತ್ಸಾಹ ಧನ ನೀಡುವುದು ಖಚಿತ ವೆಂದು ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಬಾಂಡ್ ವಿತರಿಸುತ್ತಿದ್ದಾರೆ. ಇದಕ್ಕೆ ಯಾವುದೇ ಮಾನ್ಯತೆ ಇಲ್ಲ ಅಮಾಯ ಕರು ಕಟ್ಟು ಗ್ಲಾಸು ಹಾಕಿಕೊಂಡು ಇಟ್ಟುಕೊಂಡರೂ! ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಂಗವಾಡಿದರು.

ಪಟ್ಟಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಎಸ್‌ಟಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಯೋಜನೆಗಳನ್ನು ಘೋಷಿಸುವುದರಲ್ಲಿ ನಿಸ್ಸೀಮರು. ಹೇಗಿದ್ದರೂ ಸರಕಾರ ಬರುವುದಿಲ್ಲವೆಂದು ಏನೇನೋ ಆಶ್ವಾಸನೆ ನೀಡು ತ್ತಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ೨೬ ಲಕ್ಷ ಮನೆ ಮಂಜೂರು ಮಾಡಿ ದುಡ್ಡೇ ನೀಡಿರಲಿಲ್ಲ, ಸೋಮಣ್ಣ ಪಿರಿಪಿರಿಯಿಂದ ೩.೫ ಲಕ್ಷ ಮನೆಗಳಿಗೆ ಹಣ ನೀಡಿದರು. ಕಾಂಗ್ರೆಸ್‌ನವರ ತಿಪ್ಪೇಗಳನ್ನು ಗುಡಿಸುವುದೇ ನಮ್ಮ ಕೆಲಸವಾಗಿದೆ ಎಂದು ಛೇಡಿಸಿದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಹೊರತುಪಡಿಸಿ ಇತರೆ ಸರಕಾರಗಳಿದ್ದಿದ್ದರೆ ನಮ್ಮ ಸ್ಥಿತಿ ಅತ್ಯಂತ ಶೋಚನೀಯ ವಾಗಿರುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

error: Content is protected !!