ತಿಪಟೂರು: ಕಾಂಗ್ರೇಸ್ ಪಕ್ಷವು ಗ್ಯಾರಂಟಿ ಕಾರ್ಡ್ಗಳನ್ನು ಮತದಾರರಿಗೆ ನೀಡಿ ಮತಗಳನ್ನು ಸೆಳೆಯಲು ಪ್ರಯತ್ನ ಮಾಡು ತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದೇ ಅವರಿಗೆ ಗ್ಯಾರಂಟಿಯಿಲ್ಲ ಕಾಂಗ್ರೇಸ್ ಪಕ್ಷ ಬಂದರೆ ಬರಗಾಲ ಭ್ರಷ್ಟಾಚಾರ ಮಾತ್ರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಕೆ.ಬಿ ಕ್ರಾಸ್ ನಿಂದ ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದವರೆಗೆ ರೊಡ್ ಶೋ ನೆಡಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷದಿಂದ ಯಾವುದೇ ಅಭಿವೃದ್ದಿಗಳು ಸಾಧ್ಯವಿಲ್ಲ ತಾಲ್ಲೂಕಿನ ಹೊನ್ನವಳ್ಳಿ ಏತ ನೀರಾವರಿ ಯೋಜನೆ ತಂದಿದ್ದು ನಾವು ಪ್ರತಿ ಮನೆ ಮನೆಗೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಕೊಡುವ ನಿಟ್ಟಿನಲ್ಲಿ ೭೨ ವರ್ಷಗಳಲ್ಲಿ ಕಾಂಗ್ರೇಸ್ ಪಕ್ಷವು ೨೫ ಲಕ್ಷ ಮನೆಗಳಿಗೆ ನೀರು ಒದಗಿಸಿದೆ ಆದರೆ ೩ ವರ್ಷಗಳಲ್ಲಿ ೪೦ ಲಕ್ಷ ಮನೆಗಳಿಗೆ ನೀರು ಕೊಟ್ಟಿದ್ದೇವೆ ಎಂದರು.
ನಾವುಗಳು ಮೊದಲು ೧೦ ಕೆಜಿ ಅಕ್ಕಿಯನ್ನು ನೀಡಿದ್ದೇವು ಅದನ್ನು ಸಿದ್ದರಾಮಯ್ಯ ೫ ಕೆಜಿಗೆ ಕಡಿಮೆ ಮಾಡಿದರು. ಒಂದು ಕೆಜಿಗೆ ಮೋದಿಯವರು ೩೦ರೂ ನೀಡಿದ್ದಾರೆ ಅದರೆ ಇವರು ಖಾಲಿ ಚೀಲಗಳ ಜೊತೆ ೩ ರೂ ನೀಡಿದ್ದಾರೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ಸರಳ ಸಜ್ಜನಿಕೆಯ ದೇವರಂತಹ ಮನುಷ್ಯ ಅತನ ಮೇಲೆ ವಿರೋಧ ಪಕ್ಷದವರು ಸುಳ್ಳು ವದಂತಿ ಗಳನ್ನು ಹರಡುತ್ತಾರೆ ಆದರೆ ೨೦೧೬ರ ಶಿಕ್ಷಣ ಇಲಾಖೆಯಲ್ಲಿ ಆಕ್ರಮ ನೇಮಕಾತಿಯನ್ನು ಪ್ರಶ್ನಿಸಿ ೮೦ಕ್ಕೂ ಹೆಚ್ಚು ಶಿಕ್ಷಕರನ್ನು ಅಮಾನತ್ತು ಮಾಡಿದ್ದು ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿದ್ದಾರೆ ಅದ್ದರಿಂದ ಮುಂದಿನ ತಿಪಟೂರಿನ ಸಮಗ್ರ ಅಭಿವೃದ್ದಿಗಾಗಿ ಕಳೆದ ಬಾರಿ ೨೬ ಸಾವಿರ ಅಧಿಕ ಮತ ನೀಡಿ ಗೆಲ್ಲಿಸಿದ್ದು ಈ ಬಾರಿ ೫೦ ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಗೆಲ್ಲುವಂತೆ ಮನವಿ ಮಾಡಿದರು.
ಬಿಸಿ ನಾಗೇಶ್ ಪರವಾಗಿ ಸಿಎಮ್ ಬೊಮ್ಮಾಯಿ, ಎಮ್ ಡಿ ಲಕ್ಷಿö್ಮನಾರಾಯಣ್, ಮುನಿಸ್ವಾಮಿ, ಸಂಸದ ಬಸವರಾಜು ಮತ ಯಾಚಿಸಿದರು.
ಕೊಬ್ಬರಿ ಬೆಳೆಗಾರರಿಗೆ ನಿರಾಸೆ : ತಾಲ್ಲೂಕಿನಲ್ಲಿ ಒಂದು ತಿಂಗಳ ಕಾಲ ಕೊಬ್ಬರಿ ಬೆಳೆಗಾರರು ಮುಷ್ಕರ ನೆಡಸಿ ಕೊಬ್ಬರಿ ಬೆಲೆಗಾಗಿ ಹೋರಾಟ ಮಾಡಿದ್ದರೂ ಸಹ ಕೊಬ್ಬರಿ ಬೆಳೆಯ ಬಗ್ಗೆ ಒಂದು ಮಾತನ್ನು ಚಕಾರ ಎತ್ತಲಿಲ್ಲ.