ಗುಬ್ಬಿ: ತಾಲೂಕಿನ ಜಿ ಹರಿವೇಸಂದ್ರ ಗ್ರಾಮದಲ್ಲಿ ಮಂಜುನಾಥ್ ಎಂಬುವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿ ಯಿಂದಾಗಿ ಸ್ಥಳೀಯ ನಿವಾಸಿಗಳು ಕಾಯಿಲೆ ಯಿಂದ ಬಳಲುತ್ತಿದ್ದು ಅನೇಕ ಬಾರಿ ತಾಲೂಕು ಮಟ್ಟದ ಅಧಿಕಾರಿ ಗಳಿಗೆ ಮನವಿ ಮಾಡಿದರು.
ಫ್ಯಾಕ್ಟರಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳದೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜನಸಾಮಾನ್ಯರು ಕಾಯಿಲೆ ಯಿಂದ ಬಳಲುವ ಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಕ್ರಮ ಕೈಗೊಳ್ಳದೆ ಹೋದಲ್ಲಿ ಸ್ಥಳೀಯ ಗ್ರಾಮಸ್ಥರ ಜೊತೆಗೂಡಿ ದಲಿತ ಸಂಘರ್ಷ ಸಮಿತಿ ಇಟ್ಟಿಗೆ ಫ್ಯಾಕ್ಟರಿ ಸ್ಥಳದಲ್ಲಿ ಜಿಲ್ಲಾಧಿಕಾರಿ ಗಳು ಭೇಟಿ ನೀಡಿ ಕ್ರಮ ಕೈಗೊಳ್ಳು ವವರೆಗೂ ಅನಿದಿಷ್ಟ ಧರಣಿ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರ್ ರಂಗಸ್ವಾಮಿ ತಿಳಿಸಿದರು.
ದಲಿತ ಮುಖಂಡ ಜಿ ಹರವೇಂದ್ರ ಕೃಷ್ಣಪ್ಪ ಮಾತನಾಡಿ ಜನಸಾಮಾನ್ಯರಿಗೆ ಮಾರಕವಾದ ಇಟ್ಟಿಗೆ ಫ್ಯಾಕ್ಟ್ರಿ ಯಿಂದಾಗಿ ಧೂಳು ಮತ್ತು ಹೊಗೆಯಿಂದ ವಾತಾವರಣ ಕಲುಷಿತಗೊಂಡು ಕೆಮ್ಮು ನೆಗಡಿ ಅಲರ್ಜಿ ಇಂದ ಜನರು ಬಳಲುತ್ತಿದ್ದು ಮುಂದೆ ಮಾರಕ ಕಾಯಿಲೆಗೆ ನಾಂದಿ ಹಾಡಲಿದೆ ಈ ಹಿಂದೆ ಇದ್ದ ತಹಶೀಲ್ದಾರ್ ಅವರು ನಮ್ಮ ಸಮಸ್ಯೆಗೆ ಮೌಖಿಕವಾಗಿ ಸ್ಪಂದಿಸಿದ್ದರು ಅವರ ವರ್ಗಾವಣೆಯಾದ ನಂತರ ಬಂದ ಅಧಿಕಾರಿಗಳು ಇಟ್ಟಿಗೆ ಫ್ಯಾಕ್ಟರಿ ಸ್ಥಾಪಿಸಲು ಅನುಮತಿ ನೀಡಿ ಸ್ಥಳೀಯ ಗ್ರಾಮಸ್ಥರಿಗೆ ಸಮಸ್ಯೆ ತಂದು ಒಡ್ಡಿದ್ದಾರೆ ಜನರ ಆರೋಗ್ಯದ ದೃಷ್ಟಿಯಿಂದ ಕೂಡಲೆ ಹೆಚ್ಚೆತ್ತು ಸ್ಥಳಾಂತರಿಸ ಬೇಕು ಎಂದು ತಿಳಿಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅದಲಗೆರೆ ಈಶ್ವರಯ್ಯ, ಕಡಬ ಶಂಕರ್, ಕೆ ಎಲ್ ರವಿಕುಮಾರ್, ಕುಂದರನಹಳ್ಳಿ ನಟರಾಜು, ಸಿ ಎಸ್ ಪುರ ಬೆಟ್ಟಸ್ವಾಮಿ, ಕೋಟೆ ಕಲ್ಲೇಶ್, ಮಹೇಶ್ ಇದ್ದರು.