Friday, 22nd November 2024

ವಿದ್ಯಾ ಶಾಲೆಯ ಕಾರ್ಯದರ್ಶಿ ಗಂಗಣ್ಣ ನಿಧನ

ತಿಪಟೂರು: ನಗರದ ದೀನದಯಾಳು ವಿದ್ಯಾ ಶಾಲೆಯ ಕಾರ್ಯದರ್ಶಿಗಳಾದ ಗಂಗಣ್ಣನವರು ವಯೋ ಸಹಜವಾಗಿ ಮೃತ ಪಟ್ಟರು. ಶ್ರೀಯುತರು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗನನ್ನು ಅಗಲಿದ್ದಾರೆ.

ತಿಪಟೂರಿನ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದು ನಗರಸಭಾ ವ್ಯಾಪ್ತಿಯ ಗೊರಗೊಂಡನ ಹಳ್ಳಿಯಲ್ಲಿ 1983 ವರ್ಷದ ಈ ಭಾಗದಲ್ಲಿ ಕೂಲಿ ಕಾರ್ಮಿಕರು, ಬಡ ಜನರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದನ್ನು ಕಂಡು ಸಾಧನ ಸಂಸ್ಥೆಯ ಸಹಕಾರದೊಂದಿಗೆ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಪಾಠ ಶಾಲೆ ತೆರೆದು ನೂರಾರು ಮಕ್ಕಳಿಗೆ ಯಾವುದೇ ದಾಖಲಾತಿ ಹಣ ಪಡೆಯದೆ ಶಿಕ್ಷಣ ನೀಡಿದ ಕೀರ್ತಿ ಶ್ರೀಯುತ ಗಂಗಣ್ಣನವರಿಗೆ ಸಲ್ಲುತ್ತದೆ.

ಮಕ್ಕಳಿಗೆ ಶಾಲೆಯ ಶಿಕ್ಷಕರು, ಶಿಕ್ಷಕಿಯರಿಗೆ, ಸಿಬ್ಬಂದಿ ವರ್ಗದವರಿಗೆ ಮತ್ತು ಪೋಷಕರಿಗೆ ಗುರೂಜಿ ಮತ್ತು ಮಾತಾಜಿ ಎಂಬ ನಾಮಾಂಕಿತದೊAದಿಗೆ ಸಂಬೋಧಿಸುತ್ತಿದ್ದರು. ಯಾವುದೇ ವಾಹನದ ನೆರವಿಲ್ಲದೆ ರಸ್ತೆಯಲ್ಲಿ ಸಂಚರಿಸಿ ಸಂಚಾರಿ ನಿಯಮ ಉಲ್ಲಂಘಿಸಿ ದವರಿಗೆ ನಿಯಮ ಪಾಲನೆ ಬೋಧಿಸುತ್ತಿದ್ದರು.

ಶ್ರೀಯುತರ ನಿಧನಕ್ಕೆ ಶಾಸಕರಾದ ಕೆ. ಷಡಕ್ಷರಿ. ಮಾಜಿ ಶಿಕ್ಷಣ ಸಚಿವ ಬಿ. ಸಿ. ನಾಗೇಶ್. ಕಾಂಗ್ರೆಸ್ ಮುಖಂಡ ಲೋಕೇಶ್ವರ್. ಜೆಡಿಎಸ್ ಮುಖಂಡ ಕೆಟಿ ಶಾಂತಕುಮಾರ್, ಸಾಧನ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ದೀನದಯಾಳು ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅತಿವ ದುಃಖ ವ್ಯಕ್ತಪಡಿಸಿದ್ದಾರೆ.

ಬಾಕ್ಸ್- 1983 ದಶಕದಲ್ಲಿ ಶಾಲೆ ಆರಂಭಿಸಿದಾಗ ಬೆರಣಿಕೆಯಷ್ಟು ವಿದ್ಯಾರ್ಥಿಗಳಿದ್ದರೂ ಗಂಗಣ್ಣ ಗುರೂಜಿಯವರ ಆಜ್ಞೆಯಂತೆ ಮನೆಮನೆಗೆ ತೆರಳಿ ಶಾಲೆಗೆ ದಾಖಲಾತಿ ಆರಂಭಿಸಿದೆವು. ತಾಲೂಕಿನಲ್ಲಿ ಅಂದಿನಿAದ ಇಂದಿನವರೆಗೂ ಉತ್ತಮ ಫಲಿತಾಂಶ ಎಲ್ಲಾ ಶಿಕ್ಷಕರ ನೆರವಿನಿಂದ ನೀಡುತ್ತಿದ್ದೇವೆ, ಆರಂಭದ ದಿನಗಳಲ್ಲಿ ಮಾಸಿಕ 400 ರೂಗಳಿಗೆ ಶಿಕ್ಷಕ ವೃತ್ತಿ ಆರಂಭಿಸಿದ್ದೆವು.

ಗುರೂಜಿಯವರು ಶಿಕ್ಷಕರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆಧ್ಯಾತ್ಮಿಕ ಚಿಂತನೆ, ಸಂಸ್ಕಾರಯುತ ಬೋಧನೆಗೆ ಗಮನ ನೀಡಬೇಕೆ ಹೊರತು ಮಾಸಿಕ ಸಂಬಳಕ್ಕೆ ಆದ್ಯತೆ ನೀಡಬಾರದು ಎಂದು ಆ ದಿನ ಹೇಳಿದ ಮಾತು ನೆನೆದು ದುಃಖ ತಪ್ತರಾದರು.
ಶ್ರೀ ಮರುಳಸಿದ್ದ ಸ್ವಾಮಿ. ಮುಖ್ಯ ಶಿಕ್ಷಕರು, ಶ್ರೀದೀನದಯಾಳು ಹಿರಿಯ ಪ್ರಾಥಮಿಕ ಪಾಠಶಾಲೆ. ತಿಪಟೂರು.