Thursday, 12th December 2024

ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಶಿಕ್ಷಣ ಹಾಗೂ ಆರೋಗ್ಯ ದೊರೆಯಬೇಕು

ತಿಪಟೂರು: ದೇಶದಲ್ಲಿ ಜೀವಿಸುವ ಎಲ್ಲಾ ಪ್ರಜೆಗಳಿಗೂ ಉಚಿತವಾಗಿ ಶಿಕ್ಷಣ ಹಾಗೂ ಆರೋಗ್ಯ ದೊರೆಯಬೇಕು ಜೊತೆಯಲ್ಲಿ ಎಲ್ಲಾ ವ್ಯಕ್ತಿಗಳು ಪ್ರತಿ ನಿತ್ಯ ಯೋಗಾಭ್ಯಾಸವನ್ನು ಮಾಡಿದಾಗ ಸಧೃಡ ವಾದ ದೇಹ ಪರಿಶುದ್ದವಾದ ಮನಸ್ಸನ್ನು ಹೊಂದಬಹುದು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಅ.ರಾ. ರಾಮಸ್ವಾಮಿಅಣ್ಣ ನವರು ತಿಳಿಸಿದರು.

ನಗರದ ಸೀತಾರಾಮಯ್ಯ ಕಲ್ಯಾಣ ಮಂದಿರದಲ್ಲಿ ಆಯೋಜನೆ ಮಾಡಿದ್ದ ಯೋಗಬಂಧುಗಳಿಗೆ ಮಾತೃ ಭೋಜನ ಕರ‍್ಯಕ್ರಮ ಹಾಗೂ ಕ್ಷೇತ್ರ ದರ್ಶನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಮನುಷ್ಯನ ಆರೋಗ್ಯವು ಸದಾ ಲವಲವಿಕೆಯಿಂದ ಕೊಡಿದ್ದರೆ ಮಾತ್ರ ಆಧ್ಯಾತ್ಮದತ್ತ ಒಲಿಯಲು ಸಾದ್ಯವಾಗುತ್ತದೆ ಅದರಂತೆ ಮಾನವನ ಬುದ್ದಿ ಶಕ್ತಿಯು ಬೆಳವಣಿಗೆ ಹೊಂದಲು ಜ್ಞಾನದ ಅವಶ್ಯಕತೆ ಅತಿ ಮುಖ್ಯವಾಗಿರುತ್ತದೆ ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯವು ಸಿಕ್ಕಾಗ ಭವ್ಯ ಭಾರತ ದೇಶವು ವಿಶ್ವಮಟ್ಟದಲ್ಲಿ ಝೇಂಕಾರವಾಗಿ ವಿಜೃಂಬಿಸಲು ಸಾಧ್ಯವಾಗುತ್ತದೆ ಹಾಗೂ ಪ್ರತಿಯೊಬ್ಬ ಮಾನವನು ಪ್ರತಿನಿತ್ಯ ಯೋಗಾಭ್ಯಾಸ, ಏಕಾತ್ಮಕ ಸ್ತೋತ್ರ, ಅಮೃತ ವಚನ, ಪಂಚಾಗ ಪಠಣ, ಅಗ್ನಿಹೋತ್ರಗಳನ್ನು ಪ್ರತಿಯೋಬ್ಬರ ಮನೆ-ಮನಗಳಲ್ಲಿ ಮಾಡುತ್ತಾ ಬರಬೇಕು ನಂತರ ನಮ್ಮದೇ ಆದ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ಸನಾತನ ಧರ್ಮ ವಿಶೇಷಗಳ ಬಗ್ಗೆ ಪಠಣದಿಂದ ಕುಟುಂಬಗಳ ಸಾಮರಸ್ಯ ಋಷಿ ಸಂಸ್ಕೃತಿ ಉಳಿಯುತ್ತದೆ ಎಂದರು.

ಯೋಗ ಬಂಧುಗಳು ಹೊನ್ನವಳ್ಳಿ ಬಾಗವಾಳದ ಮುನಿಯಪ್ಪ ಆಲದಮರ, ಕಾಳಮ್ಮಬೆಟ್ಟ, ಪಟ್ರೇಹಳ್ಳಿ ಶಂಕರೇಶ್ವರ ದೇವಾಲಯ, ಲಕ್ಷಿö್ಮನಾರಯಣ ದೇವಾಲಯ, ಧಸರೀಘಟ್ಟದ ಚೌಡೇಶ್ವರಿ ದೇವಾಲಯಗಳಿಗೆ ಯೋಗ ಪ್ರವಾಸ ಕೈಗೊಂಡು ನಂತರ ತಾಲ್ಲೂಕಿನ ಸುಮಾರು ೨೦ ವಿವಿಧ ಯೋಗ ಶಾಖೆ ಗಳಿಂದ ತಯಾರಿಸಿ ತಂದಿದ್ದ ಆಹಾರ ಪಧಾರ್ಥಗಳನ್ನು ಒಂದೆಡೆ ಸೇರಿ ಮಾತೃ ಭೋಜನ ಕರ‍್ಯಕ್ರಮವನ್ನು ನಡೆಸಲಾಯಿತು.

ಯೋಗ ಶಿಬಿರದಲ್ಲಿ ಚನ್ನಬಸವಣ್ಣ, ಸಂತೋಷ್, ಹೇಮಂತ್, ಉಮೇಶ್, ಗೀರೀಶ್, ಬಸವರಾಜು, ಪ್ರೇಮಾ, ಲಿಂಗರಾಜು, ಮಂಜುಳ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೂರೂಕ್ಕ ಹೆಚ್ಚು ಯೋಗ ಬಂಧುಗಳು ಶಿಬಿರಾರ್ಥಿಗಳು ಭಾಗವಹಿಸಿದ್ದರು.