Friday, 22nd November 2024

ವಿಧಾನಸಭಾ ಚುನಾವಣೆ ಫಲಿತಾಂಶದತ್ತ ಎಲ್ಲರ ಕಣ್ಣು!

ಚಿಕ್ಕನಾಯಕನಹಳ್ಳಿ : ಮೇ ೧೩ ರಂದು ಚುನಾವಣೆ ಫಲಿತಾಂಶ ಪ್ರಕಟಣೆಗೊಳ್ಳಲಿರುವ ಹಿನ್ನಲೆಯಲ್ಲಿ ರಾಜಕಾರಣದಲ್ಲಿ ಆತಂಕ ಹಾಗು ಕುತೂಹಲವನ್ನು ಸೃಷ್ಟಿ ಮಾಡಿದೆ. ಕ್ಷೇತ್ರದ ತುಂಬಾ ಫಲಿತಾಂಶದ ಕುರಿತಾದ ಮಾತುಕಥೆಗಳು ಕೇಳಿ ಬರುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ನಡೆದ ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳು ಹಾಗು ಅವರ ಬೆಂಬಲಿಗರು ತಮಗೆ ಆಗಬಹುದಾದ ಲಾಭ-ನಷ್ಟಗಳ ವಿಚಾರ ನಡೆಸಿದ್ದಾರೆ. ಕೆಲ ಕ್ಷೇತ್ರ ದಲ್ಲಿ ನಡೆದ ಮತದಾನದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅಂದಾಜು ಲೆಕ್ಕಚಾರ ಈಗಾಗಲೇ ಲಭಿಸಿದೆ. ಗೆಲುವಿನ ಸಾಧ್ಯತೆ ಹೆಚ್ಚಾಗಿರುವ ಅಭ್ಯರ್ಥಿಗಳ ಬೆಂಬಲಿಗರು ಸಂಭ್ರಮದಿoದ ತೇಲಾಡುತ್ತಿದ್ದರೆ, ಗೆಲುವಿನ ಸಾಧ್ಯತೆ ಕಡಿಮೆಯಿರುವ ಅಭ್ಯರ್ಥಿಗಳು ಪವಾಡದ ನಿರೀಕ್ಷೆಯಲ್ಲಿದ್ದಾರೆ.

ಚುನಾವಣೆ ಆಯೋಗದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಬಹುತೇಕ ಮತದಾರನಿಗೆ ೫೦೦ ರಿಂದ ೧೦೦೦ ರೂ ಹಂಚಲಾಗಿದೆ. ಜೆಡಿಎಸ್, ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕ್ಷೇತ್ರದಲ್ಲಿನ ಒಂದಿಷ್ಟು ಮತದಾರರಿಗೆ ಹಣ ಹಂಚಿದ್ದು ಮೂವ ರಿಂದಲೂ ಹಣ ಪಡೆದ ಮತದಾರ ಯಾರಿಗೆ ಮತ ನೀಡಿದ್ದಾನೆಂಬ ಲೆಕ್ಕಚಾರ ಬೆಂಬಲಿಗರಿಗೆ ತಲೆ ಕೊರೆಯುತ್ತಿದೆ. ಕೆಲವರು ಪ್ರಮಾಣಿಕವಾಗಿ ಮತಯಾಚನೆ ಮಾಡಿರುವ ಬಗ್ಗೆಯೂ ಸುದ್ದಿ ಇದೆ.

ಕಳೆದ ಬಾರಿ ಒಂದು ಪಕ್ಷದಲ್ಲಿದ್ದು ಈ ಬಾರಿ ಬೇರೆ ಪಕ್ಷದಿಂದ ಕಣಕ್ಕಿಳಿದವರು ಹೆಚ್ಚು ಆತಂಕದಲ್ಲಿದ್ದಾರೆ. ಈ ಬಾರಿ ಗೆಲ್ಲದೆ ಇದ್ದಲ್ಲಿ ಮುಂದಿನ ರಾಜಕೀಯ ನಡೆಗೆ ತೊಂದರೆ ಆಗುವುದೆಂಬ ಆತಂಕ ಇವರದು. ಗೆಲುವು ಸಾಧಿಸುವ ಅಭ್ಯರ್ಥಿಯಾಗಿ ಹೊಮ್ಮಿರುವ ಕೆಲವರ ನಿರೀಕ್ಷೆಗಳು ಸುಳ್ಳಾಗುವ ಸಾಧ್ಯತೇ ಅಲ್ಲಗಳೆಯುವಂತಿಲ್ಲ. ಇವರ ಗೆಲುವು ಸುಲಭವಲ್ಲ ಎಂಬ ಮಾತು ಗಳಿದ್ದರೂ ಕಡಿಮೆ ಅಂತರದಿAದ ಗೆಲ್ಲುವ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ.

ಕತ್ತಲೆಯಲ್ಲಿ ಕೊನೆ ಕ್ಷಣದ ಆಟ !
ಚುನಾವಣೆ ನಡೆಯುವ ಹಿಂದಿನ ದಿನದ ರಾತ್ರಿ ಪಟ್ಟಣದಲ್ಲಿ ಕರೆಂಟ್ ಇರಲಿಲ್ಲ. ಹಣ ಹಂಚುವ ಸಮಯದಲ್ಲಿ ತಮ್ಮ ಇರುವಿಕೆ ಯನ್ನು ಗುಪ್ತವಾಗಿಡಲೋ, ಹಂಚಲು ಭಂಗವಾಗಬಾರದೆ0ದೋ ಅಥವಾ ಯಾರಾದರೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಇಲ್ಲವೇ ಚುನಾವಣೆ ಆಯೋಗಕ್ಕೆ ನೀಡುತ್ತಾರೆಂಬ ಭಯದಲ್ಲಿ ಕರೆಂಟ್ ತಗೆಸಿರಬಹುದೆಂದು ಊಹಿಸಲಾಗುತ್ತಿದೆ.

ವಿದ್ಯುನ್ಮಾನ ಮತ ಪೆಟ್ಟಿಗೆಯಲ್ಲಿ ಭದ್ರವಾಗಿರುವ ಫಲಿತಾಂಶ ಪ್ರಕಟಗೊಳ್ಳಲು ಇನ್ನೂ ಕೆಲವೇ ಗಂಟೆಗಳು ಬಾಕಿ ಇದ್ದು, ಚುನಾ ವಣೆಯ ಸೋಲು ಗೆಲುವಿನ ಲೆಕ್ಕಚಾರ, ಆತಂಕ, ಕುತೂಹಲ ಪವಾಡಗಳ ನಿರೀಕ್ಷೆಗಳು ಮುಂದುವರೆಯಲಿದ್ದು ಫಲಿತಾಂಶದ ಅವಧಿ ಸಮೀಪಿಸುತ್ತಿದ್ದಂತೆಯೇ ಅಭ್ಯರ್ಥಿಗಳು ಹಾಗು ಬೆಂಬಲಿಗರ ಎದೆಬಡಿತ ಹೆಚ್ಚಾಗುವುದು ಖಚಿತ.