ಗುಬ್ಬಿ: ತಾಲೂಕಿನ ಎಂಎನ್ ಕೋಟೆ ಬನ್ನಿಗನಹಳ್ಳಿ ಗ್ರಾಮದಲ್ಲಿ ಮಾವಿನ ಮರಗಳು ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಹೋಗಿರುವ ಘಟನೆ ನಡೆದಿದೆ.
ಎಂಎನ್ ಕೋಟೆ ಗ್ರಾಮದ ವಾಸಿ ದೊಡ್ಡಮ್ಮ ಲೇಟ್ ಚಿಕ್ಕರಂಗಯ್ಯ ಎಂಬುವರ ಬನ್ನಿಗನಹಳ್ಳಿ ಸರ್ವೆ ನಂಬರ್ 13 /10 ರ ಜಮೀನಿನಲ್ಲಿ ಸುಮಾರು 40 ರಿಂದ 50 ಹೆಚ್ಚು ಬಾದಾಮಿ ಮಾವಿನ ಮರಗಳು ಆಕಸ್ಮಿಕ ಬೆಂಕಿ ತಗಲಿದ್ದರಿಂದ ಲಕ್ಷಾಂತರ ರೂ ಬೆಲೆಬಾಳುವ ಬೆಳೆ ಮತ್ತು ಮರಗಳು ನಾಶವಾಗಿದೆ.
ಪ್ರತಿ ವರ್ಷ ಬೆಳೆಯಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದೆವು. ಈ ಬಾರಿ ಬೆಂಕಿ ಕೆನ್ನಾಲಿಗೆ ಮರಗಳು ಸುಟ್ಟು ಹೋಗಿ ಬೆಳೆಯು ಸಹ ನಾಶವಾಗಿ ಸಂಕಷ್ಟಕ್ಕೆ ಸಿಲುಕಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದ್ದು, ಸಂಬಂಧಪಟ್ಟ ಇಲಾಖೆ ವತಿಯಿಂದ ಪರಿಹಾರ ಒದಗಿಸಿಕೊಟ್ಟರೆ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ರೈತ ಮಹಿಳೆ ದೊಡ್ಡಮ್ಮ ಅಳಲು ತೋಡಿಕೊಂಡರು.