Sunday, 15th December 2024

ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮ: ಸರ್ವರಿಗೂ ಒಳಿತಾಗಲೆಂದು ಪ್ರಾರ್ಥನೆ

ತುಮಕೂರು : ಗ್ರಾಮಾಂತರ ಹೆಗ್ಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬುಗುಡ ನಹಳ್ಳಿ ಗ್ರಾಮದಲ್ಲಿ ಶ್ರೀ ವಿದ್ಯಾಗಣಪತಿ ಯುವಕ ಮಿತ್ರರು ಆಯೋಜಿಸ ಲಾಗಿದ್ದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಶಾಸಕರಾದ ಡಿಸಿ ಗೌರಿಶಂಕರ್ ಅವರು ಭಾಗವಹಿಸಿ, ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ಸರ್ವರಿಗೂ ಒಳಿತಾಗಲೆಂದು ಪ್ರಾರ್ಥಿಸಿದರು.

ಶಾಸಕರು ಮಾತನಾಡಿಬುಗುಡನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಗು ಡನಹಳ್ಳಿ ಗ್ರಾಮದ ಎಸ್ ಸಿ ಕಾಲೋನಿಗೆ 20,00,000 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, 12,00,000 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, 65,00,000 ಲಕ್ಷ ವೆಚ್ಚದಲ್ಲಿ ಕರೆಕಲ್ ಪಾಳ್ಯ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, 30,00,000 ಲಕ್ಷ ವೆಚ್ಚದಲ್ಲಿ ವಾಟರ್ ಫಿಲ್ಟರ್ ಪಕ್ಕದಲ್ಲಿ ಹಾದು ಹೋಗುವ ಸಿಸಿ ರಸ್ತೆ ನಿರ್ಮಾಣ, ಹೊಸ ಬಡಾವಣೆ ರಸ್ತೆ ಅಭಿವೃದ್ಧಿಗೆ ಈಗಾಗಲೇ 15,00,000 ಲಕ್ಷ ರೂಗಳು ಸ್ಯಾಂಕ್ಷನ್ ಆಗಿದ್ದು, ಲಕ್ಷ್ಮಿ ದೇವರ ದೇವಾಲಯದ ಗರ್ಭಗುಡಿ ಅಭಿವೃದ್ಧಿಗೆ ವೈಯಕ್ತಿಕವಾಗಿ 6,00,000 ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿ ಈಗಾಗಲೇ 2,00,000 ಲಕ್ಷ ರೂಗಳನ್ನು ನೀಡಲಾಗಿದೆ.

ಕಾಲೋನಿಯ ದುರ್ಗಾಂಬ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದ ವತಿ ಯಿಂದ 5,00,000ಲಕ್ಷ ರೂಗಳನ್ನು ಬಿಡುಗಡೆ ಮಾಡಿಸಿದ್ದು, ವೈಯಕ್ತಿಕವಾಗಿ 2,00,000 ಲಕ್ಷ ರೂಗಳನ್ನು ನೀಡಲಾಗಿದ್ದು, ಬಳ್ಳಾಪುರ ಗ್ರಾಮದಲ್ಲಿ 70,00,000 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, 12,00,000 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯು ನೀರಿನ ಘಟಕ ಸ್ಥಾಪನೆ, 12,00,000 ಲಕ್ಷ ವೆಚ್ಚದಲ್ಲಿ ಮನೆ ಮನೆಗೆ ನೆಲ್ಲಿ ಸಂಪರ್ಕ, ಪ್ರತಿ ಮನೆಗೆ ನಿರಂತರ ಜ್ಯೋತಿ ಸಂಪರ್ಕ, ಕೆರೆಗೆ ನೀರು ತುಂಬಿಸಲು 1,50,000 ಲಕ್ಷ ವೆಚ್ಚದಲ್ಲಿ ಮೋಟಾರ್ ಪಂಪ್ ವಿತರಣೆ, 50,00,000 ಲಕ್ಷ ವೆಚ್ಚದಲ್ಲಿ ಅಗಲಗುಂಟೆಯಿಂದ ಬಳ್ಳಾಪುರ ಗ್ರಾಮ ಸಂಪರ್ಕಿ ಸುವ ಡಾಂಬರೀಕರಣ ರಸ್ತೆ ನಿರ್ಮಾಣ, ಪೆರಮನಹಳ್ಳಿ ಗೇಟ್ ನಿಂದ ದೊಡ್ಡ ನಾರವಂಗಲ, ಮುದಿಗೆರೆ, ಅಗಲಗುಂಟೆ, ಬಳ್ಳಾಪುರ, ಹೆಬ್ಬಾಕ ಕ್ರಾಸ್, ಚಿಕ್ಕಬೆಳ್ಳಾವಿ ಹಾಗೂ ಬೆಳ್ಳಾವಿ ಕಾರ ಮಠದ ವರೆಗೂ 14,00,00,000 ಕೋಟಿ ರೂಗಳ ವೆಚ್ಚದಲ್ಲಿ ಡಾಂಬರೀ ಕರಣ ರಸ್ತೆ ನಿರ್ಮಾಣ, ರಂಗನಾಯಕನ ಪಾಳ್ಯ ಗ್ರಾಮದಲ್ಲಿ 50,00,000 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗೆ ಒಂದು ಬೋರ್ವೆಲ್ ಕೊರೆಸಿಕೊಡಲಾಗಿದ್ದು, 8,00,000 ಲಕ್ಷದಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ ನಿರ್ಮಾಣ, ಅಂಗನವಾಡಿ ಕಟ್ಟಡ ದುರಸ್ತಿ ಕಾಮಗಾರಿಗೆ 2,00,000 ಲಕ್ಷ, ಬಳ್ಳಾಪುರ ಗ್ರಾಮದ ಅಂಗನವಾಡಿ ದುರಸ್ತಿ ಕಾಮಗಾರಿಗೆ 2,00,000 ಲಕ್ಷ, ಅಗಲಗುಂಟೆ ಗ್ರಾಮದಲ್ಲಿ 12,00,000 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, 3,60,000 15,00,000 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿದ್ದು, ಮುದಿಗೆರೆ ಗ್ರಾಮದಲ್ಲಿ 50,00,000ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, 12,00,000 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, 30,00,000 ಲಕ್ಷ ವೆಚ್ಚದಲ್ಲಿ ಬೆತ್ತಲೂರು ಕ್ರಾಸ್ನಿಂದ ಒಕ್ಕೋಡಿ ಕ್ರಾಸ್ ಮೂಲಕ ಮುದಿಗೆರೆ ಸಂಪರ್ಕಿಸುವ ರಸ್ತೆ ಮರು ಡಾಂಬರೀಕರಣ ಕಾಮಗಾರಿ, 24,00,000 ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣ, ಮುದಿಗೆರೆ ಗ್ರಾಮದ ಮೂರು ದೇವಾಲಯಗಳ ಅಭಿವೃದ್ಧಿಗೆ ವೈಯಕ್ತಿಕವಾಗಿ 6,00,000 ಲಕ್ಷ ರೂಗಳ ಧನಸಹಾಯ, 25,00,000 ಲಕ್ಷ ವೆಚ್ಚದಲ್ಲಿ ಬೆತ್ತಲೂರು ಗ್ರಾಮದಲ್ಲಿ ಸಿಸಿ ರಸ್ತೆ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ ಮಂಜೂರಾಗಿದ್ದು, ಹನುಮಂತನಗರದ ರಸ್ತೆ ಬಳಿ 10,00,000 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ನಿರ್ಮಾಣ, ಮರಳು ಸಿದ್ದೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಸರ್ಕಾರದ ವತಿಯಿಂದ 25,00,000 ಲಕ್ಷಗಳನ್ನು ಬಿಡುಗಡೆ ಮಾಡಿಸಿದ್ದು, ಹಾರೋನಹಳ್ಳಿ ಗ್ರಾಮದಲ್ಲಿ 35,00,000 ಲಕ್ಷ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮನೆಮನೆಗೆ ನೆಲ್ಲಿ ಸಂಪರ್ಕ ಕಾಮಗಾರಿ, ಹೊಸಹಳ್ಳಿಯಿಂದ ಹಾರೋನಹಳ್ಳಿ ಗ್ರಾಮದವರೆಗೂ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಸೇರಿದಂತೆ ಬುಗುಡನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಕೋಟ್ಯಾಂತರ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿಕೊಡುವದಾಗಿ ಭರವಸೆ ನೀಡಿ, ಗಣೇಶ ಮಹೋತ್ಸವ ಕಾರ್ಯ ಕ್ರಮಕ್ಕೆ ವೈಯಕ್ತಿಕವಾಗಿ 1,00,000 ಒಂದು ಲಕ್ಷ ರೂಗಳ ಧನ ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಹೆಗ್ಗೆರೆ ಜಿಲ್ಲಾ ಪಂಚಾಯತ್ ಉಸ್ತುವಾರಿಗಳಾದ ಹಾಲನೂರು ಅನಂತ್ ಕುಮಾರ್, ರವಿ ಕೀರ್ತಿ, ಕಾಂತರಾಜು ಉಪಸ್ಥಿತರಿದ್ದರು.