Sunday, 15th December 2024

ಸರ್ಕಾರದಿಂದ ಸವಲತ್ತುಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ತುರುವೇಕೆರೆ: ಸರ್ಕಾರದಿಂದ ಆಟೋ ಚಾಲಕರಿಗೆ ಸಿಗುವ ಸವಲತ್ತುಗಳನ್ನು ನಿಮಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

ತಾಲ್ಲೂಕಿನ ಲೈಸೆನ್ಸ್ ಇಲ್ಲದ ಆಟೋ ಚಾಲಕರಿಗೆ ಲೈಸೆನ್ಸ್ ಮತ್ತು ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಈಗ ನನ್ನ ಸ್ವಂತ ಖರ್ಚಿನಿಂದ 53 ಚಾಲಕರಿಗೆ ಲೈಸೆನ್ಸ್ ಮತ್ತು 80 ಚಾಲಕರಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ ನಿಮ್ಮ ಆಟೋಗಳಿಗೆ ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಿ ನಿಮ್ಮ ಕಷ್ಟಗಳ ಬಗ್ಗೆ ನನಗೆ ಅರಿವಿದೆ ನಿಮ್ಮ ಜೊತೆ ನಾನಿರುತ್ತೇನೆ ಎಂದು ಹೇಳಿ ನೀವೆಲ್ಲ ಜೀವನ ನೆಡೆಸಲಿಕ್ಕೆ ವೃತ್ತಿ ಮಾಡಿ ಕಷ್ಟ ಪಡುತ್ತಿರುವವರು ಉಳಿದ ವರಿಗೂ ಕೂಡ ಲೈಸೆನ್ಸ್ ಮಾಡಿಸಿ ಕೊಡಲಾಗುವುದು ನಿಮ್ಮ ಬಳಿ ಅಗತ್ಯ ಪರವಾನಗಿ ಮತ್ತು ಧಾಖಲೆ ಗಳನ್ನು ಹೊಂದಿ ಪೊಲೀಸರಿಂದ ಬೀಳುವ ಫೈನ್ ಗಳಿಂದ ದೂರವಿರಿ ಯಾವುದೇ ತರನಾದ ದಂಡವನ್ನು ಕಟ್ಟದ ರೀತಿಯಲ್ಲಿ ಅಗತ್ಯ ಧಾಖಲೆ ಇಟ್ಟುಕೊಳ್ಳಿ ಇನ್ಸೂರೆನ್ಸ್ ಅನ್ನು ಮಾಡಿಸಿಕೊಳ್ಳಿ. ನಿಮಗೆ ಸಿಗಬೇಕಾದ ಸೌಲಭ್ಯ ಸಿಗುವು ದಿಲ್ಲ ಚಾಲಕರಿಗೆ ನನ್ನ ಸ್ವಂತ ಹಣದಿಂದ ಗುಂಪು ವಿಮೆ ಮಾಡಿಸಲಾಗುವುದು ಇದರಿಂದ ನಿಮ್ಮ ಕುಟುಂಬದವರಿಗೆ ಅನುಕೂಲ ವಾಗಲಿದೆ. ಹಾಗೆಯೇ ಮೆಡಿಕಲ್ ವಿಮಾ ಸೌಲಭ್ಯವನ್ನು ಮಾಡಿಸಿ ಮಾಡಿಸಿ ಕೊಡಲಾಗುವುದು.

ಸರ್ಕಾರದಿಂದ ಮತ್ತು ನಿಗಮದಿಂದ ಬರುವ ಸವಲತ್ತುಗಳನ್ನು ತಲುಪಿಸಲಾಗುವುದು ಈಗ ಸರ್ಕಾರದಿಂದ ಎರಡು ಆಟೋ ಗಳನ್ನೂ ಕೊಡಲು ವ್ಯವಸ್ಥೆ ಮಾಡಿದ್ದೇನೆ ಎಂದು ಹೇಳಿ ಚಾಲಕರಿಗೆ ನಿವೇಶನ ಒದಗಿಸುವ ಬಗ್ಗೆ ಮಾತನಾಡಿ ನಾನು ಸುಳ್ಳು ಆಶ್ವಾಸನೆ ಕೊಡುವುದಿಲ್ಲ ನಿವೇಶನಗಳನ್ನುಸಾರ್ಕಾರದಿಂದ ಈಗ ಕೊಡಲು ಸಾಧ್ಯವಿಲ್ಲ ಮುಂದೆ ನೋಡೋಣ ಎಂದು ಹೇಳಿ ನಿಮ್ಮ ಜಯರಾಮಣ್ಣ ಒಲೆಯ ಕೆಲಸಕ್ಕೆಯಾವಾಗಲೂ ನಿಮ್ಮ ಜೊತೆಗಿರುತ್ತಾನೆ ಯಾವಾಗಲೂ ಪ್ರಾಮಾಣಿಕವಾಗಿರಿ ರಸ್ತೆ ನಿಯಮಗಳನ್ನು ಪಾಲಿಸಿ ತಪ್ಪು ಮಾಡಬೇಡಿ ಎಂದರು.

ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್. ಮುಖಂಡರಾದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಚಿದಾನಂದ್. ಸುರೇಶ .ಸುಬ್ಬಣ್ಣ. ನವೀನ್ ಬಾಬು. ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.