Sunday, 10th November 2024

ಅತ್ಯುನ್ನತ ಶ್ರೇಣಿ ಪಡೆದ ‌ಶಾಸ್ತ್ರೀಯ ಸಂಗೀತ ‌ವಿದ್ಯಾರ್ಥಿಗಳಿಗೆ ಅಭಿನಂದನೆ

ತುರುವೇಕೆರೆ: ಶ್ರೀ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಶಾಲೆಗೆ ಮತ್ತು ತಮ್ಮ ಪೋಷಕ ರಿಗೆ ಕೀರ್ತಿ ತಂದಿದ್ದಾರೆ.

2021-22 ನೇ  ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ  ಪಟ್ಟಣದಲ್ಲಿನ ಶ್ರೀ ಸರಸ್ವತಿ ಸಂಗೀತ ಶಾಲೆಯ ಸಂಸ್ಥಾಪಕರು ಮತ್ತು ಸಂಗೀತ ಗುರುಗಳಾದ ರಾಜ್ಯ ರಂಗ ಕಲರತ್ನ ಪ್ರಶಸ್ತಿ ಪುರಸ್ಕೃತ ರಾದ ವಿದ್ವಾನ್ ಶ್ರೀ ಎಂ ನಾಗರಾಜ್ ರವರ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಮನೀತ್ ಎಂ (91.5%). ದುಶಾಂತ್ ಗೌಡ ಎಸ್.ಜಿ.(91%). ಅಪೂರ್ವ ಎಸ್ ಎನ್(89.5%). ರೂಪರಾಣಿ ಎಚ್ (88.5%). ಎಂಬ ವಿದ್ಯಾರ್ಥಿ ಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಶಿಕ್ಷಕರು ಹಾಗೂ ಪೋಷಕರು ತಮ್ಮ ಸಂಗೀತ ಶಾಲೆಯ ಗುರುಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ.