Saturday, 14th December 2024

ಎಂ ಜಿ ಬಸವರಾಜು ಅವಿರೋಧ ಆಯ್ಕೆ

ಗುಬ್ಬಿ: ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಗಿ ಎಂ ಜಿ ಬಸವರಾಜು ಅವಿರೋಧ ಆಯ್ಕೆಯಾಗಿದ್ದಾರೆ.
ತಾಲೂಕಿನ ಕಡಬ ಹೋಬಳಿ ಪೆದ್ದನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ  19 ಸದಸ್ಯರು ಎಂ ಜಿ ಬಸವರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವುದರ ಮೂಲಕ ಸಂತಸ ವ್ಯಕ್ತಪಡಿಸಿ ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ್ ಮಾತನಾಡಿ, ಪಂಚಾಯತಿಯ ಸದಸ್ಯರೆಲ್ಲರೂ ಸೇರಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು  ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ಮೂಲಭೂತ ವಾಗಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸವನ್ನ ಮಾಡುತ್ತೇನೆ ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನಕ್ಕೆ 19 ಸದಸ್ಯರಲ್ಲಿ ಎಂ. ಜಿ ಬಸವರಾಜು ಅವರು ನಾಮಪತ್ರವನ್ನ ಸಲ್ಲಿಸಿದ್ದರು. ಹಾಗಾಗಿ ಪ್ರತಿಸ್ಪರ್ಧಿ ಯಾರು ನಾಮ ಪತ್ರ ಸಲ್ಲಿಸದೆ ಇದ್ದುದ್ದರಿಂದ ಎಂ ಜಿ ಬಸವರಾಜು ಅವರನ್ನು ಚುನಾವಣಾ ಅಧಿಕಾರಿ ತಹಶೀ ಲ್ದಾರ್ ಬಿ. ಆರತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಇದೆ ಸಂದರ್ಭದಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಸ್ಥಳದಲ್ಲಿ ಸ್ಥಳೀಯ ಮುಖಂಡರಾದ ಕಡಬ ಹೋಬಳಿ ರೈತ ಸಂಘದ ಅಧ್ಯಕ್ಷ ಗಂಗಪಟ್ಟಣ ನಟರಾಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಮಲಾ, ಎಸ್ ಡಿ ಎ ಸುಧಾಮಣಿ, ಸಿಬ್ಬಂದಿಗಳಾದ ಶಿವಶಂಕರ್, ಮಹಾದೇವಯ್ಯ, ವೆಂಕಟೇಗೌಡ, ಹಾಗೂ ಕಡಬ ಪೊಲೀಸ್ ಉಪ ಠಾಣಾಧಿಕಾರಿ ಉಮೇಶ್, ಕುಮಾರ್ ಎಲ್ಲಾ ಗ್ರಾ.ಪಂ ಸದಸ್ಯರು  ಹಾಜರಿದ್ದರು.