ತುಮಕೂರು: ಆಕಸ್ಮಿಕವಾಗಿ ಸಿಕ್ಕ ಮೊಬೈಲ್ ಅನ್ನು ಮಾಲೀಕರಿಗೆ ಹಿಂದಿರುಗಿಸಿ ಹೋಟೆಲ್ ಮಾಲೀಕರೊಬ್ಬರು ಮಾನವೀ ಯತೆ ಮೆರೆದಿದ್ದಾರೆ.
ಅನ್ ಲಿಮಿಟೆಡ್ ಮಳಿಗೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ರಂಗಯ್ಯ ಎಂಬುವವರು ಜೂ. 18 ರಂದು ಸಂಜೆ ಆಕಸ್ಮಿಕವಾಗಿ ಮೊಬೈಲ್ ಕಳೆದುಕೊಂಡಿದ್ದರು. ಈ ಮೊಬೈಲ್ ರಾಘವೇಂದ್ರ ಫುಡ್ ಕ್ಯಾಂಟೀನ್(ನೈಟ್ ಕ್ಯಾಂಟೀನ್) ಮಾಲೀಕ ರಾದ ಜಗದೀಶ್ ಅವರಿಗೆ ಸಿಕ್ಕಿತ್ತು. ವಾರಸುದಾರರನ್ನು ಸಂಪರ್ಕಿಸಿ (ಜೂ.19)ಭಾನುವಾರ ಮೊಬೈಲ್ ಅನ್ನು ವಾಪಾಸ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೊಬೈಲ್ ಪಡೆದು ಸೆಕ್ಯೂರಿಟಿ ರಂಗಯ್ಯ ಖುಷಿಯಾಗಿದ್ದಾರೆ. ಈ ವೇಳೆ ಕೃಷ್ಣ ಫುಡ್ ಕ್ಯಾಂಟೀನ್ ಮಹೇಂದ್ರ ಇದ್ದರು.