Sunday, 15th December 2024

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಿಲ್ಲ: ಇಕ್ಬಾಲ್ ಅಹಮದ್

ತುಮಕೂರು:ಪಕ್ಷಕ್ಕೆ  ದುಡಿದರೆ ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂಬುದಕ್ಕೆ ನನಗಿಂತ ಇನ್ನೊಂದು ಉದಾಹರಣೆಯಿಲ್ಲ ಎಂದು ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ತಿಳಿಸಿದರು.
ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ೨೦ ವರ್ಷಗಳಿಂದ ದುಡಿದ ನನಗೆ ಟಿಕೆಟ್ ದೊರೆಕಿರುವುದು. ಭವಿಷ್ಯದಲ್ಲಿ ಯುವಜನತೆ ಪಕ್ಷದ ಮೇಲೆ ಭರವಸೆ ಇಟ್ಟು ದುಡಿಯಲು ಪ್ರೇರಣೆಯಾಗಿದೆ ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅತಿ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ನಾಯಕರು ಭಿನ್ನಮತ ಮೆರೆತು ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ,ತುಮಕೂರು ನಗರವನ್ನು ನಿರುದ್ಯೋಗ ಮುಕ್ತ ನಗರವನ್ನಾಗಿಸುವುದು ನಮ್ಮ ಗುರಿಯಾಗಿದೆ. ಅಲ್ಲದೆ ಸ್ಮಾರ್ಟ್ಸಿಟಿ ಎಂಬುದಕ್ಕೆ ಅಪವಾದ ವಾಗಿರುವ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದು, ಅಲ್ಲದೆ ನಗರದ ಮಳೆನೀರು ಯಾವುದೇ ಅಡೆತಡೆ ಯಿಲ್ಲದೆ ನಗರಿಂದ ಆಚೆಗೆ ಹೋಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡಲಿದ್ದೇನೆ.ಶೀಘ್ರದಲ್ಲಿಯೇ ನಗರದ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು  ತಿಳಿಸಿದರು.
ಈ ವೇಳೆ ಮುಖಂಡ ಅಪ್ತಾಬ್ ಅಹಮದ್, ಪಾಲಿಕೆ ಸದಸ್ಯ ನಯಾಜ್ ಅಹಮದ್, ಜಿಲ್ಲಾ ಒಬಿಸಿ ಘಟಕದ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.