ತುಮಕೂರು: ಗ್ರಾಮಾಂತರ ಶಾಸಕ ಗೌರಿಶಂಕರ್ ಬುಧವಾರ ಹಮ್ಮಿಕೊಂಡಿದ್ದ ಜನತಾ ದರ್ಶನಕ್ಕೆ ಇಡೀ ತಾಲೂಕಿನಾದ್ಯಂತ ಜನಸಾಗರವೇ ಹರಿದು ಬಂದಿತ್ತು.
ಜನತಾ ದರ್ಶನ ನಡೆಸಿ, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ, ಸಾವಿರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ ವೈಯಕ್ತಿಕವಾಗಿ ಧನ ಸಹಾಯವನ್ನು ಮಾಡಿ ಶಾಸಕ ಮಾದರಿಯಾಗಿದ್ದಾರೆ.
ಆರೋಗ್ಯ, ಮದುವೆ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೫೦೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮನೆ ಕಟ್ಟಿ ಕೊಳ್ಳಲು ಶೀಟ್ ಸಿಮೆಂಟ್ ಸೇರಿದಂತೆ ಇನ್ನಿತರ ಸಮಸ್ಯೆ ಬಗೆಹರಿಸಿಕೊಳ್ಳಲು ಹತ್ತು ಲಕ್ಷ ರು.ಧನಸಹಾಯ ಮಾಡಿದರು.