Sunday, 15th December 2024

ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿರುವ ಜೆಸಿಎಂ: ಅರಗ ಜ್ಞಾನೇಂದ್ರ ಶ್ಲಾಘನೆ

ಚಿಕ್ಕನಾಯಕನಹಳ್ಳಿ : ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕ್ಷೇತ್ರದ ಅಭಿವೃದ್ದಿಗೆ ಹಠ ತೊಟ್ಟಂತೆ ದುಡಿಯುತ್ತಿದ್ದಾರೆ. ಇವರು ಯೋಜನೆಗಳಿಗೆ ಅನುದಾನವನ್ನು ಕೇಳಿದರೆ ಸರಕಾರ ನಿರಾಕರಿಸುವುದಿಲ್ಲ. ನೀರಾವರಿ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ದಿ ಕಾರ್ಯಗಳನ್ನು ಮಾಡಲು ಶ್ರಮಿಸುತ್ತಿದ್ದಾರೆ. ಸುಸಜ್ಜಿತವಾದ ಪೋಲೀಸ್ ಠಾಣೆಯ ನಿರ್ಮಾಣದ ಮೂಲಕ ಜನರ ಸುರಕ್ಷತೆಗೆ ಆದ್ಯತೆ ನೀಡಿರುವ ಜೆಸಿಎಂ ಅವರ ಕಾರ್ಯವೈಖರಿ ಮುಂದುವರಿಯಲಿ ಎಂದು ಗೃಹ ಮತ್ತು ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಆಶಿಸಿದರು.

ಪಟ್ಟಣ ಹಾಗು ಹುಳಿಯಾರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೋಲೀಸ್‌ಠಾಣೆ ಯನ್ನು ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ ಅವರೊಂದಿಗೆ ಜಂಟಿಯಾಗಿ ಬುಧವಾರ ಉದ್ಘಾಟಿಸಿದರು. ಹಳೆ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಸಿಪಿಐ ಕಚೇರಿ ಹಾಗು ಪೋಲೀಸ್‌ಠಾಣೆಯನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.

ದುಷ್ಟರನ್ನು ಹೆಡೆಮುರಿ ಕಟ್ಟಲು ನೂರು ಪೋಲೀಸ್ ಠಾಣೆಗಳ ನಿರ್ಮಾಣ, ಪೋಲೀಸರ ಕಾರ್ಯ ವೈಖರಿ ಹೆಚ್ಚಿಸಲು ತಂತ್ರ ಜ್ಞಾನ ಬಲಪಡಿಸುವುದು, ಅವರ ನೆಮ್ಮದಿಯ ಬದುಕಿಗೆ ಮನೆಗಳನ್ನು ಕೊಡುವ ಕೆಲಸವನ್ನು ಸರಕಾರ ಮಾಡುತ್ತಿದೆ.

ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಆರೋಪಿಗಳು ಪೋಲೀಸರಿಂದ ತಪ್ಪಿಸಿಕೊಳ್ಳಬಾರದು ಇದಕ್ಕಾಗಿ ವ್ಯವಸ್ಥಿತವಾಗಿ ಪೋಲಿಸರ ಶಕ್ತಿಯನ್ನು ನಮ್ಮ ಸರಕಾರ ಬಲಪಡಿಸುತ್ತಿದೆ ಎಂದು ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿ ಪೋಲೀಸ್ ಠಾಣೆಗೆ ಶಂಕು ಸ್ಥಾಪನೆ ನೆರವೇರಿಸಿದ್ದೆ ಈಗ ನಾನೇ ಉದ್ಘಾಟಿಸುತ್ತಿರುವುದು ಸಂತಸದ ವಿಚಾರ. ಪೋಲೀಸ್ ಠಾಣೆಗಳು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ಎಲ್ಲಾ ಕೆಲಸಗಳಿಗೂ ಸಮಯವಿದೆ. ಆದರೆ ಪೋಲಿಸ್ ಕೆಲಸಗಳಿಗೆ ನಿಗದಿತ ಸಮಯ ವಿಲ್ಲ. ಶೋಷಿತ, ಬಡವ, ಅನ್ಯಾಯಕ್ಕೆ ಒಳಗಾದವರಿಗೆ ಪೋಲೀಸರು ಸಮರ್ಪಕವಾಗಿ ಸ್ಪಂದಿಸಬೇಕೆ0ದು ಅಭಿಪ್ರಾಯಪಟ್ಟರು.

ಮೈಸೂರು- ಬಳ್ಳಾರಿ ರೈಲು ಮಾರ್ಗ ರಚನೆಗೆ ಮನವಿ
ಮೈಸೂರಿನ ಪಾಂಡವಪುರದಿ0ದ ಆರಂಭಿಸಿ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಹಿರಿಯೂರು ಮುಖಾಂತರ ಬಳ್ಳಾರಿ ಸೇರು ವಂತೆ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕೆಂದು ಸಚಿವರು ಶ್ರೀಕಾರ ಹಾಕಿದರು. ಗಣಿ ಭಾದಿತ ಪ್ರದೇಶಗಳ ಅಭಿವೃದ್ದಿಗೆ ೧೨೦೦ ಕೋಟಿ ಹಣ ನಮ್ಮ ಜಿಲ್ಲೆಗೆ ಬಂದಿದ್ದು, ಈ ಹಣವನ್ನು ಉಪಯೋಗಿಸಿ ಯೋಜನೆಗೆ ಬೇಕಾದ ಭೂಮಿ ಯನ್ನು ರೈತರಿಂದ ಪಡೆಯಬಹುದು ಎಂದು ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸಮಾರಂಭದಲ್ಲಿ ಪೋಲೀಸ್ ಅಧೀಕ್ಷಕ ರಾಹುಲ್‌ಕುಮಾರ್, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಉದೇಶ್, ಸಹಾಯಕ ಪೋಲೀಸ್ ಅಧಿಕ್ಷಕ ಸಿದ್ದಾರ್ಥ ಗೋಯಲ್, ಸಿಪಿಐ ನಿರ್ಮಲ, ತಹಸೀಲ್ದಾರ್ ತೇಜಸ್ವಿನಿ, ಪುರಸಭಾ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಲಕ್ಷಿö್ಮÃ ಹಾಗು ಇತರರಿದ್ದರು.